Harsha Murder Case: ಶಿವಮೊಗ್ಗದಲ್ಲಿ ಫೆ.25ರ ವರೆಗೆ ಶಾಲಾ, ಕಾಲೇಜಿಗೆ ರಜೆ ವಿಸ್ತರಣೆ, 2 ದಿನಗಳ ಕಾಲ ಕರ್ಫ್ಯೂ ಮುಂದುವರಿಕೆ

ಜಿಲ್ಲೆಯಾದ್ಯಂತ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಾಲೆ-ಕಾಲೇಜಿಗೆ ರಜೆ ವಿಸ್ತರಣೆ ಮಾಡಿರೋದಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಹೇಳಿದ್ದಾರೆ

ಹರ್ಷ

ಹರ್ಷ

  • Share this:
ಶಿವಮೊಗ್ಗ (ಫೆ.22):  ಶಿವಮೊಗ್ಗದಲ್ಲಿ (Sivamogga) ಬಜರಂಗದಳ ಕಾರ್ಯಕರ್ತ ಹರ್ಷ ((Bajrangdal Activist Harsha)) ಹತ್ಯೆ ಹಿನ್ನೆಲೆ ನಗರದಾದ್ಯಂತ ಪೊಲೀಸರ ಸರ್ಪಗಾವಲು ಸುತ್ತುವರಿದಿದೆ. ಇನ್ನೂ ಎರಡು ದಿನಗಳ ಕಾಲ ಕರ್ಫ್ಯೂ (Curfew) ಮುಂದುವರೆಯಲಿದೆ. ಜೊತೆಗೆ ಫೆಬ್ರವರಿ 25ರ ವರೆಗೆ ಶಾಲೆ-ಕಾಲೇಜಿಗ ರಜೆ ವಿಸ್ತರಣೆ ಮಾಡಲಾಗಿದೆ. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ, (District Collector Selvamani) ನಗರದಾದ್ಯಂತ ಇನ್ನೂ 2 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮುಂದುವರಿಸೋದಾಗಿ ತಿಳಿಸಿದ್ರು. ಜಿಲ್ಲೆಯಾದ್ಯಂತ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಾಲೆ-ಕಾಲೇಜಿಗೆ ರಜೆ ವಿಸ್ತರಣೆ ಮಾಡಿರೋದಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಹೇಳಿದ್ರು. ಶಿವಮೊಗ್ಗ ಸಹಜ ಸ್ಥಿತಿಗೆ ಮರಳುತ್ತಿದೆ. ಜನರು ಶಾಂತಿ ಕಾಪಾಡಬೇಕೆಂದು ಜಿಲ್ಲಾಧಿಕಾರಿ ಸೆಲ್ವಮಣಿ ಮನವಿ ಮಾಡಿಕೊಂಡ್ರು.

ಕರ್ಫೂ ಮುಂದುವರಿಕೆ, ರಜೆ ವಿಸ್ತರಣೆ

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಪೊಲೀಸರ ಸರ್ಪಗಾವಲು ಸುತ್ತುವರಿದಿದೆ. ಹರ್ಷನ ಮನೆ ಸುತ್ತಮುತ್ತ ಆರ್​ಎಎಫ್​​ ಸಿಬ್ಬಂದಿ ಕಾವಲು ನಿಯೋಜನೆ ಮಾಡಲಾಗಿದೆ. ತೀರ್ಥಹಳ್ಳಿ ರಸ್ತೆಯ ಸೀಗೆಹಟ್ಟಿಯಲ್ಲಿರುವ ಹರ್ಷ ನಿವಾಸದಲ್ಲಿ ಪೊಲೀಸರು ಕಾವಲಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ. 2 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ್ದು, ಫೆಬ್ರವರಿ 25ರ ವರೆಗೆ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Shivamogga Murder: ತಪ್ಪಿತಸ್ಥರನ್ನು ಬಿಡಲ್ಲ- ಈ ಪ್ರಕರಣಕ್ಕೆ ತಾರ್ಕಿಕ‌ ಅಂತ್ಯ ನೀಡುತ್ತೇವೆ: ಆರಗ ಜ್ಞಾನೇಂದ್ರ

 ಹರ್ಷನ ಕೊಲೆ ಕೇಸ್​, 7 ಮಂದಿ ಅರೆಸ್ಟ್

ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ  ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಇದುವರೆಗೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳೆಲ್ಲಾ ಶಿವಮೊಗ್ಗದವರೇ ಆಗಿದ್ದಾರೆ. 7 ಆರೋಪಿ ಜಿಲಾನಿಯನ್ನು ಬಂಧಿಸಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹರ್ಷನ ಕೊಲೆ ಬಳಿಕ ಜಿಲಾನಿ ಕಾರು ಚಲಾಯಿಸಿಕೊಂಡು ಆರೋಪಿಗಳನ್ನು ಕರೆದೊಯ್ದಿದ್ದ. ಸದ್ಯ ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಆರೋಪಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

1) ಆಸೀಫ್ (22) - ಶಿವಮೊಗ್ಗ ಬೈಪಾಸ್ ನಿವಾಸಿ

2) ರಿಯಾಜ್ ಶರೀಫ್ ( 21)-  ಸಹ್ಯಾದ್ರಿ ಕಾಲೇಜು ಬಳಿ ನಿವಾಸಿ ಶಿವಮೊಗ್ಗ

3) ಖಾಸಿಫ್ ( 30) - ಬುದ್ಧ ನಗರ ಶಿವಮೊಗ್ಗ

4) ಅಫನ್ ( 20)  - ಬಾಪೂಜಿನಗರ - ಶಿವಮೊಗ್ಗ

5) ಮುಜಾಯಿದ್ - ಶಿವಮೊಗ್ಗ

6) ಜಿಲಾನಿ - ಶಿವಮೊಗ್ಗ

7) ನದೀಂ – ಶಿವಮೊಗ್ಗ

‘ಸೂಕ್ಷ್ಮವಾಗಿ ತನಿಖೆ ನಡೆಸಲಾಗ್ತಿದೆ’

ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಯನ್ನು ಯಾರು ಮಾಡಿದ್ದಾರೆ ಮತ್ತು ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ನಮ್ಮ ಪೊಲೀಸರ ಬಳಿ ಇದೆ. ಈ ಸಂಬಂಧ ಸದ್ಯ ಮೂರು ಎಫ್​ಐಆರ್ ದಾಖಲಾಗಿವೆ. ಈ ಪ್ರಕರಣದ ತನಿಖೆಯನ್ನು ನಾವು ಸೂಕ್ಷ್ಮವಾಗಿ ನಡೆಸುತ್ತಿದ್ದೇವೆ ಎಂದು ಕಾನೂನು ಹಾಗೂ ಸುವ್ಯವಸ್ಥೆಯ ಎಡಿಜಿಪಿ ಪ್ರತಾಪ್​​ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: Harsha Murder ಟ್ರೈಲರ್ ಅಷ್ಟೇ, ಇನ್ನೂ ಸಿನಿಮಾ ಬಾಕಿ ಇದೆ: ಪ್ರಕರಣಕ್ಕೆ ಹೊಸ ತಿರುವು ಕೊಟ್ಟ HDK

ಇನ್ನೂ ಕೆಲ ಆರೋಪಿಗಳಿಗಾಗಿ ಹುಡುಕಾಟ

ಹರ್ಷ ಕೊಲೆ ಪ್ರಕರಣದಲ್ಲಿ ಈಗ ದಸ್ತಗಿರಿ ಮಾಡಿರುವವರ ಬಗ್ಗೆ ನಮ್ಮ ಎಸ್ಪಿ ಅವರು ಮಾಹಿತಿ ನೀಡುತ್ತಾರೆ. ಕೊಲೆಯನ್ನು ಯಾರು ಮಾಡಿದ್ದಾರೆ ಮತ್ತು ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ನಮ್ಮ ಪೊಲೀಸರ ಬಳಿ ಇದೆ. ಆರೋಪಿಗಳನ್ನು ಬಂಧಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ. ಅವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.‌ಈಗ ಬಂಧಿತ ಆರೋಪಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಒಬ್ಬರು ಒಂದೊಂದು ರೀತಿಯ ಮಾಹಿತಿಯನ್ನು ನೀಡುತ್ತಿದ್ದಾರೆ. ಅದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ. ನಿನ್ನೆ ನಡೆದ ಮೆರವಣಿಗೆಯ ವೇಳೆ ಹಾನಿಗೊಳಗಾದ ವಸ್ತುಗಳ ಮಾಲೀಕರ ಮಾಹಿತಿ ಪಡೆಯುತ್ತಿದ್ದೇವೆ. ಸದ್ಯ ಮೂರು ಎಫ್​ಐಆರ್ ದಾಖಲಾಗಿವೆ. ನಿನ್ನೆ 14 ಘಟನೆಗಳನ್ನು ನಾವು ಲಿಸ್ಟ್ ಮಾಡಿದ್ದೇವೆ ಎಂದು ಎಡಿಜಿಪಿ ಮಾಹಿತಿ ನೀಡಿದರು.‌
Published by:Pavana HS
First published: