Shivamogga Airport Name: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡಲು ತೀರ್ಮಾನಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಕಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದರು.

  • Share this:

    ಶಿವಮೊಗ್ಗ: ಉದ್ಘಾಟನೆಗೆ ಸಿದ್ಧವಾದ ವಿಮಾನ ನಿಲ್ದಾಣಕ್ಕೆ (Shivamogga Airport Name) ಇಡುವ ಹೆಸರಿನದ್ದೇ ಸುದ್ದಿ! ಹೌದು, ಹೊಸ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವr ಹೆಸರನ್ನು ಇಡಲು ರಾಜ್ಯ ಸರ್ಕಾರ (Karnataka Government) ಚಿಂತನೆ ನಡೆಸಿದೆ. ಅಲ್ಲದೇ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ರವಾನಿಸಿದೆ. ಈ ಕುರಿತು ಶಿವಮೊಗ್ಗಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮಾಹಿತಿ ನೀಡಿದ್ದಾರೆ.


    2006 ಮತ್ತು ಈಗಿನ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಕರ್ನಾಟಕದ ಭವಿಷ್ಯದ ನಗರ ಶಿವಮೊಗ್ಗವಾಗಿದೆ. ದಾಖಲೆಯ 18 ತಿಂಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆಗಿದೆ. ಇದರಿಂದ ಎಲ್ಲ ದೃಷ್ಟಿಯಲ್ಲಿ ಶಿವಮೊಗ್ಗ ಅಭಿವೃದ್ಧಿ ಕಾಣಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.


    ಶಿವಮೊಗ್ಗ ಜನರ ಪ್ರೀತಿಗೆ ಮನ್ನಣೆ
    ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ  ಹೆಸರನ್ನು ಇಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಯಡಿಯೂರಪ್ಪ ಅವರು ಅದಕ್ಕೆ ತಡೆಯೊಡ್ಡಿದ್ದರು. ಆದರೂ ಸಹ ಜನರ ಪ್ರೀತಿಗೆ ಬಗ್ಗಲೇಬೇಕು. ಶಿವಮೊಗ್ಗ ಜನರ ಪ್ರೀತಿಗೆ ಮನ್ನಣೆ ನೀಡುತ್ತೇವೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದರು.


    ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
    ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡಲು ತೀರ್ಮಾನಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಕಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದರು.


    ಇದನ್ನೂ ಓದಿ: Shivamogga Airport: 660 ಎಕರೆಯ ಶಿವಮೊಗ್ಗ ಏರ್​ಪೋರ್ಟ್​ ಹೀಗಿದೆ ನೋಡಿ




    3,200 ಮೀಟರ್ ಉದ್ದದ ರನ್ ವೇ
    ಶಿವಮೊಗ್ಗ ವಿಮಾನ ನಿಲ್ದಾಣ ಕರ್ನಾಟಕದ ಅತಿ ದೊಡ್ಡ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಆಗಲಿದೆ. 3,200 ಮೀಟರ್ ಉದ್ದದ ರನ್ ವೇ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಫೆಬ್ರುವರಿ 12ರಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರೇ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ.


    660 ಎಕರೆ ಪ್ರದೇಶದಲ್ಲಿದೆ ಈ ವಿಮಾನ ನಿಲ್ದಾಣ
    ಸುಮಾರು 660 ಎಕರೆ ಪ್ರದೇಶದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರೋ ಶಿವಮೊಗ್ಗ ವಿಮಾನ ನಿಲ್ದಾಣ 45 ಮೀಟರ್ ಅಗಲದ 3,200 ಮೀಟರ್ ಉದ್ದದ ರನ್ ವೇ ಹೊಂದಿದೆ.


    ಇದನ್ನೂ ಓದಿ: Sagara Marikamba Jatre: ಸಾಗರ ಮಾರಿಕಾಂಬಾ ಜಾತ್ರೆ ಆರಂಭ, ದೇವಿ ದರ್ಶನ ಮಾಡಿ ಪುನೀತರಾಗಿ


    ಒಟ್ಟಾರೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡ ನಂತರ ಮಲೆನಾಡಿನ ಜನರ ಸಂಚಾರಕ್ಕೆ ಆಧುನಿಕ ಸೌಕರ್ಯ ದೊರೆಯೋದು ಪಕ್ಕಾ ಆಗಿದೆ.

    Published by:ಗುರುಗಣೇಶ ಡಬ್ಗುಳಿ
    First published: