ಮಲೆನಾಡ ಮಣ್ಣಿನ ನೈಸರ್ಗಿಕ ಆಹಾರ ರಾ ಗ್ರಾನ್ಯುಲ್ಸ್ ಮೂಲಕ ನಿಮ್ಮ ಮನೆ ಬಾಗಿಲಿಗೆ: ಮಲೆನಾಡ ಯುವಕರು ಸೃಷ್ಟಿಸಿದ ಹೊಸಾ ಮಾರುಕಟ್ಟೆ

ಕೆಂಪು ಅಕ್ಕಿ, ಕಾಡಿನ ಜೇನುತುಪ್ಪ, ಆರೋಗ್ಯ ವರ್ಧಕ ಪಾನೀಯಗಳು, ಬೆಲ್ಲ, ಕೊಬ್ಬರಿ ಎಣ್ಣೆ, ಉಪ್ಪಿನಕಾಯಿ, ಸಾಬೂನು, ಮಕ್ಕಳಿಗೆ ಹಚ್ಚಬಹುದಾದ ಎಣ್ಣೆ ಹಾಗೂ ವಿವಿಧ ಮಸಾಲಾ ಪದಾರ್ಥಗಳು ಇಲ್ಲಿ ಮಾರಾಟಕ್ಕಿವೆ.

ರಾ ಗ್ರಾನ್ಯುಲ್ಸ್​

ರಾ ಗ್ರಾನ್ಯುಲ್ಸ್​

 • Share this:
  ಶಿವಮೊಗ್ಗ:  ನೈಸರ್ಗಿಕ ಪದಾರ್ಥಗಳ ಮಾರುಕಟ್ಟೆ ಈಗ ಮೊದಲಿನಂತಿಲ್ಲ ದೊಡ್ಡ, ದೊಡ್ಡ ಕಂಪೆನಿಗಳು ಇದರಲ್ಲಿ ಆಗಲೇ ಪ್ರವೇಶಿಸಿ ನಾ ಮುಂದು, ತಾ ಮುಂದು ಎಂದು ಮುನ್ನುಗ್ಗ ತೊಡಗಿವೆ. ಏನೇ ಕ್ರಾಂತಿ ಆದರೂ ಇಲ್ಲಿ ನಲುಗುವುದು ರೈತ ಮಾತ್ರ. ನಮ್ಮ ರೈತನಿಗೆ ಮೋಸವಾಗಬಾರದು ಎಂದು ಯೋಚಿಸಿದ ಇಬ್ಬರು ಯುವಕರು ಲಾಕ್​ಡೌನ್​ ಸಮಯವನ್ನು ಹಾಳು ಮಾಡಲಿಲ್ಲ, ಬದಲಿಗೆ ಬಂಡವಾಳ ಮಾಡಿಕೊಂಡು ರೈತರಿಗೆ ನೆರವಾಗುವ ಕೆಲಸಕ್ಕೆ ಕೈ ಹಾಕಿ ಯಶಸ್ಸಿನತ್ತ ಮುನ್ನುಗ್ಗುತ್ತಿದ್ದಾರೆ.

  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಂಸಗಾರು ಗ್ರಾಮದ ಕಾರ್ತಿಕ್​ ಹಾಗೂ ತಲವಾಟ ಗ್ರಾಮದ ಪ್ರಶಾಂತ್ ಇವರೇ ಆ ಮಾದರಿ ಯುವಕರು. ರಾ ಗ್ರಾನ್ಯುಲ್ಸ್​  ಎನ್ನುವ ಸ್ಟ್ರಾಟ್​ಅಪ್​ ಪ್ರಾರಂಭಿಸಿ, ಆನ್​ಲೈನ್​ ಮೂಲಕ ತನ್ನ ಗ್ರಾಹಕರನ್ನು ತಲುಪುತ್ತಿದ್ದಾರೆ.  ಪಾರದರ್ಶಕ ಮಾರುಕಟ್ಟೆಯೊಂದನ್ನು ಹುಟ್ಟುಹಾಕಿ ರೈತರಿಗೆ ನ್ಯಾಯಯುತ ಲಾಭಾಂಶ ದೊರಕಿಸಿಕೊಡುವ ಪ್ರಯತ್ನವೇ ಈ ರಾ ಗ್ರಾನ್ಯುಲ್ಸ್​.

  ಏನಿದು ರಾ ಗ್ರಾನ್ಯುಲ್ಸ್​?

  ಪಾರಂಪರಿಕ ಶೈಲಿಯ, ನಮ್ಮ ಹಿಂದಿನ ತಲೆಮಾರನ್ನು ಆರೋಗ್ಯವಂತರನ್ನಾಗಿ ಗಟ್ಟಿಮುಟ್ಟಾಗಿ ಇಟ್ಟಿದ್ದ, ಸಹಜವಾಗಿ ಬೆಳೆಯಲ್ಪಡುವ ಅನೇಕ ಆಹಾರಗಳು ಕಣ್ಣ ಮುಂದಿದ್ದರೂ ’ಹಿತ್ತಿಲ ಗಿಡ ಮದ್ದಲ್ಲ’ ಎನ್ನುವಂತಹ ತಾತ್ಸಾರವಿತ್ತು. ಯಾವಾಗ ಆರೋಗ್ಯ ಎನ್ನುವುದು ಮನುಷ್ಯನಿಗೆ ಕೈಕೊಡುತ್ತಾ ಬಂದಿತೊ, ಎಚ್ಚೆತ್ತುಕೊಂಡ ಮನುಷ್ಯ ಪಾರಂಪರಿಕಾ, ಸಾವಯುವ, ರಾಸಾಯನಿಕ ಮುಕ್ತ ಆಹಾರದ ಕಡೆಗೆ ಮುಖಮಾಡಿದ್ದಾನೆ.

  ಈ ಮಲೆನಾಡಿನ ಕೃಷಿಕರಿಬ್ಬರು ರೈತರಿಂದಲೇ ನೇರವಾಗಿ ಉತ್ಪನ್ನ ಖರೀದಿಸಿ ಗ್ರಾಹಕರಿಗೆ ತಲುಪಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಕೊರೊನಾ ಕಾಲದಲ್ಲಿ ಮತ್ತಷ್ಟು ಪ್ರಚಲಿತಕ್ಕೆ ಬಂದ ಆನ್​ಲೈನ್​ ಮಾರುಕಟ್ಟೆಯನ್ನು ಬಳಸಿಕೊಳ್ಳುತ್ತಿದ್ದಾರೆ.

  ಆಹಾರ ಪದಾರ್ಥಗಳನ್ನು ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಬೆಲೆಗೆ ರೈತರಿಂದ ಕೊಂಡು, ರೈತರ ಹಿತವನ್ನೂ ಕಾಪಾಡುವ ದೃಷ್ಟಿಯಿಂದ, ಪಾರದರ್ಶಕ ವ್ಯವಸ್ಥೆ ಮೂಲಕ ವಹಿವಾಟು ನಡೆಸಬೇಕು, ರೈತರಿಗೆ ಯಾವುದೇ ನಷ್ಟವಿಲ್ಲದೆ, ಮಧ್ಯವರ್ತಿಗಳ ತೊಂದರೆಯೂ ಇಲ್ಲದೇ, ಗ್ರಾಹಕರಿಗೂ ಹೊರೆಯಾಗದಂತೆ ಮಾರುಕಟ್ಟೆ ಸೃಷ್ಟಿಸಬೇಕೆಂಬುದು ರಾ ಗ್ರಾನ್ಯುಲ್ಸ್ ಸಂಸ್ಥೆಯ ಮೂಲ ಉದ್ದೇಶವಾಗಿದ್ದು, ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಯುವಕರು ಇಂಥದ್ದೊಂದು ದೊಡ್ಡ ಪ್ರಯತ್ನಕ್ಕೆ ಕೈ ಹಾಕಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

  ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಿ, ಪರಿಷ್ಕರಿಸಿ, ಉತ್ತಮ ಗುಣಮಟ್ಟದ ಪ್ಯಾಕಿಂಗ್ ಮಾಡಿ, ವೆಬ್​ಸೈಟ್​ ಮತ್ತು ಇತರೇ ಆನ್​ಲೈನ್​ ಮಾರುಕಟ್ಟೆಯ ಮುಖಾಂತರ ಜನತೆಗೆ ತಲುಪಿಸುವ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಮಲೆನಾಡಿನಲ್ಲೇ ಆರಂಭವಾಗಿರುವ ಸ್ಟಾರ್ಟ್​ಅಪ್​ನ ಮುಖ್ಯ ಉದ್ದೇಶವೇ ಸ್ವಾಭಾವಿಕ ಆಹಾರ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಬೇಕು ಎನ್ನುವದು.  ಆಹಾರ ಪದಾರ್ಥಗಳು ಹೆಚ್ಚು ದಿನ ಬಾಳಿಕೆ ಬರಬೇಕು ಎನ್ನುವ ಕಾರಣಕ್ಕೆ  ಯಾವುದೇ ರಾಸಾಯನಿಕಗಳಿಲ್ಲದೇ ಸಹಜ ಪದ್ಧತಿ ಅನುಸರಿಸುವ ಕಾರಣ ಉತ್ಪಾದನಾ ವೆಚ್ಚ ಕೊಂಚ ಹೆಚ್ಚಾಗಿದೆ. ಮೇಲ್ನೋಟಕ್ಕೆ ದುಬಾರಿ ಎನ್ನಿಸುವಂತಿದೆ. ಆದರೆ ಗುಣಮಟ್ಟದಲ್ಲಿ ಸ್ವಲ್ಪವೂ ರಾಜಿ ಇಲ್ಲ. ಬೆಲೆಗೆ ಯೋಗ್ಯವಾದ ಆಹಾರವನ್ನೇ ಒದಗಿಸುತ್ತೇವೆ ಎಂಬುದು ಯುವಕರ ಮಾತು.

  ಇದನ್ನೂ ಓದಿ: SSLC Exam: ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಏನೆಲ್ಲಾ ತಯಾರಿ ಮಾಡಿಕೊಳ್ಬೇಕು ? ವ್ಯವಸ್ಥೆ ಹೇಗಿದೆ ? ಫುಲ್ ಡೀಟೆಲ್ಸ್..

  ಕೆಂಪು ಅಕ್ಕಿ, ಕಾಡಿನ ಜೇನುತುಪ್ಪ, ಆರೋಗ್ಯ ವರ್ಧಕ ಪಾನೀಯಗಳು, ಬೆಲ್ಲ, ಕೊಬ್ಬರಿ ಎಣ್ಣೆ, ಉಪ್ಪಿನಕಾಯಿ, ಸಾಬೂನು, ಮಕ್ಕಳಿಗೆ ಹಚ್ಚಬಹುದಾದ ಎಣ್ಣೆ ಹಾಗೂ ವಿವಿಧ ಮಸಾಲಾ ಪದಾರ್ಥಗಳು ಇಲ್ಲಿ ಮಾರಾಟಕ್ಕಿವೆ. ಆಸಕ್ತರು ರಾ ಗ್ರಾನ್ಯಲ್ಸ್ ಪ್ರೈವೇಟ್ ಲಿಮಿಟೆಡ್, ತಲವಾಟ (ಅಂಚೆ), ಸಾಗರ (ತಾಲ್ಲೂಕು), ಶಿವಮೊಗ್ಗ (ಜಿಲ್ಲೆ) – 577421 ವಿಳಾಸವನ್ನು ಸಂಪರ್ಕಿಸಬಹುದು. ಅಥವಾ  rawgranules.in  ವೆಬ್​ಸೈಟಿಗೆ ಭೇಟಿ ನೀಡಬಹುದು ಹಾಗೂ 73495 41756 / 9743502791 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: