• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivamogga: ಸೋರಿಕೆಯಾದ ನೀರಿನಿಂದ ಬಿರು ಬೇಸಿಗೆಯಲ್ಲೂ ಧುಮ್ಮುಕ್ಕುತ್ತಿದೆ ಜೋಗ!

Shivamogga: ಸೋರಿಕೆಯಾದ ನೀರಿನಿಂದ ಬಿರು ಬೇಸಿಗೆಯಲ್ಲೂ ಧುಮ್ಮುಕ್ಕುತ್ತಿದೆ ಜೋಗ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕೇವಲ ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ಧುಮ್ಮಿಕ್ಕಿ ಭೋರ್ಗರೆಯುತ್ತಿದ್ದ ವಿಶ್ವ ವಿಖ್ಯಾತ ಜೋಗ ಜಲಪಾತ, ಇದೀಗ ಬೇಸಿಗೆಯಲ್ಲೂ ನಳನಳಿಸುತ್ತಿದೆ. ಕಡಿದಾದ ಬಂಡೆಗಳ ನಡುವೆ ಶರಾವತಿಯ ನರ್ತನ ಬಿರು ಬೇಸಿಗೆಯಲ್ಲೂ ಕಾಣಸಿಗುತ್ತಿದೆ.

  • News18 Kannada
  • 3-MIN READ
  • Last Updated :
  • Shimoga, India
  • Share this:

    ಶಿವಮೊಗ್ಗ: ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುತ್ತಿರುವ ಶರಾವತಿ (Sharavati River) ಜಲಧಾರೆ! ಮಳೆಗಾಲದಂತೆ ಬಿರು ಬೇಸಿಗೆಯಲ್ಲೂ ಜೋಗ ಕಣಿವೆಗಳಲ್ಲಿ (Jog Falls) ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ಜೋಗ್ ಫಾಲ್ಸ್. ಇದು ಆಶ್ಚರ್ಯವಾದರೂ ಇದು ಸತ್ಯ!


    ಕೇವಲ ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ಧುಮ್ಮಿಕ್ಕಿ ಭೋರ್ಗರೆಯುತ್ತಿದ್ದ ವಿಶ್ವ ವಿಖ್ಯಾತ ಜೋಗ ಜಲಪಾತ, ಇದೀಗ ಬೇಸಿಗೆಯಲ್ಲೂ ನಳನಳಿಸುತ್ತಿದೆ. ಕಡಿದಾದ ಬಂಡೆಗಳ ನಡುವೆ ಶರಾವತಿಯ ನರ್ತನ ಬಿರು ಬೇಸಿಗೆಯಲ್ಲೂ ಕಾಣಸಿಗುತ್ತಿದೆ.


    you can also visit puneeth rajkumar s gandhadagudi jogfalls travel guide
    ಸಾಂದರ್ಭಿಕ ಚಿತ್ರ


    ಎರಡು ಕಣ್ಣು ಸಾಲುತ್ತಿಲ್ಲ!
    ವಿಶ್ವದ ಅತ್ಯಂತ ನಯನಮನೋಹರ ಜಲಪಾತಗಳಲ್ಲಿ ಜೋಗ ಕೂಡ ಒಂದಾಗಿದ್ದು ಬೇಸಿಗೆಯಲ್ಲೂ ಜಲಪಾತ ವೀಕ್ಷಿಸಲು ಎರಡು ಕಣ್ಣು ಸಾಲುತ್ತಿಲ್ಲ! ಕೇವಲ ಮುಂಗಾರು ಮಳೆ ಸಂದರ್ಭದಲ್ಲಿ ಮಾತ್ರ ಕಣ್ಮನ ಸೆಳೆಯುವ ಜೋಗ ಜಲಪಾತ ಬೇಸಿಗೆ ಸಮಯದಲ್ಲೂ ನಯನ ಮನೋಹರವಾಗಿ ಜಲಧಾರೆ ಧುಮ್ಮಿಕ್ಕಿ ಹರಿಯುತ್ತಿದೆ.


    ಇದನ್ನೂ ಓದಿ: Shivamogga: ಅಡಿಕೆಗೆ ಈ ಬೆಳೆ ಪರ್ಯಾಯವಂತೆ! ಖರ್ಚು ಕಡಿಮೆ, ಬೆಲೆ ಹೆಚ್ಚು!


    ಜೋಗ ಜಲಪಾತಕ್ಕೆ ನೀರು ಹರಿದುಬರಲು ಇದೇ ಕಾರಣ!
    ಇಲ್ಲಿನ ಮಹಾತ್ಮ ಗಾಂಧಿ ಪವರ್ ಸ್ಟೇಷನ್​ಗೆ ನೀರು ಹರಿಸುವ ಚೈನಾ ಗೇಟ್​ನಲ್ಲಿ ಸಾಕಷ್ಟು ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಈ ನೀರು ನೇರವಾಗಿ ನದಿ ಮೂಲಕ ಜಲಪಾತಕ್ಕೆ ಹರಿದು ಬರುತ್ತಿದೆ. ಪವರ್ ಚಾನಲ್ ಗಳಲ್ಲೂ ಸಾಕಷ್ಟು ನೀರು ಸೋರಿಕೆಯಾಗುತ್ತಿದ್ದು, ಅದು ಕೂಡ, ಜಲಪಾತಕ್ಕೆ ನೀರು ಹರಿಯಲು ಕಾರಣವಾಗಿದೆ. ಇದರಿಂದ ಜಲಪಾತದಲ್ಲಿ ನಿರಂತರವಾಗಿ ಜಲಧಾರೆ ಸೃಷ್ಟಿಯಾಗಲು ಕಾರಣವಾಗಿದೆ.




    ಇದನ್ನೂ ಓದಿ: Ikkeri Temple: ಇದು ಅಘೋರಿಗಳ ನೆಚ್ಚಿನ ತಾಣ, ಚಿತ್ರ, ವಿಚಿತ್ರಗಳ ದೇಗುಲ!


    ಒಟ್ಟಾರೆ ಜೋಗವೆಂದರೆ ಅದ್ಭುತ ಎಂದೆನಿಸುವ ಜಲಪಾತದಲ್ಲಿ, ಹಾಲ್ನೊರೆಯಂತೆ ಉಕ್ಕಿ ಹರಿಯುವ ನೀರು ನೋಡುವುದೇ ಒಂದು ದೃಶ್ಯಕಾವ್ಯ. ಅದರಲ್ಲೂ, ಬಿರು ಬೇಸಿಗೆಯಲ್ಲಿ ಕೂಡ ಅಚಾನಕ್ಕಾಗಿ ಹರಿದು ಬಂದ ನೀರು ಪ್ರವಾಸಿಗರು ಮತ್ತು ಸ್ಥಳಿಯರಲ್ಲಿ ಸಂತಸಕ್ಕೆ ಕಾರಣವಾಗಿದೆ.


    ವರದಿ: ವಿನಯ್ ಪುರದಾಳು, ನ್ಯೂಸ್ 18 ಕನ್ನಡ, ಶಿವಮೊಗ್ಗ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು