Accident: ಹಾವಾಗಿ ಬಂದಿದ್ದ ಜವರಾಯ! ನಾಲೆಗೆ ಬಿದ್ದ ಕಾರ್ - ಹೆಂಡತಿ ಸಾವು, ಗಂಡ ಬಚಾವ್!

ಗಂಡ-ಹೆಂಡತಿ ಕಾರಿನಲ್ಲಿ ಹೊರಟಿದ್ದರು. ಆಗ ಬೆಳಗಿನ ಜಾವ ರಸ್ತೆ ಮಧ್ಯೆ ಜವರಾಯ ಹಾವಿನ ರೂಪದಲ್ಲಿ ಬಂದಿದ್ದಾ ಅನಿಸುತ್ತೆ. ಹಾವಿನ ಮೇಲೆ ಕಾರು ಹರಿಯುವುದನ್ನು ತಪ್ಪಿಸಲು ಯತ್ನಿಸಿದ್ರು. ಆದ್ರೆ ಮುಂದಾಗಿದ್ದು ಮಾತ್ರ ದುರಂತ...

ನಾಲೆಯಲ್ಲಿ ಮುಳುಗಿದ್ದ ಕಾರನ್ನು ಎತ್ತುತ್ತಿರುವುದು

ನಾಲೆಯಲ್ಲಿ ಮುಳುಗಿದ್ದ ಕಾರನ್ನು ಎತ್ತುತ್ತಿರುವುದು

  • Share this:
ಶಿವಮೊಗ್ಗ: ಸಾವು ಹೇಗೆ ಬೇಕಾದರೂ ಬರಬಹುದು ಅನ್ನುವುದಕ್ಕೆ ಈ ಘಟನೆಯೇ ಉದಾಹರಣೆ. ಅವರು ಶಿವಮೊಗ್ಗದಿಂದ (Shivamogga) ತುಮಕೂರಿಗೆ (Tumkur)  ಹೊರಟಿದ್ದರು. ಎಲ್ಲಾ ಸರಿಯಾಗಿದ್ದರೆ ಇಷ್ಟು ಹೊತ್ತಿಗೆ ಅವರು ತುಮಕೂರು ಸೇರಬೇಕಿತ್ತು. ಆದರೆ ಅವರು ಅಂದು ಕೊಂಡಂತೆ ನಡೆದೇ ಇಲ್ಲ. ಅಸಲಿಗೆ ಅವರು ಇಂದು ತುಮಕೂರು ಸೇರಿಯೇ ಇಲ್ಲ. ಶಿವಮೊಗ್ಗದ ಬಳಿಯೇ ಅವರ ಪ್ರಯಾಣ (Journey) ಕೊನೆಯಾಗಿ ಬಿಟ್ಟಿದೆ. ಈ ಪೈಕಿ ಹೆಂಡತಿ (Wife) ಸಾವನ್ನಪ್ಪಿದ್ದರೆ, ಗಂಡ (Husband)  ಆಸ್ಪತ್ರೆ ಸೇರಿದ್ದಾನೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇಂಥದ್ದೊಂದು ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿ ಬೆಳಗಿನ ಜಾವ (Early Morning) ನಡೆದಿದೆ.  

ಅಪಘಾತದಲ್ಲಿ ಪತ್ನಿ ಸಾವು, ಪತಿಗೆ ಗಾಯ

ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ಇಂದು ಬೆಳಗ್ಗಿನ ಜಾವ ಅಪಘಾತ ನಡೆದಿದೆ. ಗಂಡ ಹೆಂಡತಿ ಪ್ರಯಾಣಿಸುತ್ತಿದ್ದ ಕಾರೊಂದು ತುಂಗಾ ನಾಲೆಗೆ ಬಿದ್ದಿದೆ.  ಪರಿಣಾಮ ಹೆಂಡತಿ ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಅಪಘಾತದಲ್ಲಿ ಗಂಡ ಗಾಯಗೊಂಡು, ಆಸ್ಪತ್ರೆ ಸೇರಿದ್ದಾನೆ. ಮೃತಳನ್ನು 28 ವರ್ಷದ ಸುಷ್ಮಾ ಎಂದು ಗುರುತಿಸಲಾಗಿದೆ. ಇವರ ಪತಿ ಚೇತನ್ ಎಂಬುವವರು ಆಸ್ಪತ್ರೆಗೆ ಸೇರಿದ್ದಾರೆ.

ಶಿವಮೊಗ್ಗದಿಂದ ತುಮಕೂರಿಗೆ ಹೊರಟಿದ್ದ ದಂಪತಿ

ಚೇತನ್ ಹಾಗೂ ಸುಷ್ಮಾ ದಂಪತಿ ತುಮಕೂರು ನಿವಾಸಿಗಳು. ಮೂಲತಃ ತುಮಕೂರಿನ ನಿವಾಸಿ ಚೇತನ್, ಗಾಜನೂರಿನ ನವೋದಯ ಶಾಲೆಯಲ್ಲಿ ಗೇಟ್ ಕೀಪರ್ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ತುಮಕೂರಿನಲ್ಲಿರುವ ಚೇತನ್ ತಾಯಿ ಅನಾರೋಗ್ಯವಾಗಿತ್ತು. ಹೀಗಾಗಿನಿನ್ನೆ ರಾತ್ರಿಯೇ ಪತ್ನಿ ಸಮೇತ KA 06 C 5275 ಕಾರಿನಲ್ಲಿ ತುಮಕೂರು ಕಡೆ ಹೊರಟಿದ್ದಾಗ ಗಾಜನೂರು ನಾಲೆ ಬಳಿ ಅಪಘಾತವಾಗಿದೆ.

ಇದನ್ನೂ ಓದಿ: Bengaluru: 'ಎಣ್ಣೆ' ಏಟಲ್ಲಿ ಕಿರಿಕ್, ಹೆಂಡತಿ-ಮಗುವಿನ ಮುಖವನ್ನೇ ಸುಟ್ಟ ಪಾಪಿ!

ಹಾವಿನ ರೂಪದಲ್ಲಿ ಬಂದು ನಿಂತಿದ್ದ ಜವರಾಯ

ಗಂಡ ಹೆಂಡತಿ ಇಬ್ಬರೂ ಕಾರಿನಲ್ಲಿ ಬರುತ್ತಿರುವಾಗ ದಾರಿ ಮಧ್ಯೆ ಹಾವೊಂದು ಎದುರಾಗಿದೆ. ಇನ್ನೇನು ಹಾವಿನ ಮೇಲೆ ಕಾರು ಹತ್ತಿಸಬೇಕು, ಅಷ್ಟರಲ್ಲಿ ಚೇತನ್ ವಿಚಲಿತರಾಗಿದ್ದಾರೆ. ಹಾವನ್ನು ತಪ್ಪಿಸಿ, ಕಾರನ್ನು ಸೈಡಿಗೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ನಿಯಂತ್ರಣ ತಪ್ಪಿ ಕಾರು ತುಂಗಾ ನಾಲೆಗೆ ಬಿದ್ದು ಬಿಟ್ಟಿದೆ.

ನೀರಿನಲ್ಲಿ ಉಸಿರುಗಟ್ಟಿ ಪತ್ನಿ ದುರ್ಮರಣ

ನಾಲೆಗೆ ಬೀಳುತ್ತಿದ್ದಂತೆ ಇಡೀ ಕಾರು ಮುಳುಗಿ ಹೋಗಿದೆ. ಚೇತನ್ ಹೇಗೋ ಕಾರಿನಿಂದ ಹೊರಕ್ಕೆ ಬಿದ್ದಿದ್ದಾರೆ. ಆದರೆ ಪತ್ನಿ ಸುಷ್ಮಾ ಕಾರಿನಲ್ಲೇ ಸಿಲುಕಿ ಕೊಂಡಿದ್ದರು. ಕಾರು ನೀರಿನಲ್ಲಿ ಮುಳುಗುತ್ತಿದ್ದಂತೆ ಸುಷ್ಮಾ ಸಹ ನೀರಿನಲ್ಲಿ ಮುಳುಗಿದ್ದಾರೆ. ಅದೆಷ್ಟೇ ಪ್ರಯತ್ನಿಸಿದರೂ ಹೊರಕ್ಕೆ ಬರಲಾಗದೇ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ.

"ಪ್ಲೀಸ್ ಹೆಲ್ಪ್ ಮೀ" ಅಂತ ಕೂಗಿದರೂ ಸಿಗಲಿಲ್ಲ ಸಹಾಯ

ಚೇತನ್ ಹಾಗೂ ಸುಪ್ಮಾ ದಂಪತಿ ನಿನ್ನೆ ರಾತ್ರಿಯೇ ಶಿವಮೊಗ್ಗದಿಂದ ಕಾರಿನಲ್ಲಿ ಹೊರಟಿದ್ದರು. ಮಧ್ಯರಾತ್ರಿ ಗಾಜನೂರು ಬಳಿ ಬರುತ್ತಿರುವಾಗ ಈ ಅಪಘಾತ ನಡೆದಿದೆ. ಕಾರು ಮುಳುಗುತ್ತಿದ್ದಂತೆ ಪತ್ನಿಗೆ ಸಹಾಯ ಮಾಡಲು ಚೇತನ್ ಮುಂದಾಗಿದ್ದಾರೆ. ಆದರೆ ನೀರಿನ ರಭಸಕ್ಕೆ ಅವರಿಂದ ಏನು ಮಾಡಲೂ ಸಾಧ್ಯವಾಗಿಲ್ಲ. ಆಗ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾರೆ.

ಇದನ್ನೂ ಓದಿ: Bengaluru: ಸತ್ತರೂ ನೆಮ್ಮದಿ ಇಲ್ಲ ಸ್ವಾಮಿ! 4 ದಿನವಾದ್ರೂ ಮುಗಿಯದ ಶವ ಸಂಸ್ಕಾರ ಕಿರಿಕ್

ಭಯದಿಂದ ಸ್ಥಳಕ್ಕೆ ಬರಲೇ ಇಲ್ಲ ಸ್ಥಳೀಯರು

ಘಟನೆ ನಡೆದ ತುಂಗಾ ನಾಲೆ ಅಕ್ಕ ಪಕ್ಕ ಸುಮಾರು ಮನೆಗಳಿವೆ. ಆದರೆ ಯಾರೂ ಸ್ಥಳಕ್ಕೆ ಬರಲಿಲ್ಲ ಎನ್ನಲಾಗಿದೆ. ಸಹಾಯಕ್ಕೆ ಬನ್ನಿ ಅಂತ ಚೇತನ್ ಕೂಗಿಕೊಂಡಿದ್ದಾರೆ. ಸಹಾಯಕ್ಕೆ ಕೂಗುವ ಧ್ವನಿ ಕೇಳಿದರೂ, ಭಯದಿಂದ ಮನೆಯಿಂದ ಜನ ಆಚೆ ಬರಲೇ ಇಲ್ಲ ಎನ್ನಲಾಗಿದೆ. ಬಳಿಕ ಸ್ಥಳೀಯರೇ ಪೊಲೀಸರಿಗೆ ಕರೆ ಮಾಡಿ, ಅಪಘಾತದ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಚೇತನ್ ಅವರನ್ನು ರಕ್ಷಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಸುಷ್ಮಾ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ರು. ಆದ್ರೆ ಅಷ್ಟರಲ್ಲಾಗಲೇ ಉಸಿರುಗಟ್ಟಿ ಸುಷ್ಮಾ ಮೃತಪಟ್ಟಿದ್ದರು.

ಇದೀಗ ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.
Published by:Annappa Achari
First published: