Kuvempu House: ಪ್ರಕೃತಿಯ ಮಡಿಲಲ್ಲಿರೋ ಕುಪ್ಪಳ್ಳಿ ಕವಿ ಮನೆಗೊಮ್ಮೆ ಹೋಗಿ ಬನ್ನಿ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ (Tirthahalli) ತಾಲೂಕಿನ ಪುಟ್ಟ ಹಳ್ಳಿಯ ನಿಸರ್ಗದ ಮಡಿಲಲ್ಲಿದೆ ಕುವೆಂಪು (Kuvempu) ಕವಿ ಮನೆ, 150 ವರ್ಷಗಳಷ್ಟು ಹಳೆಯದಾದ ಕುವೆಂಪು ಅವರು ಬೆಳೆದ ಮನೆಯನ್ನು 2001 ರಲ್ಲಿ ಪುನರ್ ನಿರ್ಮಿಸಲಾಯಿತು. ನಮ್ಮ ರಾಷ್ಟ್ರಕವಿ ಕುವೆಂಪು ಅವರು ಹಾಡಿ ಬೆಳೆದ ಮನೆಯನ್ನು ನೋಡೋದೆ ಒಂದು ಸೊಬಗು

ಕವಿ ಮನೆ

ಕವಿ ಮನೆ

  • Share this:
ನೋಡಲು ಬಲು ಸುಂದರವಾಗಿದೆ ನಮ್ಮ ಕವಿ ಮನೆ, ಮುಖ್ಯದ್ವಾರದ ಮೂಲಕ ಮನೆಯನ್ನು ಪ್ರವೇಶಿಸುತ್ತಿದ್ದಂತೆ ಮೂರು ದಿಕ್ಕಿಗೂ ಚೌಕಿಗಳುಳ್ಳ ಮೂರು ಅಂತಸ್ತಿನ ಹೆಮ್ಮನೆಯ ಒಳಾಂಗಣದ ದರ್ಶನವಾಗುತ್ತದೆ. ಅಂಗಳದ ನಡುವಿನ ತುಳಸಿ ಕಟ್ಟೆ ಗಮನ ಸೆಳೆಯುತ್ತದೆ.


ಮನೆಯಲ್ಲಿ ದೊಡ್ಡ ಕಲಬಿಗಲು, ಕವಿ ಮದುವೆಯಾದ ಮಂಟಪ, ದಂಡಿಗೆ, ಕವಿಮನೆಯ ಹಳೆಯಬಾಗಿಲು ಮುಂತಾದ ದೊಡ್ಡ ವಸ್ತುಗಳನ್ನು ಇಡಲಾಗಿದೆ. ಇವುಗಳನ್ನು ನೋಡುತ್ತಾ ಮುಂದೆ ಸಾಗಿ ಎಡಕ್ಕಿರುವ ಬಾಗಿಲಿನಿಂದ ಆಚೆ ದಾಟಿದರೆ ಕವಿಯ ಅಜ್ಜಯ್ಯ ಅಭ್ಯಂಜನ ಮಾಡಿದಂಥ ಮಲೆನಾಡ ಬಚ್ಚಲು ಮನೆಯ ಮಾದರಿಯನ್ನು ನೋಡಬಹುದು.


ಕುವೆಂಪು ಅವರಿಗೆ ಸಂಬಂಧಿಸಿದ ಎಲ್ಲಾ ರೀತಿಯ ವಸ್ತುಗಳು, ಅವರ ನೆನಪುಗಳನ್ನು ಇಲ್ಲಿ ಕಾಣಬಹುದು.


ಈ ತಾಣದ ಸುತ್ತಲೂ ಹಸಿರು ತಂಪಾದ ವಾತಾವರಣವಿದೆ. ಇಲ್ಲಿ ದೊಡ್ಡ ವೃತ್ತಾಕಾರದಲ್ಲಿ ವಿಶಿಷ್ಟ ವಿನ್ಯಾಸದಲ್ಲಿ ಜೋಡಿಸಿ ನಿಲ್ಲಿಸಿರುವ ಶಿಲಾಸ್ಮಾರಕಗಳಿವೆ.


ಮಲೆನಾಡ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಅದ್ರೂ ಕವಿಶೈಲದ ತಪ್ಪಲಿನಲ್ಲಿ ಸೂರ್ಯಾಸ್ತವನ್ನು ನೋಡೋದೆ ಚಂದ. ಕುಪ್ಪಳಿಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲೆಂದೆ ಎಲ್ಲೆಡೆ ಮಾಹಿತಿ ಫಲಕಗಳನ್ನು ಹಾಕಲಾಗಿದೆ


ಕುವೆಂಪು ಕೃತಿಗಳು, ಅವರ ಕುರಿತ ಪುಸ್ತಕ, ಧ್ವನಿ ಮುದ್ರಿಕೆ, ದೃಶ್ಯಮುದ್ರಿಕೆ, ಛಾಯಾಚಿತ್ರ ಮುಂತಾದವುಗಳನ್ನ ಇಲ್ಲಿ ಕಾಣಬಹುದು. ಕವಿಮನೆಗೆ ಹೋದ್ರೆ ಸಾಹಿತ್ಯಾಸಕ್ತಿ ಬೆಳೆಯುತ್ತೆ. ಮಕ್ಕಳನ್ನು ತಪ್ಪದೆ ಕವಿ ಮನೆಗೆ ಕರೆದುಕೊಂಡು ಹೋಗಿ




ಕವಿ ಸಮಾಧಿ ಕವಿ ಮನೆಯ ಹಿಮ್ಮಗ್ಗುಲಲ್ಲಿರುವ ಬೆಟ್ಟಕ್ಕೆ ಹೋಗುವ ದಾರಿಯುದ್ದಕ್ಕೂ ಅಲ್ಲಲ್ಲಿ ಕಲ್ಲು ಮಂಟಪಗಳಿವೆ. ಗುಡ್ಡವನ್ನು ತಲುಪುತ್ತಿದ್ದಂತೆ ಕವಿ ಸಮಾಧಿ ಕಾಣಸಿಗುತ್ತದೆ.


ಬೆಟ್ಟವನ್ನು ರಸ್ತೆಯ ಮೂಲಕ ಇಳಿದು ಬಂದರೆ ಅಡ್ಡರಸ್ತೆಗೆ ಸೇರುವಲ್ಲಿ ಎದುರಿಗೆ, ಕವಿಶೈಲದ ತಪ್ಪಲಿನಲ್ಲಿ, ಕವಿ ಪುತ್ರ ಪೂರ್ಣಚಂದ್ರ ತೇಜಸ್ವಿಯವರ ಸ್ಮಾರಕವಿದೆ. ತೇಜಸ್ವಿಯವರ ಸಮಾಧಿ ಮುಂದೆ ನಿಂತ್ರೆ ಅವರ ಸಾಹಿತ್ಯಗಳೆಲ್ಲಾ ಕಣ್ಮುಂದೆ ಬರುತ್ತೆ
Published by:Pavana HS
First published: