• Home
 • »
 • News
 • »
 • state
 • »
 • Shivamogga: ಕರುನಾಡ ಆನೆಗಳ ಕಾಶಿಯಾತ್ರೆ! 12 ಚಕ್ರಗಳ ಲಾರಿಯಲ್ಲಿ 3 ಸಾವಿರ ಕಿ ಮೀ ಪಯಣ

Shivamogga: ಕರುನಾಡ ಆನೆಗಳ ಕಾಶಿಯಾತ್ರೆ! 12 ಚಕ್ರಗಳ ಲಾರಿಯಲ್ಲಿ 3 ಸಾವಿರ ಕಿ ಮೀ ಪಯಣ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಕರ್ನಾಟಕ- ಉತ್ತರ ಪ್ರದೇಶ ಸರ್ಕಾರಗಳ ಒಪ್ಪಂದದ ಅನ್ವಯ ಕರುನಾಡಿನ ಆನೆಗಳು 3 ಸಾವಿರ ಕಿಲೋ ಮೀಟರ್ ದೂರದ ಅಭಯಾರಣ್ಯ ಸೇರುತ್ತಿವೆ. 12 ಚಕ್ರಗಳ ಲಾರಿಯಲ್ಲಿ ಈ ಆನೆಗಳನ್ನ ಸಾಗಿಸಲಾಗ್ತಿದೆ.

 • News18 Kannada
 • Last Updated :
 • Shimoga, India
 • Share this:

  ಶಿವಮೊಗ್ಗ: ಆನೆ ಮೇಲೆ ಅಂಬಾರಿ ನೋಡಿದ್ದೀವಿ, ಆದ್ರೆ ಇಲ್ಲಿ ಆನೆಗಳೇ ಲಾರಿ ಏರಿವೆ. ಯಾವುದೋ ದಾರಿ. ಎಲ್ಲಿಗೋ ಪಯಣ. ನಾವೆಲ್ಲಿಗೆ ಹೋಗ್ತಿದ್ದೇವೆ ಅನ್ನೋ ಭಾವದಲ್ಲಿವೆ. ನಿಜ, ಶಿವಮೊಗ್ಗದ ಸಕ್ರೇಬೈಲ್ ಆನೆ ಬಿಡಾರದಿಂದ (Sakrebyle Elephant Camp) ಹೊರಟಿರುವ ಈ ಆನೆಗಳಿಗೆ ತಮ್ಮ ಪಯಣ ಎಲ್ಲಿಗೆ ಅನ್ನೋದು ತಿಳಿಯದು. ರಸ್ತೆ ಬದಿ ನಿಂತಿರೋ ಜನರಿಗೂ ಅಷ್ಟೇ, ನಮ್ಮ ಕರುನಾಡಿನ ಆನೆಗಳು ಎಲ್ಲಿಗೆ ಸಾಗ್ತಿವೆ ಅನ್ನೋ ಕುತೂಹಲ. ಈ ಆನೆಗಳ ಪಯಣ ದೂರದೂರಿಗೆ..ಮಲೆನಾಡಿನಿಂದ Shivamogga Sakrebyle Elephant Camp) ಉತ್ತರ ಭಾರತದೆಡೆಗೆ.


  ಸಕ್ರೇಬೈಲ್ ಬಿಡಾರದ ಮುಖ್ಯ ಸದಸ್ಯೆ ನೇತ್ರಾಳ ಮಗ ಸೂರ್ಯನನ್ನೂ ಸಹ ಉತ್ತರ ಪ್ರದೇಶದ ಪೀಲಿಭೀತ್ ಹುಲಿ ಸಂರಕ್ಷಿತ ಅಭಯಾರಣ್ಯಕ್ಕೆ ಕಳುಹಿಸಲಾಯ್ತು. ಕರ್ನಾಟಕ- ಉತ್ತರ ಪ್ರದೇಶ ಸರ್ಕಾರಗಳ ಒಪ್ಪಂದದ ಅನ್ವಯ ಕರುನಾಡಿನ ಆನೆಗಳು 3 ಸಾವಿರ ಕಿಲೋ ಮೀಟರ್ ದೂರದ ಅಭಯಾರಣ್ಯ ಸೇರುತ್ತಿವೆ. 12 ಚಕ್ರಗಳ ಲಾರಿಯಲ್ಲಿ ಈ ಆನೆಗಳನ್ನ ಸಾಗಿಸಲಾಗ್ತಿದೆ.
  ಇದನ್ನೂ ಓದಿ: Haliyal Wrestlers: ಕುಸ್ತಿಪಟುಗಳ ಕಾರ್ಖಾನೆ ಹಳಿಯಾಳ; ನೀವೂ ಇಲ್ಲಿ ಕುಸ್ತಿ ಕಲಿಯಬಹುದು ನೋಡಿ!


  ನಮ್ಮ ಶಿವಮೊಗ್ಗದ ಸಕ್ರೇಬೈಲ್ ಬಿಡಾರದ ಆನೆಗಳು ಉತ್ತರ ಪ್ರದೇಶದಲ್ಲಿ ತುಂಬಾ ಫೇಮಸ್ ಅಂತೆ. ಆ ವಾತಾವರಣಕ್ಕೆ ಚೆನ್ನಾಗಿ ಒಗ್ಗಿಕೊಳ್ಳುತ್ತವಂತೆ. ಹೀಗಾಗಿ 2017ರಲ್ಲೂ ರಾಜ್ಯದಿಂದ ಉತ್ತರ ಪ್ರದೇಶಕ್ಕೆ ಕಳುಹಿಸಿದ್ದ 10 ಆನೆಗಳ ಪೈಕಿ ಸಕ್ರೆಬೈಲ್ ಬಿಡಾರದಿಂದ ನಾಲ್ಕು ಆನೆಗಳು ದೂದ್ವಾ ಟೈಗರ್ ರಿಸರ್ವ್ ಸೇರಿದ್ದವು. ಇದೀಗ ಸಕ್ರೇಬೈಲ್​ನಿಂದ ಸೂರ್ಯ ಆನೆ ಉತ್ತರ ಪ್ರದೇಶ ಯಾತ್ರೆ ಹೊರಟಿದೆ.


  ಇದನ್ನೂ ಓದಿ: Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!


  ಆನೆ ಕರೆದೊಯ್ಯುವ ಹಿನ್ನೆಲೆ ಮೊದಲೇ ರೂಟ್ ಮ್ಯಾಪ್ ಸಿದ್ಧಪಡಿಸಲಾಗಿದೆ. ಅರಣ್ಯ, ಪೊಲೀಸ್ ಇಲಾಖೆ ಹಾಗೂ ಆನೆಗಳು ಸಂಚರಿಸಲಿರುವ ಆಯಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಹೀಗೆ ರಾಜ್ಯದ ಆನೆಗಳು ಇನ್ನು ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶ ಅಭಯಾರಣ್ಯದಲ್ಲಿ ಘೀಳಿಡುತ್ತಾ ಅಬ್ಬರಿಸಲಿವೆ.


  ವಿಡಿಯೋ, ಮಾಹಿತಿ:  ಅಜಯ್ ಕುಮಾರ್ ಶಿವಮೊಗ್ಗ

  Published by:ಗುರುಗಣೇಶ ಡಬ್ಗುಳಿ
  First published: