ಮಲೆನಾಡಿನಲ್ಲಿ ಅಕೇಶಿಯಾ ನೆಡದಿರಲು ಶಿವಮೊಗ್ಗ ಜನರ ಒತ್ತಾಯ

ಇತ್ತೀಚಿನ ವರ್ಷಗಳಲ್ಲಿ ಮಲೆನಾಡು ಭಾಗದ ಗುಡ್ಡ ಬೆಟ್ಟಗಳಲ್ಲಿ ಅಕೇಶಿಯಾ  ಪ್ಲಾಂಟೇಷನ್ ಬೆಳೆಸೋದು ಹೆಚ್ಚಾಗಿದೆ. ಇದು ಪರಿಸರಕ್ಕೆ ಹಾನಿ ಎಂಬ ಕೂಗು ಮಲೆನಾಡಿನಲ್ಲಿ ಇದೆ.

ಅಕೇಶಿಯಾ

ಅಕೇಶಿಯಾ

  • Share this:
ಶಿವಮೊಗ್ಗ (ಜು. 23): ಮಲೆನಾಡಿನ ಪರಿಸರಕ್ಕೆ ಅಕೇಶಿಯಾ ಬೇಡ ಎಂಬ ಕೂಗು ಜೋರಾಗಿದೆ. ಮಲೆನಾಡಿನ ಹಳ್ಳಿಯ ಜನರು ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಮಲೆನಾಡಿನ ಸುಂದರ ಪರಿಸರದಲ್ಲಿ ಅಕೇಶಿಯಾ ಸಸಿ ನೆಡಲು ಬಂದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕ್ರಮವನ್ನು ವಿರೋಧಿಸುತ್ತಿದ್ದಾರೆ ಗ್ರಾಮಸ್ಥರು. ನಮ್ಮ ಊರಿಗೆ ಸ್ವಾಭಾವಿಕ ಕಾಡು ಬೇಕು. ಅಂತಹ ಕಾಡು ಬೆಳೆಸುವುದಾದರೆ ಅವಕಾಶ ನೀಡುತ್ತೇವೆ, ಇಲ್ಲ ಎಂದರೆ ಹೋರಾಟ ಮಾಡಲು ಸಿದ್ಧರಾಗಲು ನಿರ್ಧರಿಸಿದ್ದಾರೆ. 

ಇತ್ತೀಚಿನ ವರ್ಷಗಳಲ್ಲಿ ಮಲೆನಾಡು ಭಾಗದ ಗುಡ್ಡ ಬೆಟ್ಟಗಳಲ್ಲಿ ಅಕೇಶಿಯಾ  ಪ್ಲಾಂಟೇಷನ್ ಬೆಳೆಸೋದು ಹೆಚ್ಚಾಗಿದೆ. ಅರಣ್ಯ ಇಲಾಖೆಯವರೇ ಈ ಕಾರ್ಯ ಮಾಡುತ್ತಿದ್ದಾರೆ. ಇದು ಪರಿಸರಕ್ಕೆ ಹಾನಿ ಎಂಬ ಕೂಗು ಮಲೆನಾಡಿನಲ್ಲಿ ಇದೆ. ಗುಡ್ಡ- ಬೆಟ್ಟಗಳಲ್ಲಿ ಸ್ವಾಭಾವಿಕ ಅರಣ್ಯ ಬೆಳೆಸಿ ಎನ್ನುತ್ತಿದ್ದಾರೆ ಮಲೆನಾಡಿನ ಜನರು. ಅಕೇಶಿಯಾ ಪ್ಲಾಂಟೇಷನ್ ಕಟಾವು ಮಾಡಿದ ನಂತರ ಆ ಜಾಗದಲ್ಲಿ  ಸ್ವಾಭಾವಿಕ ಕಾಡು ಬೆಳೆಸಬೇಕು ಎಂಬುದು ಜನರು ಆಗ್ರಹವಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೂದೂರು ಸಮೀಪದ ಜಾವಳ್ಳಿ ಗ್ರಾಮದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಿಂದ ಅಕೇಶಿಯಾ ಪ್ಲಾಂಟೇಷನ್ ಮಾಡಲು ಮುಂದಾಗಿದೆ. ಈ ಹಿಂದೆ ಇದ್ದ ಅಕೇಷಿಯಾ ಮರಗಳನ್ನು ಕಡಿಯಲಾಗಿತ್ತು. ಈಗ ಮತ್ತೆ ಅಲ್ಲಿ ಹೊಸದಾಗಿ ಸಸಿ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೋನಾ ಕಾವು: ಇಂದು 5030 ಕೇಸ್​​ ಪತ್ತೆ, 80 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಇಲ್ಲಿನ ಸುಮಾರು 25 ಎಕರೆ ಜಾಗದಲ್ಲಿ ಅಕೇಶಿಯಾ ಜೊತೆಗೆ ಸ್ವಾಭಾವಿಕ ಅರಣ್ಯ ಸಸ್ಯಗಳು ಇದ್ದವು. ಅದರೆ ಈ ಎಲ್ಲವನ್ನು ನಾಶ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಈಗ ಮತ್ತೆ ಅದೇ ಜಾಗದಲ್ಲಿ ಅಕೇಶಿಯಾ ಸಸಿ ನೆಡುವುದಕ್ಕೆ  ಬಂದಿದ್ದಾರೆ. ಇದನ್ನು ಜಾವಳ್ಳಿ ಗ್ರಾಮದ ಜನರು ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ.  ಇಲ್ಲಿ ಇದ್ದ ಸ್ವಭಾವಿಕ ಅರಣ್ಯ ಮರಗಳನ್ನು ಸಹ ಕಟಾವು ಮಾಡಿ, ಜೆಸಿಬಿ ಮೂಲಕ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ತೆಗೆಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸರ್ವೆ ನಂ. 65ರಲ್ಲಿ, ಸ್ವಾಭಾವಿಕವಾಗಿ ಮರ-ಗಿಡಗಳು ಬೆಳೆಯುತ್ತಿದ್ದವು. ಕಾಡಂಚಿನಲ್ಲಿ ಸ್ವಾಭಾವಿಕ ಅರಣ್ಯ ಇದ್ದರೆ, ಮಂಗಗಳು ಸೇರಿದಂತೆ ಕಾಡುಪ್ರಾಣಿಗಳಿಗೆ ಅಹಾರ ಸಿಗುತ್ತವೆ. ಅವುಗಳು ಊರು ಕಡೆಗೆ ಬರುವುದಿಲ್ಲ. ಅದರೆ ಅಕೇಶಿಯಾ ಮರ ಬೆಳೆದರೆ, ಕಾಡು ಪ್ರಾಣಿಗಳು ಅಹಾರಕ್ಕಾಗಿ ಅನಿವಾರ್ಯವಾಗಿ ಹಳ್ಳಿಗಳಿಗೆ ಬರುತ್ತವೆ. ಸ್ವಾಬಾವಿಕ ಕಾಡು ಇದ್ದರೆ ಜಾನುವಾರುಗಳಿಗೆ ಹುಲ್ಲು (ಮೇವು) ಸಿಗುತ್ತದೆ. ಅಕೇಶಿಯಾ ಬೆಳೆದರೆ, ಅದರ ಕೆಳ ಭಾಗದಲ್ಲಿ ಹುಲ್ಲು ಸಹ ಬೆಳೆಯುವುದಿಲ್ಲ. ನಮಗೆ ಕೊಟ್ಟಿಗೆಗೆ ದರಗು ಸಹ ಸಿಗೋದಿಲ್ಲ ಎಂಬ ಮಾತು ಗ್ರಾಮಸ್ಥರದ್ದು.

ಕಾಡು ಇಲ್ಲವಾದರೆ ಕಾಡು ಪ್ರಾಣಿಗಳು ಗ್ರಾಮಗಳಿಗೆ ಕಾಲಿಡುತ್ತವೆ, ಹೀಗಾಗಿ ಅರಣ್ಯ ಸಸ್ಯಗಳನ್ನೇ ನೆಡಬೇಕು ಇಲ್ಲದೇ ಹೋದರೆ ಹೋರಾಟ ಮಾಡುತ್ತೇವೆ  ಎನ್ನುತ್ತಾರೆ ಗ್ರಾಮದ ನಿವಾಸಿಗಳು. ಶಿವಮೊಗ್ಗದ ಸಮೀಪದ ಮುದ್ದಿನಕೊಪ್ಪ ಬಳಿ ಕೆಎಫ್ ಡಿ ಸಿ ಗೆ ಸೇರಿದ ಜಾಗವನ್ನು ಅರಣ್ಯ ಇಲಾಖೆಯ ಟ್ರೀ ಪಾರ್ಕ್ ಗೆ ಬಿಟ್ಟುಕೊಡಲಾಗಿದೆ. ಹೀಗಾಗಿ ಅರಣ್ಯ ಇಲಾಖೆಯವರು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮಕ್ಕೆ ಜಾವಳ್ಳಿಯ ಭೂಮಿ ನೀಡಿದ್ದಾರೆ. ಆ ಜಾಗದಲ್ಲಿ ಈಗ ಅವರ ಸಸಿ ನಡೆಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಲ್ಲಿ ಬೆಳೆದ ಅಕೇಶಿಯಾವನ್ನು ಪಲ್ಪ ಗಾಗಿ ಮಾರಾಟ ಮಾಡಲಾಗುತ್ತಿದೆ. ಮಲೆನಾಡಿನ ಪರಿಸರಕ್ಕೆ ಅಕೇಶಿಯಾದಿಂದ ಹಾನಿ ಆಗುತ್ತಿರುವುದಂತೂ ನಿಜ. ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ಇದಕ್ಕೆ ಪರಿಹಾರ ಹುಡುಕುತ್ತಾ  ಕಾದು ನೋಡಬೇಕಿದೆ.
Published by:Sushma Chakre
First published: