• Home
  • »
  • News
  • »
  • state
  • »
  • Shivamogga Deepavali: ಕೊಟ್ಟಿಗೆಯಲ್ಲೂ ದೀಪಾವಳಿ! ಇದು ಮಲೆನಾಡಿನ ವಿಶೇಷ

Shivamogga Deepavali: ಕೊಟ್ಟಿಗೆಯಲ್ಲೂ ದೀಪಾವಳಿ! ಇದು ಮಲೆನಾಡಿನ ವಿಶೇಷ

ಇಲ್ಲಿ ನೋಡಿ ಮಲ್ನಾಡ್ ದೀಪಾವಳಿ

"ಇಲ್ಲಿ ನೋಡಿ ಮಲ್ನಾಡ್ ದೀಪಾವಳಿ"

Shivamogga Deepavali: ವರ್ಷಪೂರ್ತಿ ಕುಟುಂಬದ ಹಿರಿ ಮಗನಂತೆ ದುಡಿಯೋ ದನಕರು, ಎತ್ತುಗಳ ಋಣ ತೀರಿಸಲು ದೀಪಾವಳಿಯ ಬಲಿ ಪಾಡ್ಯಮಿಯಂದು ಮಲೆನಾಡ ಕೃಷಿಕರು ಆಕಳು ಮತ್ತು ಎತ್ತುಗಳಿಗೆ ಪೂಜೆ ಮಾಡಿದರು.

  • News18 Kannada
  • Last Updated :
  • Shimoga, India
  • Share this:

    ಶಿವಮೊಗ್ಗ: ಮುದ್ಮುದ್ದು ಪುಟ್ಟ ಪುಟಾಣಿ ಕರುಗಳು, ಜಾನುವಾರುಗಳಿಗೆ ಚಂದಚಂದದ ಹೂವಿನ ಹಾರ, ಬಗೆಬಗೆಯ ಸಿಂಗಾರ, ದೊಡ್ಡಹಬ್ಬ ಅಂತಾನೇ ಕರೆಸಿಕೊಳ್ಳೋ ದೀಪಾವಳಿ ಮಲೆನಾಡಿನ ಕೃಷಿಕರ ಪಾಲಿಗಂತೂ ನಿಜಕ್ಕೂ ದೊಡ್ಡಹಬ್ಬಾನೇ! ವರ್ಷವಿಡೀ ರೈತಾಪಿ ಕೆಲಸಕ್ಕೆ ಜೊತೆಯಾಗೋ ಆಕಳು-ಎತ್ತುಗಳ ಮುಖದಲ್ಲೂ ಹಬ್ಬದ ಸಂಭ್ರಮದ (Deepavali Celebration) ಕಳೆ ಕಾಣ್ತಿತ್ತು! ಶಿವಮೊಗ್ಗದ (Shivamogga News) ಕೃಷಿಕರ, ಹೈನುಗಾರರಲ್ಲಂತೂ ದೀಪಾವಳಿ ಸಂಭ್ರಮ ಭರ್ಜರಿಯಾಗಿತ್ತು.


    ಇದನ್ನೂ ಓದಿ: Koragajja Miracle: ಸಾಗರದ 4 ತಿಂಗಳ ಬಾಲೆಯನ್ನು ಕಾಪಾಡಿದ ಉಡುಪಿಯ ಕೊರಗಜ್ಜ!


    ವರ್ಷಪೂರ್ತಿ ಕುಟುಂಬದ ಹಿರಿ ಮಗನಂತೆ ದುಡಿಯೋ ದನಕರು, ಎತ್ತುಗಳ ಋಣ ತೀರಿಸಲು ದೀಪಾವಳಿಯ ಬಲಿ ಪಾಡ್ಯಮಿಯಂದು ಮಲೆನಾಡ ಕೃಷಿಕರು ಆಕಳು ಮತ್ತು ಎತ್ತುಗಳಿಗೆ ಪೂಜೆ ಮಾಡಿದರು.


    ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


    ಚೆಂಡು ಹೂವುಗಳಿಂದ ಅಲಂಕರಿಸಿ ಚಪ್ಪೆ ರೊಟ್ಟಿ, ಚೆಂಡು ಹೂವು, ಪಚ್ಚತೆನೆ, ವೀಳ್ಯದ ಎಲೆ, ಅಡಿಕೆಗಳ ಹಾರ ತಯಾರಿಸಿ ಗೋವುಗಳಿಗೆ ಸಿಂಗಾರ ಮಾಡಿದರು. ಅಕ್ಕಿ ಬೆಲ್ಲ, ಬಾಳೆ ಹಣ್ಣು ನೀಡಿ ಕೃತಜ್ಞತೆ ಸಲ್ಲಿಸಿದರು. ಒಟ್ಟಾರೆ ಹಬ್ಬ ಮಲೆಯಲ್ಲೊಂದೇ ಅಲ್ದೇ, ಕೊಟ್ಟಿಗೆಯಲ್ಲೂ ದೀಪಾವಳಿ ಹಬ್ಬ ಜೋರಾಗಿತ್ತು.

    Published by:ಗುರುಗಣೇಶ ಡಬ್ಗುಳಿ
    First published: