HOME » NEWS » State » SHIMOGA NEWS SHARAVATI RIVER WATER WILL NOT SUPPLY TO BANGALORE MINISTER KS ESHWARAPPA CLARIFIED SCT

ಶರಾವತಿ ನದಿ ನೀರು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಹೋಗಲ್ಲ; ಸಚಿವ ಈಶ್ವರಪ್ಪ ಸ್ಪಷ್ಟನೆ

ಶರಾವತಿ ನದಿಯಿಂದ ಯಾವುದೇ ಕಾರಣಕ್ಕೂ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಪ್ರಶ್ನೆಯೇ ಇಲ್ಲ.  ಯಾವುದೇ ಕಾರಣಕ್ಕೂ ಈ ಯೋಜನೆ ಆಗಲು ಅವಕಾಶ ಕೊಡುವುದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

news18-kannada
Updated:June 27, 2020, 1:43 PM IST
ಶರಾವತಿ ನದಿ ನೀರು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಹೋಗಲ್ಲ; ಸಚಿವ ಈಶ್ವರಪ್ಪ ಸ್ಪಷ್ಟನೆ
ಸಚಿವ ಕೆ ಎಸ್ ಈಶ್ವರಪ್ಪ
  • Share this:
ಶಿವಮೊಗ್ಗ (ಜೂ. 27): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಅಣೆಕಟ್ಟಿನಿಂದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸಬೇಕು ಎಂಬ ಪ್ರಸ್ತಾವನೆ ಇದೆ. ಕಳೆದ ಮೂರ್ನಾಲ್ಕು  ವರ್ಷಗಳಿಂದ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶರಾವತಿ ನದಿ ನೀರು ಬೆಂಗಳೂರಿಗೆ ಹರಿಸುವ ಯೋಜನೆ ಬಗ್ಗೆ  ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ವಿರೋಧವಿದೆ.

ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಯಾವುದೇ ಕಾರಣಕ್ಕೂ ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಹೋಗಲ್ಲ ಎಂದು ಸ್ಪಷ್ಟಪಡಿಸಿದರು. ಇದೊಂದು ರೀತಿ ಹುಚ್ಚು ದರ್ಬಾರ್. ಯಾರು ಈ ಯೋಜನೆಗೆ ಪ್ರಪೋಸಲ್ ಮಾಡಿದ್ದರೋ ಗೊತ್ತಿಲ್ಲ. ಯಾರೋ ಒಬ್ಬರು ಬರುತ್ತಾರೆ, ಆಕಾಶದಲ್ಲಿ ಹೆಲಿಕಾಪ್ಟರ್ ಹಾರಿ ಹೋಗುತ್ತದೆ, ಅದನ್ನೇ ಸರ್ವೆ ಅಂದುಕೊಂಡು ಬಿಡುತ್ತಾರೆ. ಇನ್ನು ಯಾರೋ ಒಂದಿಷ್ಟು ಜನ ಕೆಳಗೆ ಬರುತ್ತಾರೆ, ನೋಡಿಕೊಂಡು ಹೋಗುತ್ತಾರೆ ಅಷ್ಟೇ ಎಂದಿದ್ದಾರೆ.

ಇದನ್ನೂ ಓದಿ: ಮೂರೂವರೆ ರೂಪಾಯಿ ಸಾಲಕ್ಕಾಗಿ ರೈತನನ್ನು 15 ಕಿ.ಮೀ. ನಡೆಸಿದ ಶಿವಮೊಗ್ಗ ಬ್ಯಾಂಕ್ ಸಿಬ್ಬಂದಿ!
Youtube Video

ಶರಾವತಿ ನದಿಯಿಂದ ಯಾವುದೇ ಕಾರಣಕ್ಕೂ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಪ್ರಶ್ನೆಯೇ ಇಲ್ಲ.  ಯಾವುದೇ ಕಾರಣಕ್ಕೂ ಈ ಯೋಜನೆ ಆಗಲು ಅವಕಾಶ ಕೊಡುವುದಿಲ್ಲ. ಶರಾವತಿ ಭೂಗರ್ಭ ವಿದ್ಯುತ್ ಯೋಜನೆ ಸಹ ಆಗೋದಿಲ್ಲ. ಕೇಂದ್ರ ಸರ್ಕಾರಕ್ಕೆ ಇದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಈಶ್ವರಪ್ಪ ತಿಳಿಸಿದರು. ಕೇಂದ್ರ ಸರ್ಕಾರಕ್ಕೂ  ಈ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಈ ಯೋಜನೆ ಆಗದೇ ಇರುವಂತೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
First published: June 27, 2020, 1:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories