• Home
  • »
  • News
  • »
  • state
  • »
  • Harsha Murder case: ಹರ್ಷ ಕೊಲೆ ಪ್ರಕರಣ, 7ನೇ ಆರೋಪಿ ಬಂಧನ, ಭಾನುವಾರ ರಾತ್ರಿ ನಡೆದಿದ್ದೇನು ಗೊತ್ತಾ?

Harsha Murder case: ಹರ್ಷ ಕೊಲೆ ಪ್ರಕರಣ, 7ನೇ ಆರೋಪಿ ಬಂಧನ, ಭಾನುವಾರ ರಾತ್ರಿ ನಡೆದಿದ್ದೇನು ಗೊತ್ತಾ?

ಮೃತ ಹರ್ಷ ಬಜರಂಗದಳದ ಸದಸ್ಯನಾಗಿದ್ದು, ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಹೋರಾಟಗಳು, ಪ್ರತಿಭಟನೆ ಇತ್ಯಾದಿಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಈತನ ವಿರುದ್ಧವೂ ಕೆಲವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಈಚೆಗೆ ಬೇರೆ ಕೋಮಿನ ಯುವಕದಿಂದ ಬೆದರಿಕೆಯೂ ಬಂದಿತ್ತು ಅಂತ ಪತ್ರಿಕೆಗಳು ವರದಿ ಮಾಡಿವೆ.

ಮೃತ ಹರ್ಷ ಬಜರಂಗದಳದ ಸದಸ್ಯನಾಗಿದ್ದು, ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಹೋರಾಟಗಳು, ಪ್ರತಿಭಟನೆ ಇತ್ಯಾದಿಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಈತನ ವಿರುದ್ಧವೂ ಕೆಲವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಈಚೆಗೆ ಬೇರೆ ಕೋಮಿನ ಯುವಕದಿಂದ ಬೆದರಿಕೆಯೂ ಬಂದಿತ್ತು ಅಂತ ಪತ್ರಿಕೆಗಳು ವರದಿ ಮಾಡಿವೆ.

ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ  ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಇದುವರೆಗೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳೆಲ್ಲಾ ಶಿವಮೊಗ್ಗದವರೇ ಆಗಿದ್ದಾರೆ

  • Share this:

ಬೆಂಗಳೂರು: ಭಜರಂಗದಳದ ಕಾರ್ಯಕರ್ತ ಹರ್ಷ (Bajrangdal Activist Harsha) ಕೊಲೆ (Murder) ಸಂಬಂಧ ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವತ್ತು 7ನೇ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿಸಿರೋ ಆರೋಪಿಗಳೆಲ್ಲಾ ಶಿವಮೊಗ್ಗದವರೇ ಆಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. 20ರ ರಾತ್ರಿ 9 ಗಂಟೆಗೆ ನಡೆದ ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣವನ್ನು, ನಾವು ಸೂಕ್ಷ್ಮವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಕಾನೂನು ಹಾಗೂ ಸುವ್ಯವಸ್ಥೆಯ ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ


 ಹರ್ಷನ ಕೊಲೆ ಕೇಸ್​, 7 ಮಂದಿ ಅರೆಸ್ಟ್


ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ  ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಇದುವರೆಗೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳೆಲ್ಲಾ ಶಿವಮೊಗ್ಗದವರೇ ಆಗಿದ್ದಾರೆ. 7 ಆರೋಪಿ ಜಿಲಾನಿಯನ್ನು ಬಂಧಿಸಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹರ್ಷನ ಕೊಲೆ ಬಳಿಕ ಜಿಲಾನಿ ಕಾರು ಚಲಾಯಿಸಿಕೊಂಡು ಆರೋಪಿಗಳನ್ನು ಕರೆದೊಯ್ದಿದ್ದ. ಸದ್ಯ ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಆರೋಪಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ


ಆರೋಪಿಗಳ ಪಟ್ಟಿ


1) ಆಸೀಫ್ (22) - ಶಿವಮೊಗ್ಗ ಬೈಪಾಸ್ ನಿವಾಸಿ


2) ರಿಯಾಜ್ ಶರೀಫ್ ( 21)-  ಸಹ್ಯಾದ್ರಿ ಕಾಲೇಜು ಬಳಿ ನಿವಾಸಿ ಶಿವಮೊಗ್ಗ


3) ಖಾಸಿಫ್ ( 30) - ಬುದ್ಧ ನಗರ ಶಿವಮೊಗ್ಗ


4) ಅಫನ್ ( 20)  - ಬಾಪೂಜಿನಗರ - ಶಿವಮೊಗ್ಗ


5) ಮುಜಾಯಿದ್ - ಶಿವಮೊಗ್ಗ


6) ಜಿಲಾನಿ - ಶಿವಮೊಗ್ಗ


7) ನದೀಂ – ಶಿವಮೊಗ್ಗ


ಇದನ್ನೂ ಓದಿ: Harsha Murder ಟ್ರೈಲರ್ ಅಷ್ಟೇ, ಇನ್ನೂ ಸಿನಿಮಾ ಬಾಕಿ ಇದೆ: ಪ್ರಕರಣಕ್ಕೆ ಹೊಸ ತಿರುವು ಕೊಟ್ಟ HDK


‘ಸೂಕ್ಷ್ಮವಾಗಿ ತನಿಖೆ ನಡೆಸಲಾಗ್ತಿದೆ’


ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಯನ್ನು ಯಾರು ಮಾಡಿದ್ದಾರೆ ಮತ್ತು ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ನಮ್ಮ ಪೊಲೀಸರ ಬಳಿ ಇದೆ. ಈ ಸಂಬಂಧ ಸದ್ಯ ಮೂರು ಎಫ್​ಐಆರ್ ದಾಖಲಾಗಿವೆ. ಈ ಪ್ರಕರಣದ ತನಿಖೆಯನ್ನು ನಾವು ಸೂಕ್ಷ್ಮವಾಗಿ ನಡೆಸುತ್ತಿದ್ದೇವೆ ಎಂದು ಕಾನೂನು ಹಾಗೂ ಸುವ್ಯವಸ್ಥೆಯ ಎಡಿಜಿಪಿ ಪ್ರತಾಪ್​​ ರೆಡ್ಡಿ ಹೇಳಿದ್ದಾರೆ.


ಇನ್ನೂ ಕೆಲ ಆರೋಪಿಗಳಿಗಾಗಿ ಹುಡುಕಾಟ

ಹರ್ಷ ಕೊಲೆ ಪ್ರಕರಣದಲ್ಲಿ ಈಗ ದಸ್ತಗಿರಿ ಮಾಡಿರುವವರ ಬಗ್ಗೆ ನಮ್ಮ ಎಸ್ಪಿ ಅವರು ಮಾಹಿತಿ ನೀಡುತ್ತಾರೆ. ಕೊಲೆಯನ್ನು ಯಾರು ಮಾಡಿದ್ದಾರೆ ಮತ್ತು ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ನಮ್ಮ ಪೊಲೀಸರ ಬಳಿ ಇದೆ. ಆರೋಪಿಗಳನ್ನು ಬಂಧಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ. ಅವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.‌ಈಗ ಬಂಧಿತ ಆರೋಪಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಒಬ್ಬರು ಒಂದೊಂದು ರೀತಿಯ ಮಾಹಿತಿಯನ್ನು ನೀಡುತ್ತಿದ್ದಾರೆ. ಅದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ. ನಿನ್ನೆ ನಡೆದ ಮೆರವಣಿಗೆಯ ವೇಳೆ ಹಾನಿಗೊಳಗಾದ ವಸ್ತುಗಳ ಮಾಲೀಕರ ಮಾಹಿತಿ ಪಡೆಯುತ್ತಿದ್ದೇವೆ. ಸದ್ಯ ಮೂರು ಎಫ್​ಐಆರ್ ದಾಖಲಾಗಿವೆ. ನಿನ್ನೆ 14 ಘಟನೆಗಳನ್ನು ನಾವು ಲಿಸ್ಟ್ ಮಾಡಿದ್ದೇವೆ ಎಂದು ಎಡಿಜಿಪಿ ಮಾಹಿತಿ ನೀಡಿದರು.‌


ಇದನ್ನೂ ಓದಿ: Shivamogga Murder: ತಪ್ಪಿತಸ್ಥರನ್ನು ಬಿಡಲ್ಲ- ಈ ಪ್ರಕರಣಕ್ಕೆ ತಾರ್ಕಿಕ‌ ಅಂತ್ಯ ನೀಡುತ್ತೇವೆ: ಆರಗ ಜ್ಞಾನೇಂದ್ರ


ಹರ್ಷನ ಕೊಲೆ ಆರೋಪಿಗಳು ಹಿಂದೆ ನಡೆದ ಕೊಲೆಯಲ್ಲಿ ಭಾಗಿಯಾಗಿದ್ದಾರೆ.‌ ಇಂದು ಬೆಳಗ್ಗೆ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಆಟೋ ಹಾಗೂ ಎರಡು ಬೈಕ್​ಗಳನ್ನು ಸುಟ್ಟು ಹಾಕಲಾಗಿದೆ. ನಮ್ಮ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಘಟನೆ ಮರುಕಳಿಸದಂತೆ ಕ್ರಮ ಜರುಗಿಸುತ್ತೇವೆ. ರಾಜಕಾರಣಿಗಳ ಹೇಳಿಕೆಯಿಂದ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗುತ್ತಿದೆಯೇ ಎಂಬ ಪ್ರಶ್ನೆಗೆ ಈ ಬಗ್ಗೆ ನಾನು ಏನೂ ಹೇಳುವುದಕ್ಕೆ ಆಗುವುದಿಲ್ಲ ಎಂದರು.


ಬಜರಂಗದಳದ ಕಾರ್ಯಕರ್ತ ಹರ್ಷನನ್ನು ಶಿವಮೊಗ್ಗದಲ್ಲಿ ಕೊಲೆ(ಒuಡಿಜeಡಿ) ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹತ್ಯೆ ಖಂಡಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫೆಬ್ರವರಿ 23 ರಂದು ಪ್ರತಿಭಟನೆಗೆ ಹಿಂದೂಪರ ಸಂಘಟನೆಗಳು ಕರೆ ನೀಡಿವೆ. ಮೈಸೂರಿನ ಚಿಕ್ಕಗಡಿಯಾರದ ಬಳಿ ಜಮಾವಣೆಯಾಗಲು ಸಂದೇಶ ರವಾನಿಸಲಾಗಿದೆ. ಫೆಬ್ರವರಿ 23 ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆಗೆ ಭಾಗಿಯಾಗಲು ಹಿಂದೂಪರ ಸಂಘಟನೆಗಳು ಕರೆ ನೀಡಿವೆ.


ಕೊಲೆಯಾದ ಹರ್ಷ, ಅವರ ತಾಯಿ ಹಾಗೂ ಸಹೋದರಿ ಭಾವಚಿತ್ರದ ಪೋಸ್ಟರ್ ಸಿದ್ಧಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ.

Published by:Pavana HS
First published: