• Home
  • »
  • News
  • »
  • state
  • »
  • Mangaluru Blast: ಸೋದರಿಯರ ಖಾತೆಗೆ ಲಕ್ಷ ಲಕ್ಷ ಹಣ ವರ್ಗಾವಣೆ; ವಿದೇಶದಿಂದ ಫಂಡಿಂಗ್ ಆಗಿತ್ತಾ?

Mangaluru Blast: ಸೋದರಿಯರ ಖಾತೆಗೆ ಲಕ್ಷ ಲಕ್ಷ ಹಣ ವರ್ಗಾವಣೆ; ವಿದೇಶದಿಂದ ಫಂಡಿಂಗ್ ಆಗಿತ್ತಾ?

ಮಂಗಳುರು ಆಟೋ ಬ್ಲಾಸ್ಟ್​

ಮಂಗಳುರು ಆಟೋ ಬ್ಲಾಸ್ಟ್​

ಶಾರೀಕ್ ತನ್ನ ಸ್ನೇಹಿತ ಮಾಝ್ ಬಂಧನಕ್ಕೆ ಪ್ರತಿಕಾರ ತೆಗೆದುಕೊಳ್ಳಲು ಈ ಕೃತ್ಯಕ್ಕೆ ಮುಂದಾಗಿದ್ದ ಎಂದು ತಿಳಿದು ಬಂದಿದೆ. ಶಾರೀಕ್, ಗುರು ಯಾಸೀನ್ ಮತ್ತು ಮಾಝ್ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಪಣ ತೊಟ್ಟಿದ್ದರಂತೆ.

  • Share this:

ಮಂಗಳೂರು ಸ್ಫೋಟದ ಮಾಸ್ಟರ್ ಮೈಂಡ್​ ಉಗ್ರ ಶಾರೀಕ್​ಗೆ  (Shaik) ವಿದೇಶಗಳಿಂದ ಹಣ ಬರುತ್ತಿತ್ತಾ ಅನ್ನೋ ಪ್ರಶ್ನೆ ಮೂಡಿದೆ. ಶಾರೀಕ್ ತನ್ನ ಸೋದರಿಯರ ಬ್ಯಾಂಕ್ ಖಾತೆಗ ಲಕ್ಷ ಲಕ್ಷ ಹಣ ವರ್ಗಾವಣೆ (Money Transfer) ಮಾಡಿರುವ ಬಗ್ಗೆ ವರದಿಯಾಗಿದೆ. ಇಷ್ಟು ದೊಡ್ಡ ಮೊತ್ತದ ಹಣ ಶಾರೀಕ್​ಗೆ ಹೇಗೆ ಸಿಗುತ್ತಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ  (Police Investigation) ನಡೆಸುತ್ತಿದ್ದಾರೆ. ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ವಿದೇಶದಿಂದ ಫಂಡಿಂಗ್ (Foreign Funding) ಆಗುತ್ತಿತ್ತಾ ಎಂಬ ಆಯಾಮದಲ್ಲಿಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮತ್ತೋರ್ವ ಉಗ್ರ ಅರಫಾತ್ ದುಬೈನಲ್ಲಿದ್ದು, ಈತನೇ ಶಾರೀಕ್​ಗೆ ಹಣ ಸಂದಾಯ ಮಾಡುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.  


ಶಾರೀಕ್ ತನ್ನ ಸ್ನೇಹಿತ ಮಾಝ್ ಬಂಧನಕ್ಕೆ ಪ್ರತಿಕಾರ ತೆಗೆದುಕೊಳ್ಳಲು ಈ ಕೃತ್ಯಕ್ಕೆ ಮುಂದಾಗಿದ್ದ ಎಂದು ತಿಳಿದು ಬಂದಿದೆ. ಶಾರೀಕ್, ಗುರು ಯಾಸೀನ್ ಮತ್ತು ಮಾಝ್ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಪಣ ತೊಟ್ಟಿದ್ದರಂತೆ.


ಶಾರೀಕ್ ಸಂಪರ್ಕಿತ ಓರ್ವ ವಶಕ್ಕೆ


ಇನ್ನು ಪ್ರಕರಣ ಸಂಬಂಧ ಪೂರ್ವ ವಿಭಾಗ ಡಿಸಿಪಿ ಭೀಮಾ‌ಶಂಕರ್ ಗುಳೇದ್ ಮಾತನಾಡಿ, ಮಂಗಳೂರು ಪೊಲೀಸರು ಕರೆ ಮಾಡಿದ್ರು. ಓರ್ವ ಶಂಕಿತ ನಿಮ್ಮ ಭಾಗದಲ್ಲಿ ಇದ್ದಾನೆಂದು ಹೇಳಿದ್ರು. ಮೈಸೂರು ಪೊಲೀಸರು ಬೆಂಗಳೂರಿಗೆ ಬರುವ ಬಗ್ಗೆ ಮಾಹಿತಿ ನೀಡಿದ್ರು.


ತಕ್ಷಣವೇ ಮೊಹಮ್ಮದ್ ರಾಹುಲ್ಲಾನ ವಶಕ್ಕೆ ಪಡೆಯಲಾಗಿದೆ. ಮೊಹಮ್ಮದ್ ಮೈಸೂರು ಮೂಲದವನು ಎಂದು ಹೇಳಿದ್ದ. ಮೈಸೂರು ಪೊಲೀಸರು ಬಂದ ಬಳಿಕ ಅವರಿಗೆ ಒಪ್ಪಿಸಲಾಗಿದೆ.  ಮೈಸೂರು ಮನೆ ಸರ್ಚ್ ಮಾಡಬೇಕೆಂದು ಕರೆದೊಯ್ದರು. ಆತನ ಭಾಗಿ ಏನು ಎನ್ನುವುದರ ಬಗ್ಗೆ ಮಾಹಿತಿ ಇಲ್ಲ ಅಂತಾ ಹೇಳಿದ್ದಾರೆ.


ದೇವರಿಗೆ ಥ್ಯಾಂಕ್ಸ್​ ಹೇಳಬೇಕು


ಮಂಗಳೂರು ಸ್ಫೋಟದಲ್ಲಿ ದೊಡ್ಡ ಅನಾಹುತ ತಪ್ಪಿದೆ ಅನ್ನೋ ನೆಮ್ಮದಿ ಇದೆ. ಬಾಂಬ್ ಬ್ಲಾಸ್ಟ್ ಆಗಿದ್ದರೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗ್ತಾ ಇತ್ತು. ಆದರೆ ಆ ವಿಚಾರದಲ್ಲಿ ದೇವರಿಗೆ ಧನ್ಯವಾದ ಸಲ್ಲಿಸಲೇಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ನಿನ್ನೆ ಹೇಳಿದ್ದಾರೆ.


ನವೆಂಬರ್ 19ರಂದು ಸಂಜೆ 4.40ರಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಪ್ರಯಾಣಿಕ, ಆಟೋ ಚಾಲಕನಿಗೆ ಗಾಯಗಳಾಗಿವೆ. ತಕ್ಷಣ ಪೊಲೀಸ್ ಅಧಿಕಾರಿಗಳಿಂದ ಗುರುತು ಪತ್ತೆ ಮಾಡುವ ಕೆಲಸ ನಡೆದಿದ್ದು ಆರೋಪಿ ಬಳಿ ಪ್ರೇಮರಾಜ್​ ಎಂಬ ಹೆಸರಿನ ಐಡಿ ಸಿಕ್ಕಿತ್ತು. ನಾನೇ ಪ್ರೇಮರಾಜ್​ ಎಂಬಾತನ ಜೊತೆ ಮಾತನಾಡಿದ್ದೇನೆ. ತಕ್ಷಣ ಪೊಲೀಸರಿಗೆ ತಿಳಿಸಲು ಪ್ರೇಮರಾಜ್​ಗೆ ಹೇಳಿದ್ದೆ.


ಕೊಯಂಬತ್ತೂರಿನಲ್ಲಿಯೂ ವಾಸವಾಗಿದ್ದ


ಶಾರೀಕ್​ ಸಂಬಂಧಿಕರು ಬಂದು ಗುರುತು ಪತ್ತೆ ಹಚ್ಚಿದ್ದಾರೆ. ಈತ ಮೋಹನ್​ ಕುಮಾರ್​ ಎಂಬವರ ಮನೆಯಲ್ಲಿ ವಾಸವಿದ್ದ. ಶಂಕಿತ ವಾಸವಿದ್ದ ಮನೆಯಲ್ಲಿ ಹಲವು ಸ್ಫೋಟಕ ವಸ್ತುಗಳು ಸಿಕ್ಕಿವೆ. ಈ ಆರೋಪಿಯು ಮೈಸೂರಿನಿಂದ ಮಂಗಳೂರಿಗೆ ಬಂದಿದ್ದಾನೆ. ಮತ್ತೊಂದು ಫೇಕ್ ಐಡಿ ಪಡೆದು ಕೊಯಂಬತ್ತೂರಿನಲ್ಲಿ ವಾಸವಿದ್ದ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದರು.


ಇದನ್ನೂ ಓದಿ:  Mangaluru Blast: ಕುಕ್ಕರ್‌ನಲ್ಲಿ ಬಾಂಬ್ ಇಟ್ಟಿದ್ದ ಶಾರೀಕ್ ಎಂತಾ ಖತರ್ನಾಕ್ ಗೊತ್ತಾ? ಇಲ್ಲಿದೆ ಶಂಕಿತ ಉಗ್ರನ ಭಯಾನಕ ಹಿಸ್ಟರಿ


ಕಂಕನಾಡಿ ಠಾಣೆಯಲ್ಲಿ ಎಫ್​ಐಆರ್


ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ FIR ಪ್ರತಿ ನ್ಯೂಸ್​18 ಕನ್ನಡಕ್ಕೆ ಲಭ್ಯವಾಗಿದೆ. ಆಟೋ ಚಾಲಕ ಪುರುಷೋತ್ತಮ್ ನೀಡಿದ ದೂರಿನ ಆಧಾರದ ಮೇಲೆ FIR ದಾಖಲಾಗಿದ್ದು, ಯುಎಪಿಎ, ಐಪಿಸಿ 120ಬಿ, 307 ಅಡಿ ಕೇಸ್ ದಾಖಲಿಸಲಾಗಿದೆ.


ಮಂಗಳೂರು ಟಾರ್ಗೆಟ್​​


ಪಿಎಫ್​​ಐ ಸಂಘಟನೆ ನಿಷೇಧ, ರಾಜ್ಯದಲ್ಲಿ ಹಿಜಾಬ್ ಸಂಘರ್ಷ, ಬಿಜೆಪಿ, ಆರ್​​ಎಸ್​ಎಸ್​ ಪ್ರಾಬಲ್ಯಕ್ಕೆ ಸಾಕ್ಷಿಯಾಗಿರೋ ಮಂಗಳೂರನ್ನೇ ಉಗ್ರರು ಟಾರ್ಗೆಟ್ ಮಾಡಿಕೊಂಡಿದ್ರಂತೆ. ISIS ಜೊತೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರ ಶಾರೀಕ್​​​, ಕದ್ರಿ ಬಳಿಯ ಗೋಡೆ ಬರಹ ಬರೆದು ​​ ಅರೆಸ್ಟ್ ಆಗಿದ್ದ.


ಇದನ್ನೂ ಓದಿ:  Mangaluru Blast: ಉಗ್ರ ಸೂಸೈಡ್ ಬಾಂಬರ್ ಆಗಿದ್ನಾ? ಶಾರೀಕ್ ಪೋಷಕರನ್ನು ಕರೆಸುತ್ತಿರುವ ಪೊಲೀಸರು


ಮಂಗಳೂರಿನಲ್ಲಿ ಗೋಲಿಬಾರ್ ನಡೆದಿದ್ದಾಗಲೂ ಸ್ಥಳದಲ್ಲಿದ್ದ. ಇದೇ ಕಾರಣಕ್ಕೆ ಶಾರೀಕ್​​​ ಮಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದನಂತೆ. ತನ್ನ ಹ್ಯಾಂಡ್ಲರ್​ಗಳ ಸೂಚನೆಯಂತೆ ಪಂಪ್​​​ವೆಲ್ ಬಳಿ ಸ್ಫೋಟಕ್ಕೆ ನಿರ್ಧರಿಸಿದ್ದನಂತೆ. ಪ್ಲಾನ್ ಪ್ರಕಾರ ಸ್ಫೋಟ ಸಂಭವಿಸಿದ್ರೆ ದೊಡ್ಡ ಮಟ್ಟದ ಅನಾಹುತ ಸಂಭವಿಸ್ತಿತ್ತು.

Published by:Mahmadrafik K
First published: