Smart City: ಕೇಂದ್ರದ ಮಹತ್ವಾಕಾಂಕ್ಷೆಯ ಸ್ಮಾರ್ಟ್‌ ಸಿಟಿ ಶ್ರೇಯಾಂಕದಲ್ಲಿ ಏರಿಕೆ ಕಂಡ ಶಿವಮೊಗ್ಗ

ಕೇಂದ್ರ ಸರ್ಕಾರ ನಿಗದಿಪಡಿಸಿದ ವಿವಿಧ ಅಭಿವೃದ್ಧಿ ಸೂಚಕಗಳ ಮಾನದಂಡದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿಯು ರಾಜ್ಯದಲ್ಲಿ 2ನೇ ಸ್ಥಾನ ಹಾಗೂ ರಾಷ್ಟ್ರ ಮಟ್ಟದಲ್ಲಿ 13ನೇ ಸ್ಥಾನದ ಶ್ರೇಯಾಂಕ ಪಡೆದಿದೆ.

ಶಿವಮೊಗ್ಗ ನಗರ.

ಶಿವಮೊಗ್ಗ ನಗರ.

  • Share this:
ಶಿವಮೊಗ್ಗ (ಮೇ 16); ಸ್ಮಾರ್ಟ್ ಸಿಟಿ  ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು. ದೇಶದ ಹಲವು ನಗರಗಳನ್ನು ಆಯ್ಕೆ ಮಾಡಿಕೊಂಡು, ಅವುಗಳನ್ನು ಅಭಿವೃದ್ಧಿ ಮಾಡಿಸುವುದರ  ಜೊತೆಗೆ ಸ್ಮಾರ್ಟ್‌ ಆಗಿ ಮಾರ್ಪಾಡು ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹ ಭಾಗಿತ್ವದಲ್ಲಿ ಈ ಯೋಜನೆ ನಡೆಯುತ್ತಿದೆ.

ಸ್ಮಾರ್ಟಿ ಸಿಟಿಗೆ ಆಯ್ಕೆಗೊಂಡ ನಗರವನ್ನು 5 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಪಡಿಸುವುದು, ಪರಿಸರ ಸ್ನೇಹಿ ನಗರ ಮಾಡುವುದು, ಕ್ಲೀನ್ ಸಿಟಿಯಾಗಿ ಮಾಡುವ ಯೋಜನೆ ಇದಾಗಿದೆ.  ಇಂತಹ ಒಂದು ಮಹಾತ್ವಕಾಂಕ್ಷಿ ಯೋಜನೆಯ ಅನುಷ್ಠಾನದಲ್ಲಿ ಶಿವಮೊಗ್ಗ ಸ್ಮಾರ್ಟಿ ಸಿಟಿಗೆ  ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಳ ಶ್ರೇಯಾಂಕದಲ್ಲಿ ರಾಷ್ಟ್ರ ಮಟ್ಟದಲ್ಲಿ 16ನೇ ಸ್ಥಾನ ಪಡೆದಿದೆ. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಶಿವಮೊಗ್ಗ ಸ್ಮಾರ್ಟಿ ಸಿಟಿ 2 ಸ್ಥಾನಕ್ಕೆ ಏರಿಕೆ ಕಂಡಿದೆ.

ಕೇಂದ್ರ ಸರ್ಕಾರ ನಿಗದಿಪಡಿಸಿದ ವಿವಿಧ ಅಭಿವೃದ್ಧಿ ಸೂಚಕಗಳ ಮಾನದಂಡದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿಯು ರಾಜ್ಯದಲ್ಲಿ 2ನೇ ಸ್ಥಾನ ಹಾಗೂ ರಾಷ್ಟ್ರ ಮಟ್ಟದಲ್ಲಿ 13ನೇ ಸ್ಥಾನದ ಶ್ರೇಯಾಂಕ ಪಡೆದಿದೆ. ಕೋವಿಡ್ -19ರ ನಿರ್ಬಂಧದ ಕಾರಣ ಸ್ಥಳದಲ್ಲಿ ಕಾಮಗಾರಿಗಳ ಅನುಷ್ಠಾನದಲ್ಲಿ ಅಡಚಣೆ, ಆಗಿದ್ದರೂ ಈ ಕೆಳಕಂಡ ಪ್ರಮುಖ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾದ ಕಾರಣ ಈ ಮೇಲ್ದರ್ಜೆ ಪ್ರಾಪ್ತವಾಗಿದೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿಯ ನಿರ್ದೇಶಕ ಚಿದಾನಂದ ವಾಟಾರೆ ಮಾಹಿತಿ ನೀಡಿದ್ದಾರೆ.

1. ನೆಹರೂ ಕ್ರೀಡಾಂಗಣದಲ್ಲಿ ಈಗಿರುವ ಕ್ರೀಡಾ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸುವ ಹಂತ-2  ರೂಪಾಯಿ 26.06 ಕೋಟಿ ಕಾಮಗಾರಿಗೆ ಕಾರ್ಯಾದೇಶ ನೀಡಿರುವುದು.

2. ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಹತ್ತಿರದ ಬೀದಿ ಬದಿ ವ್ಯಾಪಾರಿಗಳ ವಲಯ (ಹಾಕರ್ಸ್ ಝನ್) ನಿರ್ಮಾಣ ಕಾಮಗಾರಿಯ ರೂ.12.42 ಕೋಟಿ ಮೌಲ್ಯದ ಟೆಂಡರ್ ಪ್ರಕ್ರಿಯೆ ನಡೆಸಲಾಗಿರುವುದು.

3. ಶಿವಮೊಗ್ಗ ನಗರದಲ್ಲಿ ಎಲ್.ಇ.ಡಿ. ಬೀದಿ ದೀಪಗಳ ಅಳವಡಿಕೆಯ ಕಾರ್ಯಕ್ರಮದ ಅನುಷ್ಟಾನಕ್ಕೆ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರ, ಚಾಲನಾ ಸಮಿತಿ ಸಭೆಯಲ್ಲಿ ಅನುಮೋದನೆ ದೊರೆತಿರುವುದು.

4. ಸರ್ಕಾರ ನಿಗದಿಪಡಿಸಿದ ಅನುದಾನ ಬಳಕೆಯು ಗುರಿಯನ್ನು ಸಾಧಿಸಿರುವುದು ಈ ಎಲ್ಲಾ ವಿಷಯಗಳನ್ನು ಗಮನಿಸಿ ಶಿವಮೊಗ್ಗ ಸ್ಮಾರ್ಟಿ ಸಿಟಿಯ ಕಾಮಗಾರಿಗೆ ಶ್ರೇಯಾಂಕ ಸಿಕ್ಕಿದೆ.

ಜೊತೆಗೆ ನಗರಾಭಿವೃದ್ಧಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸತ್ ಸದಸ್ಯರ ನಿರಂತರ ಮಾರ್ಗದರ್ಶನ, ಮಂಡಳಿಯ ಅಧ್ಯಕ್ಷರ ನಿರ್ದೇಶನ, ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆ ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳ ಸಹಕಾರದೊಂದಿಗೆ ನಿರಂತರವಾಗಿ ಪ್ರಗತಿ ಪರಿಶೀಲನಾ ಸಭೆ, ಭಾಗೀದಾರ ಇಲಾಖೆಗಳು ಹಾಗೂ ಗುತ್ತಿಗೆದಾರರ ಸಮನ್ವಯ ಸಭೆ ಮತ್ತು ಶಾಸನಬದ್ಧ ಸಭೆಗಳನ್ನು ನಡೆಸಲಾಗುತ್ತಿದೆ.

ಇದರ ಜೊತೆಗೆ ಶಿವಮೊಗ್ಗ ಸ್ಮಾರ್ಟ್ ಸಿಟಿಯ ಸಿಬ್ಬಂದಿಯ ಸಮರ್ಪಣೆ ಕಾರ್ಯ ನಿರ್ವಹಣೆಯಿಂದಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಶಿವಮೊಗ್ಗ  ಸ್ಮಾರ್ಟಿ ಸಿಟಿಯ ಶ್ರೇಯಾಂಕದಲ್ಲಿ ಏರಿಕೆಯಾಗಿದೆ ಎಂದು ಶಿವಮೊಗ್ಗ ಸ್ಮಾರ್ಟ್‌ ಸಿಟಿ ನಿರ್ದೇಶಕ  ಚಿದಾನಂದ ವಟಾರೆ ಮಾಹಿತಿ  ನೀಡಿದ್ದಾರೆ.

(ವರದಿ - ಹೆಚ್‌.ಆರ್‌. ನಾಗರಾಜ್‌)

ಇದನ್ನೂ ಓದಿ : ದೇಶದಲ್ಲಿ 24 ಗಂಟೆಯಲ್ಲಿ 3,970 ಮಂದಿಗೆ ಕೊರೋನಾ; 85 ಸಾವಿರ ದಾಟಿದ ಸೋಂಕಿತರ ಸಂಖ್ಯೆ, 2,752 ಜನ ಸಾವು
First published: