• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • NIA ಚಾರ್ಜ್​​​ಶೀಟ್​ನಲ್ಲಿ ಶಾರೀಕ್​​ನ ಸಂಚು ಬಯಲು; ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ​

NIA ಚಾರ್ಜ್​​​ಶೀಟ್​ನಲ್ಲಿ ಶಾರೀಕ್​​ನ ಸಂಚು ಬಯಲು; ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ​

ಶಾರೀಕ್

ಶಾರೀಕ್

ಆಗಸ್ಟ್ 15 2022 ರಂದು ಶಿವಮೊಗ್ಗದಲ್ಲಿ (Shivamogga Case) ಪ್ರೇಮ್ ಸಿಂಗ್ ಗೆ ಚಾಕು ಇರಿಯಲಾಗಿತ್ತು. ಇಬ್ಬರು ಆರೋಪಿಗಳು ಬಿ ಟೆಕ್ ಪದವೀಧರರು ಎಂಬುವುದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

  • Share this:

ಬೆಂಗಳೂರು: ಶಿವಮೊಗ್ಗ ತುಂಗಾ ನದಿ (Tunga River) ತೀರದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ (NIA) ಇಬ್ಬರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆ (Charge sheet) ಮಾಡಿದೆ. ಮಾಜ್ ಮುನೀರ್ ಅಹಮದ್ ಹಾಗೂ ಸೈಯದ್ ಯಾಸೀನ್ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಯಾಗಿದ್ದು, ಹಲವು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಐಪಿಸಿ 120ಬಿ, 121ಎ ಮತ್ತು 122, 1860, ಯುಎಪಿಎ ಕಾಯ್ದೆ 18, 18ಬಿ, 20 ಮತ್ತು 38 ರ ಅಡಿಯಲ್ಲಿ ದೋಷಾರೋಪಣ ಪಟ್ಟಿಯನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ (Court) ಸಲ್ಲಿಕೆ ಮಾಡಲಾಗಿದೆ.


ಆರೋಪಿಗಳಿಬ್ಬರು ಐಸಿಸ್ ಚಟುವಟಿಕೆಗಳನ್ನ ರಾಜ್ಯದಲ್ಲಿ ವಿಸ್ತರಿಸಲು ಸಂಚು ರೂಪಿಸಿದ್ದರು. ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳು ಹಾಗೂ ಹಿಂಸಾಚಾರ ನಡೆಸಲು ಯೋಜನೆ ಮಾಡಿಕೊಂಡಿದ್ದರು.


ಆಗಸ್ಟ್ 15 2022 ರಂದು ಶಿವಮೊಗ್ಗದಲ್ಲಿ (Shivamogga Case) ಪ್ರೇಮ್ ಸಿಂಗ್ ಗೆ ಚಾಕು ಇರಿಯಲಾಗಿತ್ತು. ಇಬ್ಬರು ಆರೋಪಿಗಳು ಬಿ ಟೆಕ್ ಪದವೀಧರರು ಎಂಬುವುದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.


ವಿದೇಶಿ ಮೂಲದ ಹ್ಯಾಂಡ್ಲರ್​​ಗಳಿಂದ ಪ್ರೇರೇಪಣೆ


ವಿದೇಶಿ ಮೂಲದ ಹ್ಯಾಂಡ್ಲರ್‌ ಗಳಿಂದ ಪ್ರೇರೇಪಿತರಾಗಿದ್ದ ಶಂಕಿತರು ಗೋದಾಮುಗಳು, ಮದ್ಯದ ಮಳಿಗೆಗಳು, ಹಾರ್ಡ್‌ವೇರ್ ಅಂಗಡಿಗಳು, ವಾಹನಗಳು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಹಾನಿಗೆ ಸಂಚು ರೂಪಿಸಿದ್ದರು. ಮಾಜ್ ಮತ್ತು ಯಾಸೀನ್ 25ಕ್ಕೂ ಹೆಚ್ಚು ಬೆಂಕಿ ಹಚ್ಚಿದ್ದ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ರು ಎಂಬ ಅಂಶ ಬೆಳಕಿಗೆ ಬಂದಿದೆ.


ವಾರಾಹಿ ನದಿ ದಡದಲ್ಲಿ ಪ್ರಾಯೋಗಿಕ ಸ್ಫೋಟ


ಆಗುಂಬೆ ಮತ್ತು ವಾರಾಹಿ ನದಿ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಸ್ಫೋಟಕಗಳ ಸಂಗ್ರಹ ಮಾಡಿದ್ದರು. ಅದೇ ಸ್ಥಳದಲ್ಲಿ ಐಇಡಿಯನ್ನು ತಯಾರಿಸಲು ಮುಂದಾಗಿದ್ದರು. ವಾರಾಹಿ ನದಿ ದಡದಲ್ಲಿ ಐಇಡಿ ಪ್ರಾಯೋಗಿಕ ಸ್ಫೋಟ ಮಾಡಿ ಈ ವೇಳೆ ಭಾರತದ ರಾಷ್ಟ್ರೀಯ ಧ್ವಜವನ್ನು ಸುಟ್ಟು ಹಾಕಿ ವಿಡಿಯೋವನ್ನು ರೆಕಾರ್ಡ್ ಮಾಡಿದ್ದರು.


ಇದನ್ನೂ ಓದಿ: Karnataka Politics: ಉಗ್ರ ಕಸಬ್​ಗೆ ಬಿರಿಯಾನಿ ತಿನ್ನಿಸಿದ್ದ ಕಾಂಗ್ರೆಸ್: ಶಾರೀಕ್ ಪರ ಬ್ಯಾಟಿಂಗ್ ಮಾಡಿದ ಡಿಕೆಶಿಗೆ ಕಟೀಲ್ ಗುದ್ದು!


ವಿದೇಶಿ ಹ್ಯಾಂಡ್ಲರ್​​ಗಳಿಂದ 1.5 ಲಕ್ಷ ಮೌಕ್ಯದ ಕ್ರಿಪ್ಟೋ ಕರೆನ್ಸಿಯನ್ನು ಸ್ನೇಹಿತರ ಖಾತೆ ಮೂಲಕ ಮಾಜ್ ಪಡೆದಿದ್ದನು. ಸೈಯದ್ ಯಾಸಿನ್ ಸ್ನೇಹಿತನ ಖಾತೆಗೆ 62 ಸಾವಿರ ಹಣ ಜಮೆ‌ ಮಾಡಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಶಾರಿಕ್ ಬಾಂಬ್‌ ಬ್ಲಾಸ್ಟ್ ಗೆ ಪ್ಲಾನ್ ಮಾಡಿಕೊಂಡಿದ್ದನು.




ಕದ್ರಿ ದೇವಸ್ಥಾನ ಸ್ಫೋಟಕ್ಕೆ ಪ್ಲಾನ್


ನವೆಂಬರ್ 19, 2022 ರಂದು ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ಐಇಡಿ ಇರಿಸಿ ಸ್ಫೋಟಕ್ಕೆ ಪ್ಲಾನ್ ಮಾಡಿಕೊಂಡು ಬಂದಿದ್ದ ಶಾರೀಕ್ ಟೈಮರ್ ಅಸಮರ್ಪಕ ಕಾರ್ಯದಿಂದ ಮಾರ್ಗ ಮಧ್ಯೆದಲ್ಲಿಯೇ ಸ್ಫೋಟಗೊಂಡಿತ್ತು. ಸಂಪೂರ್ಣ ಪ್ರಕರಣ ಸಂಬಂಧ ಆರು ಆರೋಪಿಗಳ ವಿರುದ್ಧ ಎನ್​ಐಎ ತನಿಖೆ ಮುಂದುವರಿಸಿದೆ.


ಇಂದು ಕೊನೆ ದಿನ, ಟ್ರಾಫಿಕ್​​ ಫೈನ್ ಕಟ್ಬಿಡಿ


ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ನೀಡಿದ್ದ 50% ರಷ್ಟು ರಿಯಾಯಿತಿ ಸೌಲಭ್ಯ ಇಂದಿಗೆ ಅಂತ್ಯವಾಗಲಿದೆ.


ಇದನ್ನೂ ಓದಿ:  Corona Virus: ಎಚ್ಚರಿಕೆ ಗಂಟೆ ಮೊಳಗಿಸಿದ ಮಹಾಮಾರಿ; 796 ಹೊಸ ಕೇಸ್, ಐವರ ಸಾವು


ನಿನ್ನೆ ಬೆಂಗಳೂರಿನಲ್ಲಿ 36 ಸಾವಿರ ಪ್ರಕರಣಗಳಿಂದ 1.07 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ. ಇದರೊಂದಿಗೆ ಕಳೆದ 14 ದಿನಗಳಲ್ಲಿ 3.58 ಲಕ್ಷ ಪ್ರಕರಣಗಳಿಂದ ಒಟ್ಟು 10.37 ಕೋಟಿ ದಂಡ ಸಂಗ್ರಹವಾಗಿದೆ ಎನ್ನಲಾಗಿದೆ. ಇಂದು ಶೇ.50% ರಿಯಾಯಿತ ಅಂತ್ಯವಾಗಲಿದ್ದು, ಕೇಸ್​​ಗಳಿದ್ದರೆ ಬೇಗನೇ ಫೈನ್​​ ಕಟ್ಟಿಬಿಡಿ.


ಫುಡ್​ ಕಿಟ್​ಗಳು ಸೀಜ್​​


ತುಮಕೂರಲ್ಲಿ ಮತದಾರರಿಗೆ ಹಂಚಲು ತಂದಿದ್ದ ಲೋಡ್‌ಗಟ್ಟಲೆ ಫುಡ್ ಕಿಟ್​​ನ್ನ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯುಗಾದಿ ಹಾಗೂ ರಂಜಾನ್ ಪ್ರಯುಕ್ತ ಮತದಾರರಿಗೆ ಹಂಚಲು ಕಾಂಗ್ರೆಸ್​​ ಟಿಕೆಟ್​ ಆಕಾಂಕ್ಷಿ ಅಟ್ಟಿಕಾ ಬಾಬು ತಂದಿದ್ದ ಫುಡ್​ ಕಿಟ್​ಗಳು ಇವಾಗಿವೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು