• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivamogga Airport: ಬೆಳಗಾವಿ, ಶಿವಮೊಗ್ಗದಲ್ಲಿ ಭರ್ಜರಿ ಊಟ! ಮೋದಿ ಕಾರ್ಯಕ್ರಮಕ್ಕೆ ಎಷ್ಟೇ ಜನ ಬಂದ್ರೂ ಊಟ ರೆಡಿ!

Shivamogga Airport: ಬೆಳಗಾವಿ, ಶಿವಮೊಗ್ಗದಲ್ಲಿ ಭರ್ಜರಿ ಊಟ! ಮೋದಿ ಕಾರ್ಯಕ್ರಮಕ್ಕೆ ಎಷ್ಟೇ ಜನ ಬಂದ್ರೂ ಊಟ ರೆಡಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಆಗಮಿಸಿದ ಸಾರ್ವಜನಿಕರಿಗೆ ಹಾಲುಗ್ಗಿ, ಬದನೆಕಾಯಿ, ಸಜ್ಜೆ ರೊಟ್ಟಿ, ಅನ್ನ ಸಾಂಬಾರ್, ಉಪ್ಪಿನಕಾಯಿ ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ.

  • News18 Kannada
  • 4-MIN READ
  • Last Updated :
  • Shimoga, India
  • Share this:

    ಶಿವಮೊಗ್ಗ: ಅದೇನು ಸಂಭ್ರಮ, ಅದೇನು ಉತ್ಸಾಹ, ಶಿವಮೊಗ್ಗ ವಿಮಾನ ನಿಲ್ದಾಣ (Shivamogga Airport) ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi In Karnataka) ಆಗಮಿಸ್ತಿರೋ ಕಾರ್ಯಕ್ರಮಕ್ಕೆ ಭರ್ಜರಿ ತಿಂಡಿ ತಿನಿಸು ತಯಾರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Modi In Shivamogga) ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕಾರ್ಯಕರ್ತರಿಗೆ ಬೆಳಗ್ಗೆ ಭರ್ಜರಿ ಉಪಾಹಾರ ವ್ಯವಸ್ಥೆ ಮಾಡಲಾಗಿದೆ.


    ಶಿವಮೊಗ್ಗದಲ್ಲಿ ಬಿಸಿಬೇಳೆ ಬಾತ್, ಮೈಸೂರು ಪಾಕ್, ನೀರಿನ ಪ್ಯಾಕ್ ನೀಡಲಾಗಿದೆ. ಮಹಿಳೆಯರಿಗೆ 25 ಕೌಂಟರ್ ಮತ್ತು ಪುರುಷರಿಗೆ 25 ಕೌಂಟರ್ ವ್ಯವಸ್ಥೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗಿನಿಂದಲೇ ಕಾರ್ಯಕ್ರಮಕ್ಕೆ ಸ್ಥಳೀಯರು ಹಾಗೂ ಕಾರ್ಯಕರ್ತರು ಹರಿದುಬರ್ತಿದ್ದಾರೆ.


    ಶಿವಮೊಗ್ಗದಲ್ಲಿ ಲಕ್ಷ ಜನರಿಗೆ ಉಪಹಾರ!
    ಒಂದು ಲಕ್ಷ ಜನರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. 12 ಗಂಟೆಯವರೆಗೆ ಉಪಾಹಾರ ವ್ಯವಸ್ಥೆಯಿದ್ದು 12 ಗಂಟೆಯ ನಂತರ ಊಟದ ವ್ಯವಸ್ಥೆ ಮಾಡಲಾಗಿದೆ.




    ಇದನ್ನೂ ಓದಿ: Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದ ಮೊದಲ ವಿಮಾನದಲ್ಲಿ ಇದ್ದವರು ಇವ್ರೇ!


    ಪ್ರಧಾನಿ ನರೇಂದ್ರ ಮೋದಿಯವರ ಬೆಳಗಾವಿ ಕಾರ್ಯಕ್ರಮಕ್ಕೂ ಭರ್ಜರಿ ತಯಾರಿ ನಡೆಸಲಾಗಿದೆ. ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆ ಸಮೀಪದಲ್ಲಿಯೇ ಊಟದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಿರುವ ಜನರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ.


    ಇದನ್ನೂ ಓದಿ: Shivamogga Airport: ಶಿವಮೊಗ್ಗದಲ್ಲಿ ಸಿಗಲಿದೆ ಈ ಸಂಸ್ಥೆಗಳ ವಿಮಾನ ಸೇವೆ!


    ಬೆಳಗಾವಿಯಲ್ಲಿ ಉಂಡವನೇ ಜಾಣ!
    35 ರಿಂದ 40 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಹಾಲುಗ್ಗಿ, ಬದನೆಕಾಯಿ, ಸಜ್ಜೆ ರೊಟ್ಟಿ, ಅನ್ನ ಸಾಂಬಾರ್, ಉಪ್ಪಿನಕಾಯಿ ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಆಗಮಿಸಿದ ಸಾರ್ವಜನಿಕರಿಗೆ ಕುಡಿಯುವ ನೀರಿಗೂ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ, ಆರೋಗ್ಯ ಇಲಾಖೆ ಸಿದ್ಧಪಡಿಸಿದ ಆಹಾರದ ಗುಣಮಟ್ಟ ಪರಿಶೀಲನೆ ಮಾಡಿದೆ.

    Published by:ಗುರುಗಣೇಶ ಡಬ್ಗುಳಿ
    First published: