Crime News: ಗಂಡನ ಎದುರೇ ಪತ್ನಿ ಮೇಲೆ ಕಾಮುಕನ ಕಣ್ಣು! ನೊಂದ ಮಹಿಳೆ ಆತುರದಲ್ಲಿ ಮಾಡಿದ್ದೇನು ಗೊತ್ತಾ?

ಆಕೆ ವಿವಾಹಿತೆಯಾಗಿದ್ದರೂ ಆಕೆ ಮೇಲೆ ಕಾಮುಕ ಕಣ್ಣು ಹಾಕಿದ್ದ ಎನ್ನಲಾಗಿದೆ. ಆತ ಪತಿಯ ದೂರದ ಸಂಬಂಧಿಯಾಗಿದ್ದ. ಪರಿಚಯ ಮಾಡಿಕೊಂಡ ನಂತರ ಆತನ ವರ್ತನೆಯಲ್ಲಿ ಬದಲಾವಣೆ ಕಾಣಿಸಿತು.!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಶಿವಮೊಗ್ಗ: ಅವರಿಬ್ಬರದ್ದು ಸುಖ ಸಂಸಾರ, “ನಿನಗೆ ನಾನು, ನನಗೆ ನೀನು” ಎನ್ನುವಂತೆ ಇದ್ದರು ಗಂಡ (Husband) ಹೆಂಡತಿ (Wife). ಆದರೆ ಅವರ ಸಂಸಾರದ ಮೇಲೆ ಆ ಕಾಮುಕನ (Amorous) ಕಣ್ಣು ಬಿದ್ದಿತ್ತು. ಆಕೆ ಮನೆ ಎದುರೇ ಬಂದು ಆತ ಗಲಾಟೆ (Uproar) ಮಾಡಿದ್ದಾನೆ. ಸಾಲದ್ದಕ್ಕೆ ಗಂಡನ ಎದುರೇ ಆಕೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಇದೇ ಕಾರಣಕ್ಕೆ ಆಕೆ ದುಡುಕಿನ ನಿರ್ಧಾರ ಕೈಗೊಂಡು ಬಿಟ್ಟಿದ್ದಾಳೆ. ಮನೆಯಲ್ಲಿಯೇ ಸೂಸೈಡ್ (Suicide) ಮಾಡಿಕೊಂಡು ಬಿಟ್ಟಿದ್ದಾಳೆ. ಆ ಕಾಮುಕನಿಂದಾಗಿ ಏನೂ ತಪ್ಪು ಮಾಡದ ಆಕೆ ಬಾರದ ಲೋಕಕ್ಕೆ ಹೋಗಿ ಬಿಟ್ಟಿದ್ದಾಳೆ. ಪ್ರೀತಿಯ ಹೆಂಡತಿಯನ್ನು ಕಳೆದುಕೊಂಡ ಆತ ಕಣ್ಣೀರು ಹಾಕುತ್ತಿದ್ದಾನೆ.

ಶಿವಮೊಗ್ಗದ ಸೊರಬದಲ್ಲಿ ಘಟನೆ

ಇಂಥದ್ದೊಂದು ಘಟನೆ ನಡೆದಿರುವುದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಗುಂಜನೂರು ಗ್ರಾಮದಲ್ಲಿ. ಇಲ್ಲಿನ ನಿವಾಸಿ, 28 ವರ್ಷದ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದೇ ಗ್ರಾಮದ ವೀರೇಂದ್ರ ಎಂಬಾತನ ವಿರುದ್ಧ ಆರೋಪ ಕೇಳಿ ಬಂದಿದೆ. ಈತನೇ ಈ ಮಹಿಳೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ಮಹಿಳೆಗೆ ಕಾಟ ಕೊಡುತ್ತಿದ್ದ ವೀರೇಂದ್ರ

ಈ ವೀರೇಂದ್ರ ಹಾಗೂ ಮಹಿಳೆ ಇಬ್ಬರೂ ಸಂಬಂಧಿಕರಾಗಿದ್ದರು. ಆಕೆ ವಿವಾಹಿತೆಯಾಗಿದ್ದರೂ ಆಕೆ ಮೇಲೆ ವೀರೇಂದ್ರ ಕಣ್ಣು ಹಾಕಿದ್ದ ಎನ್ನಲಾಗಿದೆ. ಆತ ಪತಿಯ ದೂರದ ಸಂಬಂಧಿಯಾಗಿದ್ದ. ಪರಿಚಯ ಮಾಡಿಕೊಂಡ ನಂತರ ವೀರೇಂದ್ರನ ವರ್ತನೆಯಲ್ಲಿ ಬದಲಾವಣೆ ಕಾಣಿಸಿತು. ಮಹಿಳೆಯ ಬಗ್ಗೆ ಸಾರ್ವಜನಿಕವಾಗಿ ಸುಳ್ಳು ಹಾಗೂ ಮಾನಹಾನಿ ಮಾತುಗಳನ್ನು ಆಡತೊಡಗಿದ್ದ.

ಇದನ್ನೂ ಓದಿ: Murder Case: ಗುರಾಯಿಸಿದ ಎಂಬ ಕಾರಣಕ್ಕೆ ಯುವಕನನ್ನೇ ಕೊಂದಿದ್ದ ಪಾಪಿಗಳು! ಹಂತಕರಿಗೆ ಈಗ ಜೀವಾವಧಿ ಶಿಕ್ಷೆ

 ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿ

ಮಹಿಳೆಯನ್ನು ಒಲಿಸಿಕೊಳ್ಳಲು ಆರೋಪಿ ವೀರೇಂದ್ರ ನಾನಾ ಕಸರತ್ತು ಮಾಡಿದ್ದಾನೆ. ಆಕೆ ಒಪ್ಪದಿದ್ದಾಗ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. 'ನಿನ್ನ ಅಶ್ಲೀಲ ಫೋಟೋ, ವೀಡಿಯೋಗಳು ನನ್ನ ಬಳಿ ಇವೆ. ನಾವಿಬ್ಬರೂ ಖಾಸಗಿಯಾಗಿ ಕಳೆದ ಕ್ಷಣಗಳ ಫೋಟೋಗಳಿವೆ' ಎಂದು ಸುಳ್ಳು ಹೇಳಿ ಆಕೆಗೆ ಹೆದರಿಸಿದ್ದಾನೆ. ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಗಂಡನ ಎದುರಿಗೇ ಬಂದು ಅಶ್ಲೀಲವಾಗಿ ಮಾತನಾಡಿದ್ದ

ಇಷ್ಟಕ್ಕೆ ಸುಮ್ಮನಾಗದ ವಿರೇಂದ್ರ, ಇತ್ತೀಚೆಗೆ ಆ ಮಹಿಳೆಯ ಮನೆಗೆ ಹೋಗಿದ್ದ. ಆಕೆಯ ಗಂಡನ ಎದುರೇ ನಿನ್ನ ಹೆಂಡತಿಯನ್ನು ನನ್ನೊಂದಿಗೆ ಕಳುಹಿಸಿಕೊಡು' ಎಂದು ವೀರೇಂದ್ರ ರಂಪಾಟ ಮಾಡಿದ್ದ. ಇದು ದೊಡ್ಡ ಸುದ್ದಿಯಾಗಿ ಗ್ರಾಮದ ಹಿರಿಯರು ದೇವಸ್ಥಾನದಲ್ಲಿ ಪಂಚಾಯಿತಿ ನಡೆಸಿ ವೀರೇಂದ್ರನಿಗೆ ಬುದ್ಧಿವಾದ ಹೇಳಿದ್ದರು.

 ನೊಂದ ಮಹಿಳೆಯಿಂದ ದುಡುಕಿನ ನಿರ್ಧಾರ

ಇಷ್ಟೆಲ್ಲಾ ರಾದ್ಧಾಂತದ ಬಳಿಕ ಮನನೊಂದ ಮಹಿಳೆ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಮನೆಯಲ್ಲಿ ಒಬ್ಬಳೇ ಇದ್ದಾಗ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೊಡಲೇ ಆಕೆಗೆ ಸೊರಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾಳೆ.

ಮದುವೆ ಆಗ್ಬೇಕಾಗಿದ್ದವ ಸೆಲ್ಫಿ ವಿಡಿಯೋ ಮಾಡಿ Suicide 

ಮತ್ತೊಂದು ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಮುನಿಕೃಷ್ಣ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತನಿಗೆ ಗುಡಿಬಂಡೆ ತಾಲೂಕಿನ ಹುಡುಗಿ ಜೊತೆ ವಿವಾಹ ನಿಶ್ಚಿತಾರ್ಥ ಆಗಿತ್ತು. ಇದಾಗಿ ಮೂರೇ ದಿನಕ್ಕೆ ಮುನಿಕೃಷ್ಣ ಸೂಸೈಡ್ ಮಾಡಿಕೊಂಡಿದ್ದ.

ರಕ್ತದಲ್ಲಿ ಪ್ರೇಮ ಪತ್ರ ಬರೆದಿದ್ದ ಮುನಿಕೃಷ್ಣ

ಮುನಿಕೃಷ್ಣ ಸಾಯುವ ಮುನ್ನ ತನ್ನ ರಕ್ತದಲ್ಲಿ ಪ್ರೇಮಪತ್ರ ಬರೆದಿದ್ದ ಎನ್ನಲಾಗಿದೆ. ಪತ್ರದಲ್ಲಿ ಐ ಆ್ಯಮ್ ಸಾರಿ, ಕ್ಷಮಿಸು ಅಂತ ಕೋರಿಕೊಂಡಿದ್ದ. ಕೊನೆಗೆ ಸೆಲ್ಫಿ ವಿಡಿಯೋ ಮಾಡಿ, ಅಳುತ್ತಲೇ ಸೂಸೈಡ್ ಮಾಡಿಕೊಂಡಿದ್ದ.

ಮಹಿಳೆಯೊಂದಿಗೆ ಅನೈತಿಕ ಸಂಬಂಧ

ಬಿಎಸ್ಸಿ ಪದವೀಧರನಾಗಿದ್ದ ಮುನಿಕೃಷ್ಣ, ಚಿಂತಾಮಣಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಈತ ತಮ್ಮ ಸಂಬಂಧಿಯೇ ಆದ ವಿವಾಹಿತ ಮಹಿಳೆಯೊಬ್ಬಳೊಂದಿಗೆ ಸ್ನೇಹ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಸಾವಿಗೂ ಮುನ್ನ ಸಾರಿ ಅಂತ ರಕ್ತದಲ್ಲಿ ಬರೆದಿದ್ದು ಆಕೆಗೇ ಎನ್ನಲಾಗಿದೆ.

ಇದನ್ನೂ ಓದಿ: ಮದುವೆ ಆಗ್ಬೇಕಾಗಿದ್ದವ ಸೆಲ್ಫಿ ವಿಡಿಯೋ ಮಾಡಿ Suicide ಮಾಡಿಕೊಂಡ! ಆತನ ಸಾವಿನ ಹಿಂದಿತ್ತು ವಿವಾಹಿತೆಯ ನೆರಳು!

ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದಳಾ ಆ ಮಹಿಳೆ?

ಮುನಿಕೃಷ್ಣ ಬೇರೆ ಹುಡುಗಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಬಳಿಕ ಈ ವಿವಾಹಿತ ಮಹಿಳೆ ಕೋಪಗೊಂಡಿದ್ದಳು ಎನ್ನಲಾಗಿದೆ. ಹೀಗಾಗಿ ಆತನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೆ ಮನನೊಂದು ಮುನಿಕೃಷ್ಣ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುತ್ತಿದ್ದಾರೆ.
Published by:Annappa Achari
First published: