ಸತತ ಮಳೆ ಹಿನ್ನಲೆ ಕುರಿಗಳ ಸಾವು; ಅನುಗ್ರಹ ಯೋಜನೆ ಮುಂದುವರಿಕೆಗೆ ಕುರಿಗಾಹಿಗಳ ಒತ್ತಾಯ

ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಕುರಿದೊಡ್ಡಿಗಳು ಕೆಸರುಮಯವಾಗಿದ್ದು, ರೋಗ ಹೆಚ್ಚಾಗುವಂತಾಗಿದೆ.

news18-kannada
Updated:October 18, 2020, 7:18 AM IST
ಸತತ ಮಳೆ ಹಿನ್ನಲೆ ಕುರಿಗಳ ಸಾವು; ಅನುಗ್ರಹ ಯೋಜನೆ ಮುಂದುವರಿಕೆಗೆ ಕುರಿಗಾಹಿಗಳ ಒತ್ತಾಯ
ರೋಗದಿಂದ ಸಾವನ್ನಪ್ಪುತ್ತಿರುವ ಕುರಿಗಳು
  • Share this:
ಬಾಗಲಕೋಟೆ(ಅ. 17): ಜಿಲ್ಲೆಯಲ್ಲಿ ಮಳೆ ಸೃಷ್ಟಿಸಿದ ಅವಾಂತರದಿಂದಾಗಿ ತತ್ತರಿಸುವ ಜನ ಈಗ ಜಾನುವಾರುಗಳನ್ನು ಕಳೆದುಕೊಂಡು ಕಂಗಾಲಾಗುತ್ತಿದ್ದಾರೆ.  ಅಧಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಕುರಿ-ಮೇಕೆಗೆ ರೋಗ ಬಾಧಿಸುತ್ತಿದ್ದು, ಸಾವನ್ನಪ್ಪುತ್ತಿವೆ. ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ರೈತರು ತುತ್ತಾಗಿದ್ದಾರೆ. ಮಳೆ ಹೆಚ್ಚಾದರೆ ಕುರಿ, ಮೇಕೆಗಳಲ್ಲಿ ನೀಲಿ ನಾಲಿಗೆ(ಬಾಯಿ ಬೇನೆ) ರೋಗ, ಕೊಳಗು(ಕಾಲು ಬೇನೆ) ರೋಗ ಬಾಧೆ ಹೆಚ್ಚಾಗುತ್ತದೆ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಕುರಿದೊಡ್ಡಿಗಳು ಕೆಸರುಮಯವಾಗಿದ್ದು, ರೋಗ ಹೆಚ್ಚಾಗುವಂತಾಗಿದೆ. ಇದರಿಂದ ಕುರಿಗಳು ರೋಗದಿಂದ ಮೃತಪಡುತ್ತಿವೆ. ಜಿಲ್ಲೆಯಲ್ಲಿ ರೋಗಕ್ಕೆ ಲಸಿಕೆ ಕೊರತೆಯಿರುವುದು ಕೂಡ  ಸಾವಿರಾರು ಕುರಿಗಳು ರೋಗಕ್ಕೆ ಬಲಿಯಾಗಿವೆ. ರೋಗದಿಂದ ಕುರಿಗಳು ನರಳಿ ಸಾವನ್ನಪ್ಪುತ್ತಿರುವುದನ್ನು ಕಣ್ಣಾರೆ ಕಂಡು   ಕುರಿಗಾಹಿಗಳು ಮಮ್ಮಲ ಮರುಗುವಂತಾಗಿದೆ.

ಜಿಲ್ಲೆಯಲ್ಲಿ ಒಟ್ಟು 10, 6746 ಕುರಿ ಮೇಕೆಗಳಿವೆ. ಆರಂಭದಲ್ಲಿ  40ಸಾವಿರ ಮಾತ್ರ ಲಸಿಕೆ ಪೂರೈಕೆಯಾಗಿದೆ. ಆದರೆ ಈಚೆಗೆ ಸತತ ಹೆಚ್ಚಾಗಿ ಮಳೆ ಸುರಿದ ಪರಿಣಾಮವಾಗಿ ನೀಲಿ ನಾಲಿಗೆ ರೋಗ, ಕೊಳಗು ರೋಗ ಬಾಧಿಸುವ ಪ್ರಮಾಣ ಹೆಚ್ಚಾಗಿದೆ. ಲಸಿಕೆ ಕಡಿಮೆ ಇರುವುದು ತಿಳಿಯುತ್ತಿದ್ದಂತೆ 50ಸಾವಿರ ಲಸಿಕೆ, ಔಷಧಿ ಪೂರೈಕೆಯಾಗಿದೆ. ಸರಿಯಾಗಿ ಔಷಧಿ, ಚಿಕಿತ್ಸೆ, ಸಿಗದೇ ಕುರಿಗಾಹಿಗಳು ಕುರಿಗಳ ನರಳಾಟ ಕಂಡು ಖಾಸಗಿಯವರ ಬಳಿ ಔಷಧಿ ಖರೀದಿಸಿ ತಂದು ಚಿಕಿತ್ಸೆ ಕೊಟ್ಟರೂ ಪ್ರಯೋಜನವಾಗಿಲ್ಲ.

ಬಾದಾಮಿ ತಾಲೂಕಿನ ಕರಡಿಗುಡ್ಡ, ಮುತ್ತಲಗೇರಿ, ಯರಗೊಪ್ಪ ಎಸ್ ಬಿ ಗ್ರಾಮದಲ್ಲಿ ಅತೀ ಹೆಚ್ಚು ಕುರಿಗಳಿವೆ‌. ಯರಗೊಪ್ಪ ಎಸ್.ಬಿ ಗ್ರಾಮವೊಂದರಲ್ಲಿ 70ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಸರ್ಕಾರ, ಅಧಿಕಾರಿಗಳು ಕುರಿಗಾಹಿಗಳ ಸಂಕಷ್ಟ ಕೇಳುತ್ತಿಲ್ಲ. ಜೊತೆಗೆ ಔಷಧಿ ಸಿಗುತ್ತಿಲ್ಲ. ಮೃತಪಟ್ಟ ಕುರಿಗಳಿಗೂ ಸರ್ಕಾರ ಪರಿಹಾರ ಕೊಡುವುದನ್ನು ನಿಲ್ಲಿಸಿದೆ. ಇದರಿಂದ ಕುರಿಗಾಹಿಗಳು ಕಂಗಾಲಾಗಿದ್ದಾರೆ. ಈ ಹಿನ್ನಲೆ ಸರ್ಕಾರ ಈ ಕುರಿತು ತಕ್ಷಣಕ್ಕೆ ನಮ್ಮ ಸಹಾಯಕ್ಕೆ ಆಗಮಿಸಬೇಕು ಎಂದು ಕುರಿಗಾಯಿ ರಂಗಪ್ಪ ಹುಲ್ಲನ್ನವರ ಅಳಲು ತೋಡಿಕೊಂಡರು.

ಅನುಗ್ರಹ ಯೋಜನೆಗೆ ಬಿಜೆಪಿ ಸರ್ಕಾರ ಕೊಕ್ಕೆ:

ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಕುರಿ, ಮೇಕೆಗಳು ಆಕಸ್ಮಿಕ ಮರಣವಾದರೆ, ಅದಕ್ಕೆ ಪರಿಹಾರ ಕೊಡುವ ಅನುಗ್ರಹ ಯೋಜನೆಯನ್ನು 2017ರಲ್ಲಿ ಜಾರಿಗೆ ತಂದಿದ್ದರು.ಇದು ಕುರಿಗಾಹಿ ಪಾಲಿಗೆ ಕುರಿ ಮೇಕೆ ಮೃತವಾದಾಗ ನೆರವು ಸಿಗುತ್ತಿತ್ತು. ಆದರೆ  ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೀಗ ಅನುಗ್ರಹ ಯೋಜನೆಗೆ ಕೊಕ್ಕೆ ಹಾಕಿದೆ.

ಇದನ್ನು ಓದಿ: ಮಳೆಗೆ ಕೊಚ್ಚಿ ಹೋದ ಈರುಳ್ಳಿ ಬೆಳೆ; ಕಣ್ಣೀರಲ್ಲಿ ರೈತರು

ಬಿಜೆಪಿ ಸರ್ಕಾರ ಪ್ರಸಕ್ತ 2020-21ನೇ ಸಾಲಿನ ಹಣಕಾಸು ವರ್ಷದಿಂದ ಅನುಗ್ರಹ ಯೋಜನೆಯಡಿ ಹೊಸ ಅರ್ಜಿ ಪಡೆಯದಂತೆ ಪಶುಪಾಲನಾ ಇಲಾಖೆಗೆ ನಿರ್ದೇಶಿಸಿದೆ. ಹೀಗಾಗಿ ಪಶು ಪಾಲನಾ ಇಲಾಖೆ ಆಯುಕ್ತರು ಮುಂದಿನ ಆದೇಶ ಬರುವವರೆಗೆ ಹೊಸ ಅರ್ಜಿ ಸ್ವೀಕರಿಸದಿರಲು ಕೆಳ ಹಂತದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.ಜೊತೆಗೆ 2019 ಮಾರ್ಚ್ ತಿಂಗಳವರೆಗೆ ಅನುಗ್ರಹ ಯೋಜನೆಯಡಿ ಅರ್ಜಿ ಸಲ್ಲಿಸಿದ ಕುರಿಗಾಹಿಗಳಿಗೆ ಇನ್ನೂ ಪರಿಹಾರ ನೀಡಿಲ್ಲ.ಇದೀಗ ರಾಜ್ಯಾದ್ಯಂತ ಸುರಿದ ಮಳೆಯಿಂದ ಕುರಿಗಳಿಗೆ ರೋಗ ತಗುಲಿ,ಮೃತಪಡುತ್ತಿದ್ದು,ಅತ್ತ ಚಿಕಿತ್ಸೆವೂ ಸಿಗುತ್ತಿಲ್ಲ.ಅತ್ತ ಮೃತಪಟ್ಟ ಕುರಿಗಳಿಗೆ ಪರಿಹಾರ ಇಲ್ಲದಂತಾಗಿದೆ.
Published by: Seema R
First published: October 18, 2020, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading