• Home
  • »
  • News
  • »
  • state
  • »
  • Bangalore University Student: ಶಿಲ್ಪಾ ಸಾವು, ತಿರುಗಿಬಿದ್ದ ವಿದ್ಯಾರ್ಥಿಗಳಿಂದ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ

Bangalore University Student: ಶಿಲ್ಪಾ ಸಾವು, ತಿರುಗಿಬಿದ್ದ ವಿದ್ಯಾರ್ಥಿಗಳಿಂದ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ

ಮೃತ ಶಿಲ್ಪಾ

ಮೃತ ಶಿಲ್ಪಾ

ಮತ್ತೆ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು, ಬುಧವಾರದೊಳಗೆ ಶಿಲ್ಪಾ ಕುಟುಂಬಕ್ಕೆ 1.5 ಕೋಟಿ ರೂ ಪರಿಹಾರ  ನೀಡಬೇಕು ಅಂತ ಪಟ್ಟು ಹಿಡಿದಿದ್ದಾರೆ.

  • Share this:

ಬೆಂಗಳೂರು ವಿವಿ (Bangalore University) ವಿದ್ಯಾರ್ಥಿನಿ  ಶಿಲ್ಪಾ (Student Shilpa) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇದೀಗ ಸರ್ಕಾರದ (Government) ವಿರುದ್ಧ ವಿವಿ ವಿದ್ಯಾರ್ಥಿಗಳು ತಿರುಗಿ ಬಿದ್ದಿದ್ದಾರೆ. ಮತ್ತೆ ಹೋರಾಟದ ಹಾದಿ ತುಳಿಯೋದಾಗಿ ಎಚ್ಚರಿಕೆ ನೀಡಿದ್ದಾರೆ. ಅಕ್ಟೋಬರ್ 10 ರಂದು ಬಿಎಂಟಿಸಿ ಬಸ್‌ಗೆ (BMTC Bus) ಶಿಲ್ಪಾ ಸಿಲುಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 14 ದಿನಗಳ ಸಾವು- ಬದುಕಿನ ಹೋರಾಟದ ಬಳಿಕ ಶಿಲ್ಪಾ ಇಹಲೋಕ ತ್ಯಜಿಸಿದ್ದಾರೆ. ಹೀಗಾಗಿ ಮತ್ತೆ ವಿವಿ ವಿದ್ಯಾರ್ಥಿಗಳು (Bangalore University Student Protest) ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಶಿಲ್ಪಾಗೆ ನೆರವಿನ ಪರಿಹಾರ ನೀಡ್ತೀವಿ, ಪ್ರತಿಭನಟನೆ ಹಿಂಪಡೆಯಿರಿ ಎಂದು ಸಚಿವರಾದ ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್ ಮನವಿ ಮಾಡಿದ್ದರು. ಹೀಗಾಗಿ ವಿದ್ಯಾರ್ಥಿಗಳು ಕೂಡಾ ಹೋರಾಟ ನಿಲ್ಲಿಸಿದ್ದರು.


ಆದ್ರೀಗ ಶಿಲ್ಪಾ ಬದುಕಿ ಬಂದಿಲ್ಲ. ಹೀಗಾಗಿ ಮತ್ತೆ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು, ಬುಧವಾರದೊಳಗೆ ಶಿಲ್ಪಾ ಕುಟುಂಬಕ್ಕೆ 1.5 ಕೋಟಿ ರೂ ಪರಿಹಾರ  ನೀಡಬೇಕು ಅಂತ ಪಟ್ಟು ಹಿಡಿದಿದ್ದಾರೆ. ಬುಧವಾರದೊಳಗೆ ಸರ್ಕಾರ ಪರಿಹಾರದ ಬಗ್ಗೆ ಒಂದು ನಿರ್ಧಾರ ತಗೊಂಡಿಲ್ಲ ಅಂದ್ರೆ ಮತ್ತೆ ಹೋರಾಟ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.


14 ದಿನ ಜೀವನ್ಮರಣದ ನಡುವೆ ಹೋರಾಟ


ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಶಿಲ್ಪಾ ಶ್ರೀಧರ್ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರಥಮ ಎಂಎಸ್ಸಿ ಗಣಿತ ಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಳೆದ 14 ದಿನಗಳಿಂದ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು.


shilpa death Bangalore University Students send warning message to government mrq
ಬೆಂಗಳೂರು ವಿವಿ


ಶಿಲ್ಪಾ ಆರೋಗ್ಯ ಚೇತರಿಕೆಗಾಗಿ ಸಾವಿರಾರರು ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದ್ದರು. ಆದ್ರೆ ಅಕ್ಟೋಬರ್ 23ರಂದು ಚಿಕಿತ್ಸೆ ಫಲಕಾರಿಯಾಗದೇ ಶಿಲ್ಪಾ ಮೃತರಾಗಿದ್ದಾರೆ.


ಅಪಘಾತದಲ್ಲಿ ಶಿಲ್ಪಾ ಸೊಂಟದ ಕೆಳಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಬನ್ನೇರುಘಟ್ಟ ರಸ್ತೆಯ ಪೋರ್ಟಿಸ್​ ಆಸ್ಪತ್ರೆಗೆ ಶಿಲ್ಪಾಳನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.


ಪಟಾಕಿ ಸಿಡಿದು ಮಕ್ಕಳಿಗೆ ಹಾನಿ


ದೀಪಾವಳಿ ಹಬ್ಬದ ಹಿನ್ನೆಲೆ ಪಟಾಕಿ ಸಿಡಿದು ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದ್ದು ಗಾಯಾಳುಗಳು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲಾಸಿಪಾಳ್ಯದ  35 ವರ್ಷದ ಸುರೇಶ್ ಎಂಬವರ ಮುಖಕ್ಕೆ ಪಟಾಕಿ ಸಿಡಿದು ಗಾಯವಾಗಿದೆ.


ಜೆಪಿನಗರದ 10 ವರ್ಷದ ಬಾಲಕ ಮನೋಜ್ ಎಂಬವನ ಕಣ್ಣಿಗೆ ಏಟಾಗಿದ್ದು, ಗಾಯಾಳು ಮನೋಜ್ ಮೈಮೇಲೂ ಸುಟ್ಟ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


shilpa death Bangalore University Students send warning message to government mrq
ಬೆಂಗಳೂರು ವಿವಿ ರಸ್ತೆ


ಥಣಿಸಂಧ್ರದ 7 ವರ್ಷದ ಸ್ಯಾಮುಯೆಲ್ ಎಂಬ ಬಾಲಕನ ಕಣ್ಣಿಗೆ  ರಾಕೆಟ್ ಸಿಡಿದು ಗಂಭೀರ ಗಾಯವಾಗಿದೆ. ಫ್ರೇಜರ್ ಟೌನ್​ನ 7 ವರ್ಷದ ಆದಿತ್ಯ ಎಂಬ ಹುಡುನ ಕಣ್ಣಿಗೂ ಏಟು ಬಿದ್ದಿದೆ. ಇಲ್ಲೀವೆರೆಗೂ ಒಟ್ಟು 8 ಪ್ರಕರಣಗಳು ದಾಖಲಾಗಿವೆ.


ಶಿವಮೊಗ್ಗ ಮತ್ತೆ ಉದ್ವಿಘ್ನ


ಮಲೆನಾಡು ಶಿವಮೊಗ್ಗ ಮತ್ತೆ ಉದ್ವಿಘ್ನಗೊಂಡಿದೆ. ಸಿಗೇಹಟ್ಟಿಯಲ್ಲಿ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆದು, ಓರ್ವ ವ್ಯಕ್ತಿಗೆ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಪ್ರಕಾಶ್ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇದನ್ನೂ ಓದಿ:  Chitradurga: ಸಿಪಿಐ ಉಮೇಶ್ ವಿರುದ್ಧದ ರೇಪ್ ಕೇಸ್​​ಗೆ ಟ್ವಿಸ್ಟ್; ಹೇಳಿಕೆ ಬದಲಾಯಿಸಿದ ಸಂತ್ರಸ್ತೆ


ಘಟನಾ ಸ್ಥಳಕ್ಕೆ ಎಸ್​​ಪಿ ವಿಥುನ್ ಕುಮಾರ್ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ರು. ಶಿವಮೊಗ್ಗದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಕಲ್ಲು ತೂರಾಟ ಮಾಡಿದವರಿಗಾಗಿ ಬಲೆ ಬೀಸಿದ್ದಾರೆ.


ಪಂಜಿನ ಮೆರವಣಿಗೆ, ಶೋಕಾಚರಣೆ


ಸೋಮವಾರ ದೀಪಾವಳಿ ಹಬ್ಬದ ದಿನವೇ ಮೇಲುಕೋಟೆಯಲ್ಲಿ ಶೋಕಾಚರಣೆ ಮಾಡಲಾಗಿದೆ. ವಿಶ್ವದೆಲ್ಲೆಡೆ ಹಿಂದೂಗಳು ದೀಪಾವಳಿ ಸಂಭ್ರಮಿಸುವ ವೇಳೆ ಮೇಲುಕೋಟೆ ಮಾತ್ರ ನಿಶ್ಯಬ್ದವಾಗಿತ್ತು.


ಇದನ್ನೂ ಓದಿ:  Loudspeaker: ಧ್ವನಿವರ್ಧಕ ಬಳಕೆಗೆ ಸರ್ಕಾರದಿಂದ ಅನುಮತಿ; ಪ್ರಮೋದ್ ಮುತಾಲಿಕ್ ಹೇಳಿದ್ದು ಹೀಗೆ


ಮಂಡ್ಯ ಜಿಲ್ಲೆ ಪಾಂಡವಪುರದ ಮೇಲುಕೋಟೆಯಲ್ಲಿ ಮಂಡ್ಯಮ್ ಅಯ್ಯಂಗಾರರ ಹತ್ಯೆ ಖಂಡಿಸಿ ಪಂಜಿನ ಮೆರವಣಿಗೆ ಮಾಡಿದ್ದಾರೆ. ಟಿಪ್ಪು ಕ್ರೌರ್ಯಕ್ಕೆ ಬಲಿಯಾದ ಅಯ್ಯಂಗಾರರಿಗೆ ಕುಟುಂಬಸ್ಥರಿಗೆ ಸಂತಾಪ ಸಲ್ಲಿಕೆ ಮಾಡಲಾಯ್ತು.

Published by:Mahmadrafik K
First published: