ಅವಧಿಗೂ ಮೊದಲೇ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಆಗಲಿದ್ದಾರಾ ಜಯಲಲಿತಾ ಆಪ್ತೆ ಶಶಿಕಲಾ?

ಬಿಜೆಪಿ ಸಹಾಯದಿಂದ ಶಶಿಕಲಾ ನಟರಾಜನ್‌ಗೆ ಆಗಸ್ಟ್ 14 ರಂದು ಬಿಡುಗಡೆ ಭಾಗ್ಯ ಸಿಗುತ್ತಿದೆ ಎಂದು ತಮಿಳುನಾಡಿನ ಬಿಜೆಪಿ ನಾಯಕ ಆಶೀವಾದಂ ಆಚಾರಿ ಮಾಡಿರೋ ಟ್ವೀಟ್ ಮಾಡಿದ್ದರು. ಅವರ ಟ್ವೀಟ್​ ಬೆನ್ನಲ್ಲೇ ಭಾರೀ ಚರ್ಚೆ ಆಗುತ್ತಿದೆ. 

news18-kannada
Updated:July 4, 2020, 8:47 AM IST
ಅವಧಿಗೂ ಮೊದಲೇ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಆಗಲಿದ್ದಾರಾ ಜಯಲಲಿತಾ ಆಪ್ತೆ ಶಶಿಕಲಾ?
ಬಿಜೆಪಿ ಸಹಾಯದಿಂದ ಶಶಿಕಲಾ ನಟರಾಜನ್‌ಗೆ ಆಗಸ್ಟ್ 14 ರಂದು ಬಿಡುಗಡೆ ಭಾಗ್ಯ ಸಿಗುತ್ತಿದೆ ಎಂದು ತಮಿಳುನಾಡಿನ ಬಿಜೆಪಿ ನಾಯಕ ಆಶೀವಾದಂ ಆಚಾರಿ ಮಾಡಿರೋ ಟ್ವೀಟ್ ಮಾಡಿದ್ದರು. ಅವರ ಟ್ವೀಟ್​ ಬೆನ್ನಲ್ಲೇ ಭಾರೀ ಚರ್ಚೆ ಆಗುತ್ತಿದೆ. 
  • Share this:
ಬೆಂಗಳೂರು (ಜು.4): ಶಶಿಕಲಾ‌ ನಟರಾಜನ್ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಜಯ ಲಲಿತಾ ಬಲಗೈ ಬಂಟನ ರೀತಿಯಲ್ಲಿದ್ದರು​. ಜಯಲಲಿತಾ ಮೃತಪಟ್ಟ ಬೆನ್ನಲ್ಲೇ ಶಶಿಕಲಾ ಜೈಲು ಸೇರಿದ್ದರು. ಈಗ ಅವರು ಜೈಲಿನಿಂದ ಹೊರ ಬರುವ ಸುದ್ದಿ ಭಾರೀ ಚರ್ಚೆ ಆಗುತ್ತಿದೆ.

ರಾಷ್ಟ್ರದೆಲ್ಲೆಡೆ ಕೊರೊನಾ ಭೀತಿ ಕಾಡುತ್ತಿದೆ. ಈ ನಡುವೆ ಕೆಲ ರಾಜ್ಯಗಳಲ್ಲಂತೂ ಸೊಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಹೀಗಿರುವಾಗ 2021 ಮೇ ತಿಂಗಳಲ್ಲಿತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಸದ್ಯ ಎಡಿಐಎಂಕೆ ಪಕ್ಷ ಅಧಿಕಾರದಲ್ಲಿದ್ದು, ಇ.ಡಿ.ಪಳನಿಸ್ವಾಮಿ  ಮುಖ್ಯಮಂತ್ರಿ ಆಗಿದ್ದರೆ, ಒ.ಪನ್ನೀರಸೆಲ್ವಂ ಡಿಸಿಎಂ ಆಗಿದ್ದಾರೆ. ಇದೇ ವೇಳೆ ಕೊರೊನಾ ತಡೆಗಟ್ಟುವಿಕೆಯ ಕ್ರಮದ ಜೊತೆಗೆ ಬರುವ ಚುನಾವಣೆಗೂ ಅವರು ತಯಾರಿ ಕೂಡ ನಡೆಸುತ್ತಿದ್ದಾ.

ಹೀಗಿರುವಾಗಲೇ ಜಯಲಲಿತಾ ಆಪ್ತೆ ಶಶಿಕಲಾ‌ ನಟರಾಜನ್  ಬಿಡುಗಡೆಯ ಸುದ್ದಿ ಭಾರೀ ಚರ್ಚೆ ಆಗುತ್ತಿದೆ. ಬರುವ ಚುನಾವಣೆಗೆ ಜೈಲಿನಿಂದಲೇ ಶಶಿಕಲಾ ತಯಾರಿ ಮಾಡಿಕೊಳ್ಳುತ್ತಿದ್ದಾರಾ? ಇನ್ನೇನು ಶಶಿಕಲಾ ಜೈಲಿನಿಂದ ಬಂದ್ಬಿಟ್ಟು,ಚುನಾವಣೆಗೂ ಸಿದ್ದತೆ ಮಾಡಿಕೊಳುತ್ತಾರಾ? ಶಶಿಕಲಾಗೆ ಚುನಾವಣೆಗೆ ತಯಾರಿ ನಡೆಸಲು ಕೇಂದ್ರ ಬಿಜೆಪಿ ಸಪೋರ್ಟ್ ಮಾಡುತ್ತಿದೆಯಾ? ಹೀಗೆ ಸಾಕಷ್ಟು ಚರ್ಚೆಗಳು ತಮಿಳುನಾಡಿನ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಬಿಜೆಪಿ ಸಹಾಯದಿಂದ ಶಶಿಕಲಾ ನಟರಾಜನ್‌ಗೆ ಆಗಸ್ಟ್ 14 ರಂದು ಬಿಡುಗಡೆ ಭಾಗ್ಯ ಸಿಗುತ್ತಿದೆ ಎಂದು ತಮಿಳುನಾಡಿನ ಬಿಜೆಪಿ ನಾಯಕ ಆಶೀವಾದಂ ಆಚಾರಿ ಮಾಡಿರೋ ಟ್ವೀಟ್ ಮಾಡಿದ್ದರು. ಅವರ ಟ್ವೀಟ್​ ಬೆನ್ನಲ್ಲೇ ಭಾರೀ ಚರ್ಚೆ ಆಗುತ್ತಿದೆ.

ಈ ಬೆಳವಣಿಗೆ ಬೆನ್ನಲ್ಲೇ ತಮಿಳುನಾಡಿನಲ್ಲಿ ಶಶಿಕಲಾ ನಟರಾಜನ್ ಬಿಡುಗಡೆ ಚರ್ಚೆ ಸಂಬಂಧ  ಜೈಲಾಧಿಕಾರಿಗಳಿಂದ ಕಾರಾಗೃಹ ಡಿಜಿ ಅಲೋಕ್ ಮೋಹನ್‌ ಮಾಹಿತಿ ಪಡೆದಿದ್ದಾರೆ. ಶಶಿಕಲಾ ಜೈಲಿಗೆ ಬಂದಿದ್ದು ಯಾವಾಗ,ಮತ್ತೆ ಬಿಡುಗಡೆಯ ತಿಂಗಳು ಯಾವುದು? ಈ ಬಿಡುಗಡೆಯ ಸುದ್ದಿ ಹಬ್ಬಿದ್ದು ಹೇಗೆ ಎಂಬುದರ ಮಾಹಿತಿ ಪಡೆದಿದ್ದಾರೆ? ಇನ್ನು ಕಾರಾಗೃಹ ಇಲಾಖೆ ಡಿಜಿರಿಂದ ಗೃಹ ಇಲಾಖೆಗೂ ಮಾಹಿತಿ ನೀಡಲಾಗಿದೆ. ಸದ್ಯ ಬಿಜೆಪಿ ಮುಖಂಡನ ಟ್ವೀಟ್ ಬೆನ್ನಲ್ಲೇ ಜೈಲಿನಲ್ಲಿ ಶಶಿಕಲಾ ಹ್ಯಾಪಿ ಮೂಡ್ ನಲ್ಲಿದ್ದಾರೆ ಎನ್ನಲಾಗಿದೆ.

2017 ಫೆಬ್ರವರಿ 14 ರಂದು ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ಚಿನ್ನಮ್ಮ ಜೊತೆ  ಇಳವರೆಸಿ ಹಾಗೂ ಸುಧಾಕರ್ ಸಹ ಜೈಲುಪಾಲಾಗಿದ್ದರು. 2021 ಫೆಬ್ರವರಿ ತಿಂಗಳ ಕೊನೆ ವಾರದಲ್ಲಿ ಜೈಲಿನ ಅವಧಿ ಮುಗಿಯಲಿದೆ. ಯಾವುದೇ ಕಾರಣಕ್ಕೂ ಅವಧಿಗೂ ಮುನ್ನ ಶಶಿಲಾ ನಟರಾಜನ್ ಬಿಡುಗಡೆ ಇಲ್ಲ ಎಂದಿದ್ದಾರೆ. ಈಗಾಗ್ಲೇ ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆಗೆ ಪಟ್ಟಿ ಸಹ ಸಿದ್ಧಪಡಿಸಲಾಗಿದೆ.ಈ ಪಟ್ಟಿಯಲ್ಲಿ 55 ಮಂದಿ ಹೆಸರಿದ್ದು,ಐವರು ಮಹಿಳೆಯರಿದ್ದಾರೆ.ಈ ಪಟ್ಟಿಯಲ್ಲಿ ಶಶಿಕಲಾ ನಟರಾಜನ್ ಹೆಸರು ಕೊಟ್ಟಿಲ್ಲ ಎಂದು ಜೈಲಿನ ಮೂಲಗಳು ತಿಳಿಸಿವೆ. ಹೀಗಾಗಿ ಅವರು ಬಿಡುಗಡೆ ಆಗೋದು ಅನುಮಾನ ಎನ್ನಲಾಗುತ್ತಿದೆ.
Published by: Rajesh Duggumane
First published: July 4, 2020, 8:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading