• Home
  • »
  • News
  • »
  • state
  • »
  • ಹಸುಗೂಸಿನ ಹೃದಯದಲ್ಲಿ ರಂಧ್ರ; ಜೀರೋ ಟ್ರಾಫಿಕ್​ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ 7 ದಿನದ ಮಗು ರವಾನೆ

ಹಸುಗೂಸಿನ ಹೃದಯದಲ್ಲಿ ರಂಧ್ರ; ಜೀರೋ ಟ್ರಾಫಿಕ್​ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ 7 ದಿನದ ಮಗು ರವಾನೆ

ಆ್ಯಂಬುಲೆನ್ಸ್​ನಲ್ಲಿ ಹಸುಗೂಸನ್ನು ಕರೆತರುತ್ತಿರುವ ದೃಶ್ಯ

ಆ್ಯಂಬುಲೆನ್ಸ್​ನಲ್ಲಿ ಹಸುಗೂಸನ್ನು ಕರೆತರುತ್ತಿರುವ ದೃಶ್ಯ

10 ದಿನದ ಹಿಂದೆ ಡೆಲಿವರಿಗೆಂದು ದಾವಣಗೆರೆಯ ಸುಧಾ ಮೆಗ್ಗಾನ್ ಅಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿ 4 ರಂದು ಗಂಡುಮಗುವಿಗೆ ಜನ್ಮ ನೀಡಿದ್ದರು. ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿ ಮಗುವಿನ ಹೃದಯದಲ್ಲಿ ರಂಧ್ರವಿರುವುದು ಪತ್ತೆಯಾಗಿತ್ತು.

  • Share this:

ಶಿವಮೊಗ್ಗ (ಫೆ. 10): 4 ದಿನಗಳ ಹಿಂದಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆಂದು 40 ದಿನಗಳ ಹಸುಗೂಸನ್ನು ಜೀರೋ ಟ್ರಾಫಿಕ್​ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಕರೆತರಲಾಗಿತ್ತು. ಇದೀಗ ಅದೇರೀತಿಯ ಮತ್ತೊಂದು ಪ್ರಕರಣ ನಡೆದಿದ್ದು, 7 ದಿನಗಳ ಕಂದಮ್ಮನ ಹೃದಯ ಶಸ್ತ್ರಚಿಕಿತ್ಸೆಗೆಂದು ಶಿವಮೊಗ್ಗದಿಂದ ಬೆಂಗಳೂರಿಗೆ ಕರೆತರಲಾಗಿದೆ.


ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆಲೆಮಲ್ಲೂರು ಗ್ರಾಮದ ಸ್ವಾಮಿ ಹಾಗೂ ಸುಧಾ ದಂಪತಿಗಳ 7 ದಿನದ ಮಗುವಿನ ಹೃದಯದಲ್ಲಿ ರಂಧ್ರವಿರುವುದು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆತರಲಾಗಿದೆ. ಇದಕ್ಕಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.


ಇದನ್ನೂ ಓದಿ: ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ನಡುರಸ್ತೆಯಲ್ಲೇ ಹೊತ್ತಿ ಉರಿದಿದ್ದ ಶಿಕ್ಷಕಿ ಸಾವು


10 ದಿನದ ಹಿಂದೆ ಡೆಲಿವರಿಗೆಂದು ದಾವಣಗೆರೆಯ ಸುಧಾ ಮೆಗ್ಗಾನ್ ಅಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿ 4 ರಂದು ಗಂಡುಮಗುವಿಗೆ ಜನ್ಮ ನೀಡಿದ್ದರು. ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿ ಮಗುವಿನ ಹೃದಯದಲ್ಲಿ ರಂಧ್ರವಿರುವುದು ಪತ್ತೆಯಾಗಿತ್ತು. ತೀವ್ರ ಸಮಸ್ಯೆಯಿಂದ ಬಳಲುತ್ತಿರುವ ಮಗು ಈಗ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಜೀರೋ ಟ್ರಾಫಿಕ್ ಜೊತೆಗೆ ಎಸ್ಕಾರ್ಟ್ ವಾಹನ ನೀಡಿದ್ದರು. ನೆಲಮಂಗಲ ಮಾರ್ಗವಾಗಿ ಆ್ಯಂಬುಲೆನ್ಸ್​ ಬೆಂಗಳೂರಿನ ಕಡೆಗೆ ಸಾಗಿದೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದ ಹೆಂಡತಿ!


ಫೆ. 6ರಂದು ಹೃದಯ ಕಾಯಿಲೆಯಿಂದ ಬಳಲುತ್ತಿದ್ದ 40 ದಿನಗಳ ಮಗುವನ್ನು ಚಿಕಿತ್ಸೆಗಂದು ಆ್ಯಂಬುಲೆನ್ಸ್​ನಲ್ಲಿ ಬೆಂಗಳೂರಿಗೆ ಕರೆತರಲಾಗಿತ್ತು. ಆ ಮಗುವನ್ನು ಕರೆತರಲು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ದಾರಿಯುದ್ದಕ್ಕೂ ಪ್ರಯಾಣಿಕರು ಸ್ವಯಂಪ್ರೇರಣೆಯಿಂದ ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದರು. ಶರವೇಗದಲ್ಲಿ ಬಂದು ಮಗುವನ್ನು ಜಯದೇವ ಆಸ್ಪತ್ರೆಗೆ ಸೇರಿಸಿದ್ದ ಆ್ಯಂಬುಲೆನ್ಸ್​ ಚಾಲಕನ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ನಡೆದಿದ್ದು, ಶಿವಮೊಗ್ಗದಿಂದ ಬೆಂಗಳೂರಿಗೆ ಮಗುವನ್ನು ಕರೆತರಲಾಗಿದೆ.

Published by:Sushma Chakre
First published: