• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sagara Marikamba Jatre: ಸಾಗರ ಮಾರಿಕಾಂಬಾ ಜಾತ್ರೆ ಸಂಪನ್ನ, ಅಮ್ಮನ ದರ್ಶನ ಪಡೆದು ಕೃತಾರ್ಥರಾದ ಭಕ್ತರು

Sagara Marikamba Jatre: ಸಾಗರ ಮಾರಿಕಾಂಬಾ ಜಾತ್ರೆ ಸಂಪನ್ನ, ಅಮ್ಮನ ದರ್ಶನ ಪಡೆದು ಕೃತಾರ್ಥರಾದ ಭಕ್ತರು

X
ಸಾಗರ ಮಾರಿಕಾಂಬೆ ದೇವಿ

"ಸಾಗರ ಮಾರಿಕಾಂಬೆ ದೇವಿ"

ಮಲೆನಾಡು ಸಾಗರದಲ್ಲಿ ನಡೆಯುವ ಈ ಜಾತ್ರೆ ಸ್ಥಳೀಯರಿಗೆ ಮನರಂಜನೆಯ ಬುತ್ತಿಯನ್ನೇ ಉಣಬಡಿಸಿದೆ. ತೊಟ್ಟಿಲು, ಬ್ರೇಕ್ ಡಾನ್ಸ್ ಇನ್ನೂ ಮುಂತಾದ ಮನರಂಜನಾ ಆಟಗಳ ಜೊತೆ ವಿಧವಿಧದ ತಿನಿಸುಗಳನ್ನು ಸವಿದು ಜನತೆ ಖುಷಿಪಟ್ಟಿದ್ದಾರೆ.

  • News18 Kannada
  • 5-MIN READ
  • Last Updated :
  • Shimoga, India
  • Share this:

    ಶಿವಮೊಗ್ಗ: ಸಾಗರದ ಶ್ರೀ ಮಾರಿಕಾಂಬ ದೇವಿ ಜಾತ್ರೆ (Marikamba Jatra)  ಅದ್ದೂರಿಯಾಗಿ ಸಂಪನ್ನಗೊಂಡಿದೆ. ಕಳೆದ 9 ದಿನಗಳಿಂದ ವಿಜೃಂಭಣೆಯಿಂದ ನಡೆದ ಮಾರಿಕಾಂಬೆ ಜಾತ್ರೆಯ ಮುಕ್ತಾಯದ ನಂತರ ತಡರಾತ್ರಿ ತಾಯಿ ಮಾರಿಕಾಂಬೆಗೆ (Sagara Marikamba Jatre) ವನ ಪ್ರವೇಶ ಮಾಡಿಸಲಾಯಿತು. ಸಾಗರದ ಮುಖ್ಯ ರಸ್ತೆಗಳಲ್ಲಿ (Sagara Jatre)  ಮಾರಿಕಾಂಬೆಯ ರಾಜಬೀದಿ ಉತ್ಸವ ನಡೆಸಲು ತಯಾರಿ ನಡೆಸಲಾಯಿತು.


    ಕಳೆದ 9 ದಿನಗಳಿಂದ ಸಾಗರದಲ್ಲಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯ ರಂಗು ಎದ್ದು ಕಾಣುತ್ತಿತ್ತು. ಸಾಗರದಲ್ಲಿ ಎಲ್ಲಿ ನೋಡಿದರೂ, ಜಾತ್ರೆಯ ಕಳೆ ಕಂಡುಬರುತ್ತಿತ್ತು. ಸದ್ಭಕ್ತರು ಭಕ್ತಿಯ ಪರಾಕಾಷ್ಟೆಯಲ್ಲಿ ತೇಲಿ ಆ ಮಹಾತಾಯಿಗೆ ಜೈಘೋಷ ಕೂಗಿದರು. 9 ದಿನದ ಜಾತ್ರೆ ಅವಧಿಯಲ್ಲಿ ತಾಯಿಯು ಒಂದು ದಿನ ತವರು ಮನೆಯಲ್ಲಿ, 8 ದಿನ ಗಂಡನ ಮನೆಯಲ್ಲಿ ದರ್ಶನ ನೀಡಿ ಭಕ್ತರನ್ನು ಹರಸಿದ್ದಾಳೆ.


    ದೇವಿಯನ್ನು ಕಣ್ತುಂಬಿಕೊಳ್ಳಲು, ಆಕೆಯ ಆಶೀರ್ವಾದ ಪಡೆಯಲು ನಿತ್ಯ ಸಾವಿರಾರು ಭಕ್ತರು ಆಗಮಿಸಿ ಕೃತಾರ್ಥರಾಗಗಿದ್ದಾರೆ.


    ಇದನ್ನೂ ಓದಿ: Sagara Marikamba Jatre: ಸಾಗರ ಮಾರಿಕಾಂಬಾ ಜಾತ್ರೆ ಆರಂಭ, ದೇವಿ ದರ್ಶನ ಮಾಡಿ ಪುನೀತರಾಗಿ


    ಅಮ್ಮನವರ ವನ ಪ್ರವೇಶಕ್ಕಾಗಿ ಡೊಳ್ಳು, ವೀರಗಾಸೆ, ತಮಟೆ, ಕೀಲು ಬೊಂಬೆ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ರಾಜಬೀದಿ ಉತ್ಸವದಲ್ಲಿ ಪಾಲ್ಗೊಳ್ಳಲು ಸಜ್ಜಾಗಿವೆ.




    ಮಲೆನಾಡು ಸಾಗರದಲ್ಲಿ ನಡೆಯುವ ಈ ಜಾತ್ರೆ ಸ್ಥಳೀಯರಿಗೆ ಮನರಂಜನೆಯ ಬುತ್ತಿಯನ್ನೇ ಉಣಬಡಿಸಿದೆ. ತೊಟ್ಟಿಲು, ಬ್ರೇಕ್ ಡಾನ್ಸ್ ಇನ್ನೂ ಮುಂತಾದ ಮನರಂಜನಾ ಆಟಗಳ ಜೊತೆ ವಿಧವಿಧದ ತಿನಿಸುಗಳನ್ನು ಸವಿದು ಜನತೆ ಖುಷಿಪಟ್ಟಿದ್ದಾರೆ.


    ಇದನ್ನೂ ಓದಿ: Shivamogga Airport: 660 ಎಕರೆಯ ಶಿವಮೊಗ್ಗ ಏರ್​ಪೋರ್ಟ್​ ಹೀಗಿದೆ ನೋಡಿ


    ಒಟ್ಟಿನಲ್ಲಿ, ಮಲೆನಾಡಿನ ಸಾಗರದ ಶ್ರೀ ಮಾರಿಕಾಂಬ ದೇವಿ ಜಾತ್ರೆ ಪ್ರತಿ 2 ವರ್ಷಕ್ಕೊಮ್ಮೆ ನಡೆಸಲಾಗುತ್ತಿದ್ದು ಜಾತ್ರೆಗೆ ತೆರೆಬಿದ್ದಿದೆ. ನಾಡಿನ ಎಲ್ಲೆಡೆಯಿಂದ ಭಕ್ತ ಸಾಗರವೇ ಹರಿದು ಬಂದು ಈ ಜಾತ್ರೆ ಯಶಸ್ವಿಯಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: