ಬೆಂಗಳೂರು (ಜೂ. 21): ಕೊರೋನಾ ಸೋಂಕು ಕಡಿಮೆಯಾದ ಹಿನ್ನಲೆ 6 ಜಿಲ್ಲೆಗಳಲ್ಲಿ ಅನ್ಲಾಕ್ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ. ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರದಲ್ಲಿ ಅನ್ಲಾಕ್ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಸಾರಿಗೆ ಸಂಚಾರ ಇರಲಿದ್ದು, ಹೊಟೇಲ್, ಅಂಗಡಿ ಮುಗ್ಗಟ್ಟುಗಳು ಕೂಡ ಸಂಜೆವರೆಗೆ ಕಾರ್ಯನಿರ್ವಹಿಸಲಿದೆ. ರಾತ್ರಿ 7 ಗಂಟೆ ಬಳಿಕ ಎಂದಿನಂತೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದ್ದು, ವಿಕೇಂಡ್ ಕರ್ಪ್ಯೂ ಕೂಡ ಜಾರಿಯಲ್ಲಿ ಇರಲಿದೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಶನಿವಾರ ಅನ್ಲಾಕ್ 2.0 ಘೋಷಣೆ ಮಾಡಿದ ಮಖ್ಯಮಂತ್ರಿಗಳು 13 ಜಿಲ್ಲೆಗಳಲ್ಲಿ ಸೋಂಕು ಇಳಿಕೆಯಾದ ಪರಿಣಾಮ ಲಾಕ್ಡೌನ್ ನಿಯಮ ಸಡಿಲಿಕೆ ಮಾಡಿ ಆದೇಶಿಸಿದ್ದರು. ಈ ವೇಳೆ ಮೈಸೂರು, ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಬೆಂಗಳೂರು ಗ್ರಾ., ದಾವಣಗೆರೆ, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ವಿಜಯಪುರದಲ್ಲಿ ಎಂದಿನಂತೆ ಲಾಕ್ಡೌನ್ ಮುಂದುವರೆಯಲಿದೆ ಎಂದು ಘೋಷಿಸಿದ್ದರು.
13 ಜಿಲ್ಲೆಗಳಲ್ಲಿ ಮೈಸೂರು ಹೊರತು ಪಡಿಸಿ ಇನ್ನು ಉಳಿದ ಜಿಲ್ಲೆಗಳಲ್ಲಿ ಸೋಂಕಿನ ದರ ಶೇ. 5ಕ್ಕಿಂತ ಕಡಿಮೆಯಿರುವ ಹಿನ್ನಲೆ ಈಗ ಮತ್ತೆ ಉಳಿದ 6 ಜಿಲ್ಲೆಗಳಲ್ಲಿ ಅನ್ಲಾಕ್ ಮಾಡಿ ಮರು ಆದೇಶ ಮಾಡಲಾಗಿದೆ. ಅನ್ಲಾಕ್ ಆದರೂ ಜನರು ಸೋಂಕಿನ ಬಗ್ಗೆ ಜಾಗ್ರತೆವಹಿಸುವಂತೆ ತಿಳಿಸಿದ್ದಾರೆ. ಇನ್ನುಳಿದ 7 ಜಿಲ್ಲೆಗಳಲ್ಲಿ ಮುಂಚಿನಂತೆ ಕಟ್ಟು ನಿಟ್ಟಿನ ಲಾಕ್ಡೌನ್ ಮುಂದುವರೆಸುವುದಾಗಿ ತಿಳಿಸಲಾಗಿದೆ.
ಯಾವ ಜಿಲ್ಲೆಗಳಲ್ಲಿ ಅನ್ಲಾಕ್
ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರ
ಇದನ್ನು ಓದಿ: ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಅವರು ಉಡುಗೆಯೇ ಕಾರಣ; ಪಾಕ್ ಪ್ರಧಾನಿ
ಏನೆಲ್ಲಾ ವಿನಾಯಿತಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ