ಶಿವಮೊಗ್ಗ: ಆಪರೇಷನ್ ಅಂದ್ರೇನೇ ಸಾಕು, ಒಂಥರಾ ಕಳವಳ, ಆತಂಕ, ಒಳ್ಳೇ ಡಾಕ್ಟ್ರು ಆಪರೇಷನ್ ಮಾಡ್ತಾರೆ ಅನ್ನೋ ಪ್ರಾರ್ಥನೆ. ಆದ್ರೆ ಈಗ ಮನುಷ್ಯರಲ್ಲ, ರೋಬೋಟ್ ಆಪರೇಷನ್ ಮಾಡುತ್ತೆ. ಇದ್ಯಾವ್ದೋ ಫಾರೆನ್ ಸುದ್ದಿ ಅಲ್ಲ ಕಣ್ರೀ, ನಮ್ಮ ಶಿವಮೊಗ್ಗದ (Robot Operation In Shivamogga) ಖಾಸಗಿ ಆಸ್ಪತ್ರೆಯೊಂದರಲ್ಲೇ (Private Hospital) ರೋಬೋಟ್ ಆಪರೇಷನ್ (Robot Operation)ಮಾಡುತ್ತೆ!
ಮಲೆನಾಡು ಭಾಗದಲ್ಲಿ ಇದೇ ಮೊದಲು!
ಶಿವಮೊಗ್ಗದ NU ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ವರ್ಸಿಯಸ್ ರೋಬೋಟಿಕ್ ಆಪರೇಷನ್ ಸಿಸ್ಟಮ್ ಜಾರಿಗೆ ತರಲಾಗಿದೆ. ಮಲೆನಾಡು ಭಾಗದ ಮೊದಲ ರೋಬೋಟಿಕ್ ಆಪರೇಷನ್ ಸಿಸ್ಟಮ್ ಅನ್ನೋ ಹೆಗ್ಗಳಿಕೆಯೂ ಇದು ಪಾತ್ರವಾಗಿದೆ.
ಇದನ್ನೂ ಓದಿ: Shivamogga: ಕರುನಾಡ ಆನೆಗಳ ಕಾಶಿಯಾತ್ರೆ! 12 ಚಕ್ರಗಳ ಲಾರಿಯಲ್ಲಿ 3 ಸಾವಿರ ಕಿ ಮೀ ಪಯಣ
ಶಸ್ತ್ರಚಿಕಿತ್ಸೆ ಮಾಡುವಾಗ ಹೆಚ್ಚು ಗಾಯ ಆಗಲ್ಲ!
ಈ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್ ಶಸ್ತ್ರಚಿಕಿತ್ಸೆ ನಡೆಸುವಾಗ ಹೆಚ್ಚು ಗಾಯ ಮಾಡಲ್ವಂತೆ. ಈ ಮುನ್ನ ರೋಬೋಟ್ ಆಪರೇಷನ್ ಪಡೆಯೋಕೆ ಬೆಂಗಳೂರಿಗೋ ಮಂಗಳೂರಿಗೋ ಹೋಗ್ಬೇಕಿತ್ತು. ಆದ್ರೆ ಇನ್ಮೇಲೆ ಮಲೆನಾಡು ಶಿವಮೊಗ್ಗದಲ್ಲೇ ರೋಬೋಟ್ ಚಿಕಿತ್ಸೆ ಸಿಗುತ್ತೆ ಅನ್ನೋದು ಸಂತಸಕ್ಕೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ