• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆ; ಮಹಿಳಾ ರಾಜಕಾರಣಿ, ಮಾತೃ ಹೃದಯಿ ಶಶಿಕಲಾ ಜೊಲ್ಲೆ

ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆ; ಮಹಿಳಾ ರಾಜಕಾರಣಿ, ಮಾತೃ ಹೃದಯಿ ಶಶಿಕಲಾ ಜೊಲ್ಲೆ

ಸಚಿವೆ ಶಶಿಕಲಾ ಜೊಲ್ಲೆ

ಸಚಿವೆ ಶಶಿಕಲಾ ಜೊಲ್ಲೆ

ಜಗತ್ತನ್ನೆ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ಸಂಕಷ್ಟದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರ ಸ್ಪಂದನೆಯ ಸಿಹಿ, ಜನರ ಮನದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದ್ದು, ಸ್ಮರಣೀಯವಾಗಿದೆ.

  • Share this:

    ವಿಜಯಪುರ: ರಾಜಕಾರಣ ಹಾಗೂ ರಾಜಕಾರಣಿಗಳು ಇಂದು ಸಂಪೂರ್ಣ ಕಲುಷಿತಗೊಂಡು, ವೈಯಕ್ತಿಕ ಸ್ವಾರ್ಥ ಸಾಧನೆಗಳಲ್ಲಿಯೇ ಮುಳುಗಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪಗಳ ಮಧ್ಯೆ, ಅಪರೂಪದ ಮಹಿಳಾ ರಾಜಕಾರಣಿ ಶಶಿಕಲಾ ಜೊಲ್ಲೆ ಅವರು ತಮ್ಮ ಮಾತೃ ಹೃದಯದೊಂದಿಗೆ, ಮಾನವೀಯ ಮೌಲ್ಯಗಳನ್ನಿಟ್ಟುಕೊಂಡು ಅಪ್ಪಟ ಜನಸೇವೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.
    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ, ಶಶಿಕಲಾ ಜೊಲ್ಲೆ ಏಕೈಕ ಮಹಿಳಾ ಸಚಿವೆಯಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿಯಾಗಿ, ತಮಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದಾರೆ.


    ಕೊರೋನಾ ಕಹಿಯಲ್ಲೂ ಸ್ಪಂದನೆಯ ಸಿಹಿ:


    ಜಗತ್ತನ್ನೆ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ಸಂಕಷ್ಟದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರ ಸ್ಪಂದನೆಯ ಸಿಹಿ, ಜನರ ಮನದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದ್ದು, ಸ್ಮರಣೀಯವಾಗಿದೆ.
    ಗಡಿ ಭಾಗದ ನಿಪ್ಪಾಣಿಯಲ್ಲಿನ ತಮ್ಮ ಶಿವಶಂಕರ ಜೊಲ್ಲೆ ಸಿಬಿಎಸ್‌ಸಿ ಪಬ್ಲಿಕ್ ಸ್ಕೂಲ್ ಅನ್ನು ಕೋವಿಡ್ ಕೇರ್ ಸೆಂಟರನ್ನಾಗಿ ಮಾರ್ಪಡಿಸಿ, ಸಾವಿರಾರು ಜನರ ಜೀವ ಕಾಪಾಡಿದ್ದಾರೆ. ಅಂದಿನ ಕೋವಿಡ್ ವಿಷಮ ಘಳಿಗೆಯಲ್ಲಿ ಸಾರ್ವಜನಿಕರು ಚಿಕಿತ್ಸೆ ಪಡೆಯುವುದು ತುಂಬಾ ದುಸ್ತರವಾಗಿತ್ತು. ಅಂದು ಕೋವಿಡ್ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಕೊಲ್ಹಾಪುರ ಹಾಗೂ ಬೆಳಗಾವಿಗೆ ಹೋಗುವ ಪರಿಸ್ಥಿತಿ ಇದ್ದಾಗ, ಬಡ ಜನರು ಹಣವಿಲ್ಲದೆ ಕೋವಿಡ್ ಚಿಕಿತ್ಸೆ ಪಡೆಯಲು ಹೆಣಗುವಂತಾಗಿತ್ತು. ಇಂತಹ ಕಠಿಣ ಸ್ಥಿತಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರು, ತಮ್ಮ ಜೊಲ್ಲೆ ಸಮೂಹ ಸಂಸ್ಥೆಯ ಎಲ್ಲ ಶಾಲಾ ಕಟ್ಟಡಗಳಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಿ, ಗಡಿ ಭಾಗದ ಜನರ ಸೇವೆಗೆ ಮುಂದಾಗಿ, ಎಂತಹದೇ ಸಂಕಷ್ಟದ ಸಮಯದಲ್ಲಿ ತಾವು ಯಾವತ್ತೂ ಜನರೊಂದಿಗೆ ಇರುತ್ತೇನೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.




    ಇದೇ ವೇಳೆ ಕೋವಿಡ್ ರೋಗಿಗಳ ಚಿಕಿತ್ಸಾ ದಾವಂತದಲ್ಲಿರುವ ಸ್ವತಃ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಕುಟುಂಬ ಸದಸ್ಯರು ಕೂಡ ಕೋವಿಡ್ ಸೋಂಕಿಗೆ ತಗುಲಿದಾಗ, ಆತ್ಮಸ್ಥೈರ್ಯ, ಧೈರ್ಯದಿಂದ ಚಿಕಿತ್ಸೆ ಪಡೆದು ಗುಣಮುಖರಾದರು.




    ಚಿಕಿತ್ಸಾ ವೆಚ್ಚದಲ್ಲಿನ ಹಣ ಮರು ಪಾವತಿ:


    ಇಲ್ಲಿನ ಕೋವಿಡ್ ಸೆಂಟರ್‌ನಲ್ಲಿ ಅಂದು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ, ಬೆಡ್ ಸೇರಿದಂತೆ ಊಟೋಪಚಾರದ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು. ಕೊರೋನಾ ಕರಿ ನೆರಳಲ್ಲಿ, ಸಿಕ್ಕಿದ್ದೇ ಸೀರುಂಡೆ ಎನ್ನುವಂತೆ ಖಾಸಗಿ ಆಸ್ಪತ್ರೆಗಳು 3- 4 ಲಕ್ಷ ಎನ್ನುವಂತೆ ಕೈಗೆ ಬಂದಷ್ಟು ರೋಗಿಗಳ ಕುಟುಂಬಗಳಿಂದ ಪೀಕಿರುವ ಸಂದರ್ಭ, ಕೇವಲ 4,000, 5,000 ಸಾವಿರ ರೂ.ಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ ರೋಗಿಯ ಚಿಕಿತ್ಸಾ ವೆಚ್ಚದಲ್ಲಿ ಉಳಿದ ಹಣವನ್ನು ಮರು ಪಾವತಿಸಿ, ರೋಗಿಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿರುವುದು ಜೊಲ್ಲೆ ಕುಟುಂಬದ ಪುಣ್ಯದ ಕಾರ್ಯವಾಗಿದೆ.




    ಸಾಮಾನ್ಯರಂತೆ ಚಿಕಿತ್ಸೆ ಪಡೆದ ಸಚಿವೆ ಜೊಲ್ಲೆ:


    ಕೋವಿಡ್ ವಿಷಮ ಘಳಿಗೆಯಲ್ಲಿ ಸ್ವತಃ ಸಚಿವೆ ಶಶಿಕಲಾ ಜೊಲ್ಲೆ ಅವರು ಕೋವಿಡ್‌ನಿಂದ ಬಾಧಿತಗೊಂಡಾಗ, ಅವರು ಕೂಡ ತಮ್ಮ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅತಿ ಸಾಮಾನ್ಯರಂತೆ ಚಿಕಿತ್ಸೆ ಪಡೆದಿದ್ದಾರೆ.
    ಸಾಮಾನ್ಯ ಜನರಿಗೆ ನೀಡಲಾಗುತ್ತಿದ್ದ ಊಟೋಪಚಾರವನ್ನೇ ತಾವು ಪಡೆದುಕೊಂಡು, ಇಲ್ಲಿನ ಕೇರ್ ಸೆಂಟರ್ ಹಮ್ಮಿಕೊಂಡಿದ್ದ ಧ್ಯಾನ್, ಯೋಗ, ಕ್ರೀಡಾ ಚಟುವಟಿಕೆಗಳಲ್ಲಿ ಸಚಿವರೂ ಪಾಲ್ಗೊಂಡು, ಕೋವಿಡ್ ಸೋಂಕನ್ನು ಗೆದ್ದು ಬಂದಿದ್ದಾರೆ.


    2 ಕೋಟಿ ರೂ.ಗಳ ಖರ್ಚು:


    ಕೋವಿಡ್‌ನಂತಹ ಕಷ್ಟದ ಸಂದರ್ಭ ಸಾರ್ವಜನಿಕರ ಸೇವೆಗಾಗಿ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬ ವೈಯಕ್ತಿಕವಾಗಿ 1 ಕೋಟಿ ರೂ.ಗಳ ಖರ್ಚು ಮಾಡಿದೆ.
    ಕೋವಿಡ್ ಸೆಂಟರ್‌ನಲ್ಲಿ 50 ಬೆಡ್, 16 ಆಕ್ಸಿಜೆನ್ ವ್ಯವಸ್ಥೆಯ ಕೋವಿಡ್ ಸೆಂಟರ್‌ನಲ್ಲಿ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ತುಂಬಾ ಗಂಭೀರ ಸ್ವರೂಪದ ರೋಗ ಲಕ್ಷಣವಿದ್ದ ರೋಗಿಗಳನ್ನು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರವಾನಿಸಲಾಗಿತ್ತು. ಇನ್ನೊಂದು ಹೆಮ್ಮೆಯ ವಿಷಯವೆಂದರೆ, ಈ ಕೋವಿಡ್ ಸೆಂಟರ್‌ನಲ್ಲಿ ಯಾವುದೇ ರೋಗಿ ಮೃತಪಟ್ಟಿಲ್ಲ. ಹೀಗೆ ಪ್ರತಿ ರೋಗಿಗೂ ಉತ್ತಮ ಚಿಕಿತ್ಸೆ ನೀಡುವ ಮೂಲಕ ಮಹಾನ್ ಕಾರ್ಯ ಮಾಡಿರುವುದು ನಿಜಕ್ಕೂ ಜೊಲ್ಲೆ ಕುಟುಂಬದ ಹೆಗ್ಗಳಿಕೆಯಾಗಿದೆ.

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು