ಶಿವಮೊಗ್ಗ: ಪುನೀತ್ ರಾಜ್ಕುಮಾರ್! (Power Star Puneeth Rajkumar) ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರೋ ನಮ್ಮ ಅಪ್ಪು (Appu) ಅವರ 23 ಅಡಿ ಪ್ರತಿಮೆ ಇಲ್ಲಿದೆ ನೋಡಿ. ನಮ್ಮ ಶಿವಮೊಗ್ಗ ಸಮೀಪದ ನಿದಿಗೆಯಲ್ಲಿ 23 ಅಡಿ ಪುನೀತ್ ರಾಜಕುಮಾರ್ ಪ್ರತಿಮೆ (Puneeth Rajkumar Statue) ಅರಳಿ ನಿಂತಿದೆ. ಬಳ್ಳಾರಿ ಉತ್ಸವಕ್ಕೆಂದು (Ballari Utsav) ಪುನೀತ್ ರಾಜ್ಕುಮಾರ್ ಅವರ ಭವ್ಯ ಪ್ರತಿಮೆಯನ್ನು ರಚಿಸಲಾಗಿದೆ.
ಈ ಹಿಂದೆ ಕೆಜಿಎಫ್ 2 ಸಿನಿಮಾ ಹಾಗೂ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಪ್ರತಿಮೆ ನಿರ್ಮಿಸಿದ ಜೀವನ್ ಅವರ ಕೈಚಳಕವೇ ಈ ಪ್ರತಿಮೆಯ ಹಿಂದಿದೆ.
ಇದನ್ನೂ ಓದಿ: Elephant Training: ಆನೆಗಳಿಗೆ ಪಾಠ ಹೇಳೋ ಶಾಲೆಯಿದು! ಊಟ, ಪಾಠ, ತುಂಟಾಟ ಎಲ್ಲ ಇಲ್ಲೇ
ಪ್ರತಿಮೆಯ ತೂಕವೇ 3 ಸಾವಿರ ಕೆಜಿ!
3 ತಿಂಗಳಲ್ಲಿ ಈ 23 ಅಡಿ ಎತ್ತರದ ಪ್ರತಿಮೆಯನ್ನು ರಚಿಸಲಾಗಿದ್ದು ಕಬ್ಬಿಣ, ಫೈಬರ್ಗಳನ್ನು ಮೂರ್ತಿ ನಿರ್ಮಿಸಲು ಬಳಸಲಾಗಿದೆ. ಬರೋಬ್ಬರಿ 3 ಸಾವಿರ ಕೆಜಿ ತೂಕದ ಪುನೀತ್ ರಾಜ್ಕುಮಾರ್ ಅವರ ಪ್ರತಿಮೆ ಇದಾಗಿದೆ. ಬಳ್ಳಾರಿ ಉತ್ಸವದಲ್ಲಿ ಅನಾವರಣಗೊಳ್ಳಲಿರೋ ಈ ಪ್ರತಿಮೆ ಶಿವಮೊಗ್ಗದಿಂದ 40 ಅಡಿ ಉದ್ದದ 18 ಚಕ್ರದ ಲಾರಿಯಲ್ಲಿ ರವಾನೆಯಾಗಲಿದೆ.
ಇದನ್ನೂ ಓದಿ: Uttara Kannada: 10 ಸಾವಿರದಲ್ಲೇ ರೋಪ್ ವೇ ನಿರ್ಮಿಸಿದ ಕೃಷಿಕ!
ಭವ್ಯ ಪ್ರತಿಮೆ ಅನಾವರಣಕ್ಕೆ ಸಜ್ಜು
ಒಟ್ಟಾರೆ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಿರೋ ಅಪ್ಪುವಿನ ಭವ್ಯ ಪ್ರತಿಮೆ ಬಳ್ಳಾರಿಯಲ್ಲಿ ಅನಾವರಣಗೊಳ್ಳಲಿದೆ. ಪ್ರತಿಮೆಯನ್ನ ವೀಕ್ಷಿಸಿ ಅಭಿಮಾನಿಗಳು ಪುಳಕಿತರಾಗೋಕೆ ರೆಡಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ