ಶಿವಮೊಗ್ಗದ ವಿವಾದಾತ್ಮಕ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ; ನಗರದೆಲ್ಲೆಡೆ ಕಟ್ಟೆಚ್ಚರ

 ಹಿಂದೂ ಮಹಾಸಭಾದ 75ನೇ ವರ್ಷದ ಗಣಪತಿಯನ್ನು ನಗರದ ಕೋಟೆ ರಸ್ತೆಯಲ್ಲಿ ಕೂರಿಸಲಾಗಿದ್ದು, ಈ ಬಾರಿ ವಿಜೃಂಭಣೆಯ ಹೆಚ್ಚಾಗಿದೆ.

Seema.R | news18-kannada
Updated:September 11, 2019, 4:15 PM IST
ಶಿವಮೊಗ್ಗದ ವಿವಾದಾತ್ಮಕ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ; ನಗರದೆಲ್ಲೆಡೆ ಕಟ್ಟೆಚ್ಚರ
ಶಿವಮೊಗ್ಗದ ಹಿಂದೂ ಮಹಸಭಾ ಗಣೇಶ
  • Share this:
ಬೆಂಗಳೂರು (ಸೆ.11): ನಗರದ ವಿವಾದಾತ್ಮಕ ಗಣೇಶ ಎಂದೇ ಹೆಸರಾಗಿರುವ ಹಿಂದೂ ಮಹಾಸಭಾ ಮಂಡಳಿಯ ಗಣಪತಿ ವಿಸರ್ಜನಾ ಕಾರ್ಯಕ್ರಮ ನಾಳೆ ನಡೆಯಲಿದ್ದು, ನಗರದೆಲ್ಲೆಡೆ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.

ಹಿಂದೂ ಮಹಾಸಭಾದ 75ನೇ ವರ್ಷದ ಗಣಪತಿಯನ್ನು ನಗರದ ಕೋಟೆ ರಸ್ತೆಯಲ್ಲಿ ಕೂರಿಸಲಾಗಿದ್ದು, ಈ ಬಾರಿ ವಿಜೃಂಭಣೆಯ ಹೆಚ್ಚಾಗಿದೆ. ಗಣೇಶ  ವಿಸರ್ಜನೆಗೂ ಮುನ್ನ  ಗಾಂಧಿ ಬಜಾರ್​, ಅಮಿರ್​ ಅಹ್ಮದ್​ ವೃತ್ತ, ಶಿವಪ್ಪ ನಾಯಕ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ರಾಜಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.

ಇನ್ನು ಈ ಗಣೇಶ ವಿಸರ್ಜನೆ ಮಸೀದಿ ಮುಂದೆ ಸಾಗುವ ಹಿನ್ನೆಲೆ ಕಟ್ಟೆಚ್ಚರವಹಿಸಲಾಗಿದ್ದು, ಯಾವುದೇ ಹಾನಿಯಾದಂತೆ ನಗರದೆಲ್ಲೆಡೆ ಖಾಕಿ ಕಣ್ಗಾವಲು ಹಾಕಲಾಗಿದೆ.

ganesh shimoga
ನಗರದ ಗಾಂಧಿ ಬಜಾರ್​ನ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ದ್ವಾರ


ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆ ಗಾಂಧಿ ಬಜಾರ್​ ಸಂಪೂರ್ಣ ಕೇಸರಿಮಯವಾಗಿದ್ದು, ಮೆರವಣಿಗೆ ಸಾಗುವ ಗಾಂಧಿ ಬಜಾರ್​ನ ಪ್ರವೇಶದಲ್ಲಿ ಚತ್ರಪತಿ ಶಿವಾಜಿ ಪ್ರತಿಮೆಯ ಬೃಹತ್​ ದ್ವಾರವನ್ನು ನಿರ್ಮಿಸಲಾಗಿದೆ.

ಈ ಹಿಂದೆಯೆಲ್ಲಾ ವಿವಾದಾತ್ಮಕ ಗಣಪತಿ ಎಂದೇ ಹೆಸರಾಗಿದ್ದ ಈ ಗಣೇಶ ವಿಸರ್ಜನೆ ವೇಳೆ ಅನೇಕ ಅಹಿತಕರ ಘಟನೆಗಳು ನಡೆದ ಇತಿಹಾಸವಿದೆ. ಈ ಹಿನ್ನೆಲೆ ನಗರದಲ್ಲಿ ಮೆರವಣಿಗೆ ಸಾಗುವಾಗ ಪೊಲೀಸ್​ ಸರ್ಪಗಾವಲು ಹಾಕಲಾಗಿದೆ.

ಇದನ್ನು ಓದಿ: ದಸರಾ ಸಂಭ್ರಮ 2019: ಗೋಲ್ಡನ್​ ಸ್ಟಾರ್​ ಗಣೇಶ್​ರಿಂದ ಈ ಬಾರಿ ಯುವ ದಸರಾ ಉದ್ಘಾಟನೆಬಂದೋಬಸ್ತ್​ಗೆ  ಓರ್ವ ಎಸ್, ಪಿ,  3 ಎಎಸ್ ಪಿ  16 ಡಿವೈಎಸ್ ಪಿ, ತಲಾ 51 ಸಿಪಿಐ ಹಾಗೂ ಪಿಎಸ್ಐ, 156 ಎಎಸ್ಐ ನಿಯೋಜನೆ ಮಾಡಲಾಗಿದೆ. ಜೊತೆಗೆ 3 ಸಾವಿರ ಹೆಚ್ಚು ಜನ ಹೆಚ್ ಪಿಸಿ,  ಪಿಸಿ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿಗಳ ಕೂಡ ಇರಲಿದ್ದಾರೆ. 1 ಆರ್ ಎ ಎಫ್, 14 ಕೆಎಸ್ ಆರ್ ಪಿ,   13 ಡಿಎಅರ್ ತುಕಡಿ ಸ್ಥಳದಲ್ಲಿ ಬೀಡು ಬಿಡಲಿದ್ದು, ಈಗಿರುವ 100 ಸಿಸಿ ಕ್ಯಾಮರಾ ಜೊತೆ 200 ಹೆಚ್ಚುವರಿ ಸಿಸಿ ಕ್ಯಾಮಾರ ಮತ್ತ  3 ಡ್ರೋನ್ ಕ್ಯಾಮರಾ ಬಳಕೆ ಮಾಡಲಾಗುವುದು ಎಂದು ಎಸ್​ಪಿ ಕೆಎಂ ಶಾಂತರಾಜು ತಿಳಿಸಿದ್ದಾರೆ.

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ