Karnataka Hijab Row: ರಾಜ್ಯದಲ್ಲಿ ಭುಗಿಲೆದ್ದಿದ್ದ ಹಿಜಾಬ್ ವಿವಾದ ಹಾಗೂ ಕಾಲೇಜಿಗೆ ತೆರಳದಿರಲು ಕೆಲವು ಮುಸ್ಲಿಂ ಮಹಿಳೆಯರು (Muslim Woman) ನಿರ್ಧರಿಸಿದ ನಂತರ ಕರ್ನಾಟಕ ವಕ್ಫ್ ಮಂಡಳಿಯು (Karnataka Wakf Board) ರಾಜ್ಯದಲ್ಲಿ ಹತ್ತು ಹೊಸ ಕಾಲೇಜುಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಕಾಲೇಜುಗಳು (Colleges) ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದಕ್ಕೆ (Hijab Wearing) ಹಾಗೂ ಶರಿಯತ್ ಕಾನೂನನ್ನು (Shariat Laws) ಪಾಲಿಸುವುದಕ್ಕೆ ಯಾವುದೇ ಸಮಸ್ಯೆಗಳನ್ನು ಹೊಂದಿರುವುದಿಲ್ಲ ಎಂದು ತಿಳಿಸಿವೆ.
ಈ ಯೋಜನೆಗೆ ವಕ್ಫ್ ಮಂಡಳಿಯು ಲೋನ್ ಹಾಗೂ ಆರ್ಥಿಕ ನೆರವನ್ನೊದಗಿಸಲಿದೆ. ಈ ಕಾಲೇಜುಗಳಲ್ಲಿ ಅಭ್ಯಾಸ ನಡೆಸುವ ಮುಸ್ಲಿಂ ಮಹಿಳೆಯರಿಗೆ ತಮ್ಮ ಧರ್ಮದ ರೀತಿ ರಿವಾಜುಗಳನ್ನು ಪಾಲಿಸಲು ಯಾವುದೇ ಅಡೆತಡೆಗಳಿರುವುದಿಲ್ಲ ಎಂದು ವಕ್ಫ್ ಮಂಡಳಿ ತಿಳಿಸಿರುವುದಾಗಿ ಮಾಹಿತಿ ದೊರೆತಿದೆ.
ಹೆಚ್ಚಿನ ಕಾಲೇಜುಗಳ ಸ್ಥಾಪನೆಗೆ ವಕ್ಫ್ ಮಂಡಳಿ ಯೋಚನೆ
ಇಂತಹುದೇ ಹೆಚ್ಚಿನ ಕಾಲೇಜುಗಳ ಸ್ಥಾಪನೆಗೆ ವಕ್ಫ್ ಬೋರ್ಡ್ ಒಲವು ಹೊಂದಿದೆ. ಹಿಜಾಬ್ ವಿವಾದ ಭುಗಿಲೆದ್ದಿದ್ದ ಕರ್ನಾಟಕದಲ್ಲಿ ಸರಕಾರದ ತೀರ್ಪು ಧರ್ಮ ತಟಸ್ಥ ಎಂದು ರಾಜ್ಯ ಆಡಳಿತವು ಈ ಹಿಂದೆ ಸುಪ್ರೀಂ ಕೋರ್ಟ್ಗೆ ಹೇಳಿಕೆ ನೀಡಿತ್ತು.
ಪಿಎಫ್ಐ ಹಿಜಾಬ್ ಅನ್ನು ಮುಂದಿಟ್ಟುಕೊಂಡು ದೊಡ್ಡದಾದ ಪಿತೂರಿ ನಡೆಸುತ್ತಿದೆ ಎಂದು ತಿಳಿಸಿದ ಸರಕಾರವು ಪಿಎಫ್ಐ ಅನ್ನು ದೂಷಿಸಿತ್ತು ಹಾಗೂ ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು.
ಸಾಂವಿಧಾನಿಕ ಕರ್ತವ್ಯ ಲೋಪ
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ಬೆಂಬಲಿಸುವ ಚಳುವಳಿಯು ಕೆಲವೇ ವ್ಯಕ್ತಿಗಳ ಸ್ವೇಚ್ಛೆಯಾದ ಕೃತ್ಯ ಎಂದು ತಿಳಿಸಿದ್ದ ರಾಜ್ಯ ಸರಕಾರವು ನ್ಯಾಯಯುತವಾದ ವಿಧಾನದಲ್ಲಿ ಕಾರ್ಯನಿರ್ವಹಿಸದೇ ಇದ್ದರೆ ಅದು ಸಾಂವಿಧಾನಿಕ ಕರ್ತವ್ಯ ಲೋಪ ಎಂದು ತಿಳಿಸಿತ್ತು.
ರಾಜ್ಯ ಸರಕಾರಕ್ಕೆ ಹೈಕೋರ್ಟ್ ಬೆಂಬಲ
ಈ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಾಧೀಶರು ಹಿಜಾಬ್ ಕುರಿತಾಗಿ ವಿಭಜಿತ ತೀರ್ಪು ನೀಡಿದ್ದರು ಮತ್ತು ನಂತರದ ವಿಚಾರಣೆಗಾಗಿ ಅದನ್ನು ಒಂಬತ್ತು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸಲಾಯಿತು.
ಇದನ್ನೂ ಓದಿ: Islam College: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು; ಗುರುಕುಲ ಸ್ಥಾಪನೆಗೆ ಆಗ್ರಹಿಸಿದ ಹಿಂದೂ ಸಂಘಟನೆಗಳು
ಅದಕ್ಕೂ ಮೊದಲು ಹೈಕೋರ್ಟ್, ರಾಜ್ಯ ಸರಕಾರದ ಪರವಾಗಿ ತೀರ್ಪು ನೀಡಿತು ಹಾಗೂ ವೈಯಕ್ತಿಕ ಆಯ್ಕೆಗಿಂತ ಸಂಸ್ಥೆಯ ಶಿಸ್ತು ಮುಖ್ಯ ಹಾಗೂ ಸಂಸ್ಥೆಯ ನೀತಿ ನಿಯಮಗಳಿಗೆ ಅನುಸಾರವಾಗಿ ಅಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು ಎಂದು ತಿಳಿಸಿತ್ತು.
ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿಕೊಂಡು ಸಮಾನ ರೀತಿಯಲ್ಲಿ ತರಗತಿಗಳನ್ನು ಪ್ರವೇಶಿಸಬೇಕು ಎಂದು ಆದೇಶ ನೀಡಿತ್ತು.
ದೇಶದ ಇತೆರೆಡೆಗೂ ಹಬ್ಬಿದ ಹಿಜಾಬ್ ವಿವಾದ
ನವೆಂಬರ್ 22 ರಂದು ಇಂತಹುದೇ ಹಿಜಾಬ್ ಸಂಬಂಧಿತ ಸುದ್ದಿಯೊಂದು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದ್ದು, ಒಂದು ಗುಂಪಿಗೆ ಧಾರ್ಮಿಕ ವಸ್ತ್ರವನ್ನು ಧರಿಸಲು ಅನುಮತಿ ನೀಡಿದ್ದಕ್ಕಾಗಿ ಅಲ್ಲಿನ ಹಿಂದೂ ಹಾಗೂ ಮುಸ್ಲಿಂ ವಿದ್ಯಾರ್ಥಿಗಳು ಜಗಳವಾಡಿದ್ದರು.
ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ ಜನವರಿ 1 ರಂದು ಆರು ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಿ ಕಾಲೇಜಿನ ತರಗತಿಗಳಿಗೆ ಆಗಮಿಸಲು ಅವಕಾಶವಿಲ್ಲ ಎಂದು ಹೇಳಿಕೆ ನೀಡಿದ್ದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: Bengaluru: ಡ್ರಾಪ್ ಕೊಡುವ ನೆಪದಲ್ಲಿ ಶಾಲಾ ಬಸ್ನಲ್ಲೇ ಮಹಿಳೆ ಮೇಲೆ ಅತ್ಯಾಚಾರ!
ಈ ಕುರಿತಾಗಿ ಸುದ್ದಿಗೋಷ್ಠಿ ನೀಡಿದ್ದ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಪ್ರವೇಶಿಸಲು ಕಾಲೇಜು ಮಂಡಳಿಯಲ್ಲಿ ಪ್ರವೇಶ ಕೇಳಲಾಗಿದ್ದರೂ ಮಂಡಳಿ ಅನುಮತಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.
ಹಿಜಾಬ್ ವರ್ಸಸ್ ಕೇಸರಿ ಶಾಲು
ಕಾಲೇಜು ಮಂಡಳಿ ಹಾಗೂ ಅಲ್ಲಿನ ಅಧಿಕಾರಿ ವರ್ಗದ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ರಾಜ್ಯವ್ಯಾಪಿ ಸಮಸ್ಯೆಯಾಗಿ ಪರಿವರ್ತನೆಗೊಂಡಿತು. ಕರ್ನಾಟಕದ ಇತರ ನಗರ ಪ್ರದೇಶಗಳಿಂದ ಇಂತಹುದೇ ಪ್ರತಿಭಟನೆಗಳು ಏರ್ಪಟ್ಟವು.
ಹಿಜಾಬ್ ಧರಿಸಿ ಕಾಲೇಜಿನ ತರಗತಿಗಳಿಗೆ ಆಗಮಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಪ್ರತಿಭಟನೆ ನಡೆಸಿದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಧರಿಸಿ ಕಾಲೇಜಿಗೆ ಆಗಮಿಸಿದ್ದರು.
ಈ ವಿವಾದಗಳು ಹಾಗೂ ಹಿಜಾಬ್ಗೆ ವಿರುದ್ಧವಾಗಿ ಹಿಂದೂ ಯುವಕರು ಯುವತಿಯರು ಕೇಸರಿ ಶಾಲುಗಳನ್ನು ಧರಿಸಿ ಮಾಡಿದ ಪ್ರತಿ ಪ್ರತಿಭಟನೆಗಳು ಇತರ ರಾಜ್ಯಗಳಿಗೆ ಹರಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ