Shivamogga ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ; NIA ತಂಡದಿಂದ ತನಿಖೆ ಆರಂಭ

ಸದ್ಯ ದೆಹಲಿಯಲ್ಲಿ ದಾಖಲಾಗಿದ್ದ ಹರ್ಷ ಕೊಲೆ ಪ್ರಕರಣದ ಕೇಸ್ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಎನ್​ಐಎ ತಂಡ ವಿಚಾರಣೆ ಆರಂಭಿಸಿದೆ

ಹರ್ಷ ಕೊಲೆ ಕೇಸ್​ ತನಿಖೆ

ಹರ್ಷ ಕೊಲೆ ಕೇಸ್​ ತನಿಖೆ

  • Share this:
ಬೆಂಗಳೂರು: ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದ ಬಜರಂಗದಳದ ಕಾರ್ಯಕರ್ತ ಹರ್ಷ (Bajrang Dal Activist) ಕೊಲೆ ಪ್ರಕರಣವನ್ನು (Death Case) ಎನ್​ಐಎ ತನಿಖೆ ನೀಡಲಾಗಿತ್ತು. ಇದೀಗ ಎನ್​ಐಎ ತಂಡ (NIA Team) ತನ್ನ ತನಿಖೆ ಆರಂಭಿಸಿದೆ. ಫೆಬ್ರವರಿ 20 ರಂದು ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾಗಿತ್ತು. ನಗರದ ಎನ್​ಐಎ ಅಧಿಕಾರಿಗಳು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ತಮ್ಮ ಕಚೇರಿಯಲ್ಲಿ ಕಾರ್ಯ ಆರಂಭಿಸಿದ್ದಾರೆ. ದೊಮ್ಮಲೂರಲ್ಲಿ ಎನ್​ಐಎ (NIA) ಪ್ರಾದೇಶಿಕ ಕಚೇರಿ ಕಾರ್ಯಾರಂಭವಾಗಿದೆ. ಇದಕ್ಕಾಗಿ ಓರ್ವ ಡಿಐಜಿ (DIGP), ಒಬ್ಬರು ಎಸ್​ಪಿ, ಇನ್ಸ್​ಪೆಕ್ಟರ್​, ಪಿಎಸ್ಐ, ಎಎಸ್ಐ, ಹೆಚ್​ಸಿಸಿ, ಪಿಸಿ ಸೇರಿದಂತೆ  20 ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ಸದ್ಯ ದೆಹಲಿಯಲ್ಲಿ ದಾಖಲಾಗಿದ್ದ ಹರ್ಷ ಕೊಲೆ ಪ್ರಕರಣದ ಕೇಸ್  (Case) ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ರಾಜಕೀಯ ಮುಖಂಡರಿಂದಲೂ ಸೂಕ್ತ ತನಿಖೆಗೆ ಒತ್ತಾಯ

ಪ್ರಾದೇಶಿಕವಾಗಿ ಬೆಂಗಳೂರಿನಲ್ಲಿ ಕಚೇರಿ ಕಾರ್ಯಾರಂಭ ಹಿನ್ನಲೆ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಹಲವು ಪ್ರಕರಣಗಳ ತನಿಖೆಗೆ ಸಹಕಾರಿಯಾಗಿದೆ. ಇಂದಿನಿಂದ ನಗರದ ದೊಮ್ಮಲೂರಿನಲ್ಲು ಎನ್ಐಎ ಪ್ರಾದೇಶಿಕ ಬೆಂಗಳೂರು ಕಚೇರಿ ಕಾರ್ಯಾರಂಭವಾಗುತ್ತಿದೆ. ಎನ್​ಐಎ ತಂಡ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಇನ್ನು ಹರ್ಷ ಕೊಲೆಯಿಂದಿರೋ ಸತ್ಯತೆಗಳು ಹೊರ ಬರಬೇಕೆಂದು ಅನೇಕ ರಾಜಕೀಯ ಮುಖಂಡರು ಆಗ್ರಹಿಸಿದರು. ಈ ಬಗ್ಗೆ ವಿಧಾನಸಭೆಯಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿದ್ರು. ಸೂಕ್ತ ತನಿಖೆ ನಡೀಬೇಕು ಸತ್ಯ ಹೊರಬರಬೇಕೆಂದು ಹೇಳಿದ್ರು.

ಮೂವರು ಆರೋಪಿಗಳನ್ನ ವಶಕ್ಕೆ ಪಡೆದ ಎನ್ಐಎ

ಹರ್ಷ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನ ಎನ್ಐಎ ಸದ್ಯ ವಶಕ್ಕೆ ಪಡೆದಿದೆ. ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಮೂವರು ಆರೋಪಿಗಳು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ. ಬಾಡಿ ವಾರಂಟ್ ಮೂಲಕ 3 ಆರೋಪಿಗಳು ಎನ್​ಐಎ ವಶಕ್ಕೆ ಪಡೆದು ಗ್ರಿಲ್ ಮಾಡಲಾಗಿದೆ.  ಉಳಿದ 7 ಆರೋಪಿಗಳ ಪೈಕಿ ಮೂವರು ಬಳ್ಳಾರಿ ಮತ್ತು ಉಳಿದ ನಾಲ್ವರು ಮೈಸೂರಿನ ಜೈಲಿನಲ್ಲಿದ್ದಾರೆ. ಉಳಿದ 7 ಆರೋಪಿಗಳನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಎನ್​ಐಎ ಪಡೆದುಕೊಳ್ಳಲಿದೆ.

ಇದನ್ನೂ ಓದಿ: ಹರ್ಷನ ಕುಟುಂಬಕ್ಕೆ ₹25 ಲಕ್ಷ, ST ವ್ಯಕ್ತಿಯ ಕುಟುಂಬಕ್ಕೆ ಕೇವಲ 4 ಲಕ್ಷ ಏಕೆ.. Siddaramaiah ಪ್ರಶ್ನೆ

ಮತೀಯ ಸಂಘಟನೆಗಳ ಮೇಲೂ NIA ಕಣ್ಣು

ಸೂಕ್ಷ್ಮವಾಗಿ ಮತೀಯ ಸಂಘಟನೆಗಳ ಕಾರ್ಯ ಚಟುವಟಿಕೆಗಳನ್ನು ಎನ್​ಐಎ ಗಮನಿಸುತ್ತಿದೆ. ಆ ಮೂಲಕ ಹರ್ಷ ಕೊಲೆ ಪ್ರಕರಣವನ್ನು ಮತ್ತಷ್ಟು ಎಚ್ಚರಿಕೆಯಿಂದ ಎನ್​ಐಎ ತನಿಖೆ ನಡೆಸುತ್ತಿದೆ.

ಎಲ್ಲಾ ಆರೋಪಿಗಳ ವಿಚಾರಣೆ ಸಾಧ್ಯತೆ 

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆಗೆಂದು ಎನ್​ಐಎ ಅಧಿಕಾರಿಗಳು ಶೀಘ್ರದಲ್ಲೇ ಶಿವಮೊಗ್ಗಕ್ಕೆ ಭೇಟಿ ನೀಡೋ ಸಾಧ್ಯತೆ ಇದೆ.  ಈ ಹಿಂದೆ ಕೊಲೆ ಪ್ರಕರಣ ಸಂಬಂಧ ಎನ್​ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಕೊಲೆ ಪ್ರಕರಣದಲ್ಲಿ ಈವರೆಗೆ 10 ಆರೋಪಿಗಳನ್ನು ಬಂಧಿಸಲಾಗಿದ್ದು, ಇವರೆಲ್ಲರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ: Shivamogga Murder Case: ಹರ್ಷ ಕೊಲೆ: 10 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬಿಜೆಪಿ ವಿರುದ್ಧ ವಿಪಕ್ಷಗಳ ಆರೋಪ

ಮಾರ್ಚ್ 2ರಂದು, ಕರ್ನಾಟಕ ಪೊಲೀಸರು ಫೆಬ್ರವರಿ 21ರ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ 10 ಜನರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967ರ ಸೆಕ್ಷನ್‌ಗಳನ್ನು ಅನ್ವಯಿಸಿದರು. ತನಿಖೆ ನಡೆಸಲು ಎನ್‌ಐಎ ಅಧಿಕಾರಿಗಳು ಬಂಧಿತ ಶಂಕಿತರಲ್ಲಿ ಮೂವರನ್ನು ತನ್ನ ಕಸ್ಟಡಿಗೆ ಪಡೆದುಕೊಂಡಿದೆ. ಈ ಕೊಲೆ ಪ್ರಕರಣದಲ್ಲಿ ಮಾರ್ಚ್‌ನಲ್ಲಿ ಯುಎಪಿಎ ಜಾರಿ ಮಾಡಿರುವುದು, ಬಿಜೆಪಿ ನಾಯಕರು ಬಯಸಿದಂತೆ ಪ್ರಕರಣದ ತನಿಖೆಯನ್ನು ಭಯೋತ್ಪಾದನಾ ವಿರೋಧಿ ಎನ್‌ಐಎಗೆ ಹಸ್ತಾಂತರಿಸುವ ಪೂರ್ವಭಾವಿಯಾಗಿ ಕಂಡುಬಂದಿದೆ ಎಂದು ವಿಪಕ್ಷಗಳು ಆರೋಪಿಸಿವೆ.
Published by:Pavana HS
First published: