• Home
  • »
  • News
  • »
  • state
  • »
  • Bhoomi Hunnime: ಭೂಮಿ ಹುಣ್ಣಿಮೆ ಹಬ್ಬದ ಸ್ಪೆಷಲ್! ವಿಧವಿಧದ ಖಾದ್ಯ, ಮುಗಿಲು ಮುಟ್ಟಿದ ಕೃಷಿಕರ ಸಂಭ್ರಮ

Bhoomi Hunnime: ಭೂಮಿ ಹುಣ್ಣಿಮೆ ಹಬ್ಬದ ಸ್ಪೆಷಲ್! ವಿಧವಿಧದ ಖಾದ್ಯ, ಮುಗಿಲು ಮುಟ್ಟಿದ ಕೃಷಿಕರ ಸಂಭ್ರಮ

ಭೂಮಿ ಹುಣ್ಣಿಮೆ ವಿಡಿಯೋ ನೋಡಿ

"ಭೂಮಿ ಹುಣ್ಣಿಮೆ ವಿಡಿಯೋ ನೋಡಿ"

ಭೂತಾಯಿಯನ್ನು ಗರ್ಭಿಣಿಯ ಸ್ಥಾನದಲ್ಲಿಟ್ಟು ಸೀಮಂತದ ಸಂಭ್ರಮದಂತೆ ಪೂಜೆ ಸಲ್ಲಿಸಿದರು. ವಿವಿಧ ರೀತಿ ತಿಂಡಿ ತಿನಿಸುಗಳನ್ನು ತಯಾರಿಸಿ ಭೂತಾಯಿಗೆ ಅರ್ಪಿಸಿದರು.

  • Share this:

    ಶಿವಮೊಗ್ಗ:  ಹೊಲ, ಗದ್ದೆಗಳಿಂದ ಕೇಳಿಬರ್ತಿರೋ ಜಾಗಟೆ, ಶಂಖ ನಾದ! ನೆಲದ ಮೇಲೆ ಭೂಮಣಿ ಬುಟ್ಟಿ ತಯಾರಿಸಿ ಬಿಡಿಸಿರುವ ಚಿತ್ತಾರ. ಮನೆಯಿಂದ ಹೊಲಕ್ಕೆ ತಂದಿರೋ ವಿವಿಧ ಖಾದ್ಯಗಳು, ರುಚಿರುಚಿ ತಿಂಡಿ ತಿನಿಸು. ಹಸಿರು ಭತ್ತದ ಗದ್ದೆ, ಆ ಗದ್ದೆಗೇ ತಾಯಿ ಕಾಪಾಡಮ್ಮಾ ಭೂತಾಯಿ ಅಂತ ಬೇಡಿಕೊಳ್ಳುತ್ತಿರುವ ಕೃಷಿಕರು. ಮಲೆನಾಡಿನ (Malnad Farmers) ರೈತಾಪಿ ವರ್ಗ ಭೂಮಿ ಹುಣ್ಣಿಮೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ ಪರಿಯಿದು. ಶಿವಮೊಗ್ಗದಲ್ಲಿ (Shivamogga News) ಕೃಷಿಕರು ಭೂಮಿ ಹುಣ್ಣಿಮೆ ಹಬ್ಬವನ್ನು(Bhoomi Hunnime) ಆಚರಿಸಿದರು.


    ಪ್ರತಿದಿನ ನಮ್ಮನ್ನ ಹೊತ್ತುಕೊಳ್ಳೋ, ಆಶ್ರಯ ಒದಗಿಸೋಳು ಭೂತಾಯಿ. ಈ ಸಮಯದಲ್ಲಿ ಭೂ ತಾಯಿ ಗರ್ಭಿಣಿಯಂತೆ ಬೆಳೆಗಳಿಂದ ಮೈ ತುಂಬಿಕೊಂಡಿರುತ್ತಾಳೆ ಎಂಬ ಪ್ರತೀತಿ ರೈತರಲ್ಲಿದೆ. ಹೀಗಾಗಿ ಆ ಭೂತಾಯಿಗೆ ಪೂಜೆ ಮಾಡಿ ಕೃಷಿಕರು ಗೌರವ ಅರ್ಪಿಸಿದರು.


    ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


    ಭೂತಾಯಿಯನ್ನು ಗರ್ಭಿಣಿಯ ಸ್ಥಾನದಲ್ಲಿಟ್ಟು ಸೀಮಂತದ ಸಂಭ್ರಮದಂತೆ ಪೂಜೆ ಸಲ್ಲಿಸಿದರು. ವಿವಿಧ ರೀತಿ ತಿಂಡಿ ತಿನಿಸುಗಳನ್ನು ತಯಾರಿಸಿ ಭೂತಾಯಿಗೆ ಅರ್ಪಿಸಿದರು.


    ಇದನ್ನೂ ಓದಿ: Uttara Kannada: 70 ವರ್ಷದ ಈ ತಾತ ಈಗ ಡಿಪ್ಲೋಮಾ ಸ್ಟೂಡೆಂಟ್!


    ಹೊಲದಲ್ಲೇ ಸಾಮೂಹಿಕ ಊಟ ಮಾಡಿದರು. ಆ ತಾಯಿಯ ಹಬ್ಬ ಮಾಡಿ ಪೂಜೆ ಸಲ್ಲಿಸಿ ನಿನ್ನ ಮಕ್ಕಳನ್ನು ಹೀಗೇ ಚಂದವಾಗಿ ಸಲಹಮ್ಮಾ ಎಂದು ಬೇಡಿಕೊಂಡರು.

    Published by:ಗುರುಗಣೇಶ ಡಬ್ಗುಳಿ
    First published: