• Home
  • »
  • News
  • »
  • state
  • »
  • Shivamogga Auto: 7 ಚಕ್ರದ ಹೈಟೆಕ್ ಆಟೋ! ಈ ರಿಕ್ಷಾ ಹಿಂದಿದೆ ತಾಯಿಯ ನೆನಪು

Shivamogga Auto: 7 ಚಕ್ರದ ಹೈಟೆಕ್ ಆಟೋ! ಈ ರಿಕ್ಷಾ ಹಿಂದಿದೆ ತಾಯಿಯ ನೆನಪು

ಅದ್ಭುತ ಆಟೋ ವಿಡಿಯೋ ನೋಡಿ

"ಅದ್ಭುತ ಆಟೋ ವಿಡಿಯೋ ನೋಡಿ"

ಶಿವಮೊಗ್ಗದಲ್ಲಿ ಈ ಆಟೋ ರೋಡಿಗಿಳಿದರೆ ಸಾಕು ಜನರೆಲ್ಲಾ ಕುತೂಹಲದಿಂದ ಕಣ್ಣರಳಿಸ್ತಿದ್ದಾರಂತೆ.

  • Share this:

    ಶಿವಮೊಗ್ಗ: ಇದು 7 ಚಕ್ರದ ಹೈಟೆಕ್ ಆಟೋ! ಒಳಗೆ ಏರಿದರೆ ಐಷಾರಾಮಿ ಕಾರಿನಲ್ಲಿ ಕುಳಿತಷ್ಟೆ ಹಿತ! ಅರೇ! ಇದೇನು ವಿಚಿತ್ರ ಅಂದ್ಕೊಂಡ್ರಾ? ಶಿವಮೊಗ್ಗದಲ್ಲಿ (Shivamogga Hitech Auto) ಇಂಥದ್ದೊಂದು ಥಟ್ ಅಂತಾ ಕಣ್ಸೆಳೆಯೋ ಹೈಟೆಕ್ ಆಟೋ ತುಂಬಾ ಗಮನ ಸೆಳೆಯುತ್ತಿದೆ. ಬಾಬಾ ಕಿಂಗ್ ಅಲಿಯಾಸ್ ಸೈಯ್ಯದ್ ಅಶ್ರಫ್ ಎಂಬ ವ್ಯಕ್ತಿಯೇ ಈ ಹೈಟೆಕ್ ಆಟೋ ಓನರ್. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ಸ್ಪರ್ಶ ನೀಡಲಾಗಿದೆ.


    ಜೀವನ ನಿರ್ವಹಣೆಗಾಗಿ ಸೈಯ್ಯದ್ ಅಶ್ರಫ್ ಅವ್ರ ತಾಯಿ ಒಂದು ಆಟೋ ಕೊಡಿಸಿದ್ರಂತೆ. ಆ ಆಟೋದಿಂದ ದುಡಿದು ಇನ್ನೊಂದು ಆಟೋ ಖರೀದಿಸಿರೋ ಅಶ್ರಫ್ ತಾಯಿ ಕೊಡಿಸಿದ ಆಟೋವನ್ನೇ ಹೀಗೆ ಸೂಪರ್ ಆಗಿ ಮಾರ್ಪಡಿಸಿದ್ದಾರೆ.


    ಹುಲಿ ಚರ್ಮದ ಮಾದರಿಯ ಟಾಪ್
    ಈ ಆಟೋದ ಹಿಂಬದಿ ಎರಡೂ ಕಡೆ ಮೂರು ಚಕ್ರಗಳಿವೆ. ವಿಭಿನ್ನವಾದ ಮಡ್ ಗಾರ್ಡ್ ಇದೆ. ಹುಲಿ ಚರ್ಮದ ಮಾದರಿ ಹೋಲುವ ಟಾಪ್ ಇದ್ದು ಹಿಂಬದಿ ಇಂಜಿನ್​ಗೆ ಸ್ಟೀಲ್ ಕೋಟ್ ಅಳವಡಿಲಾಗಿದೆ.


    ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


    ಇನ್ನೂ ಇವೆಲ್ಲಾ ಇದೆ
    ಗಾಜಿನ ಬಾಗಿಲು ಚಾಲಕನ ಸೀಟಿನ ಹಿಂಬದಿ ಸ್ಟೀಲ್ ಬಳಸಿ ತಾಜ್ ಮಹಲ್ ಮಾದರಿಯನ್ನು ರೂಪಿಸಲಾಗಿದೆ. ಆಟೋದ ಹ್ಯಾಂಡಲ್, ಬ್ರೇಕ್ ಲಿವರ್ ಎಲ್ಲವೂ ಸ್ಟೀಲ್ನದ್ದೇ ಆಗಿದ್ದು ಒಳಭಾಗದಲ್ಲಿ ಮ್ಯೂಸಿಕ್ ಸಿಸ್ಟಮ್, ಇಂಟೀರಿಯರ್ ಲೈಟಿಂಗ್ ಎಲ್ಲಾ ಇದೆ.


    ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


    ಒಟ್ನಲ್ಲಿ ಶಿವಮೊಗ್ಗದಲ್ಲಿ ಈ ಆಟೋ ರೋಡಿಗಿಳಿದರೆ ಸಾಕು ಜನರೆಲ್ಲಾ ಕುತೂಹಲದಿಂದ ಕಣ್ಣರಳಿಸ್ತಿದ್ದಾರಂತೆ

    Published by:ಗುರುಗಣೇಶ ಡಬ್ಗುಳಿ
    First published: