news18-kannada Updated:December 30, 2020, 4:56 PM IST
ಸಾಂದರ್ಭಿಕ ಚಿತ್ರ
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಚುನಾವಣೆಯ ಭರಾಟೆ ಜೋರಾಗಿ ನಡೆಯುತ್ತಿದೆ. 5,728 ಗ್ರಾಮ ಪಂಚಾಯಿತಿಯ 82,616 ಸ್ಥಾನಗಳಿಗೆ ಚುನಾವಣೆಯಾಗಿ ಇಂದು ಮತ ಎಣಿಕೆ ನಡೆಯುತ್ತಿದೆ. ಡಿಸೆಂಬರ್ 22 ಮತ್ತು 27ರಂದು ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷಗಳ ಹೆಸರಿನಲ್ಲಿ ಸ್ಪರ್ಧಿಸುವ ಅವಕಾಶ ಇರಲಿಲ್ಲ. ಆದರೆ, ವಿವಿಧ ಪಕ್ಷಗಳು ತಮ್ಮದೇ ಅಭ್ಯರ್ಥಿಗಳನ್ನ ಬೆಂಬಲಿಸಿವೆ. ಹೀಗಾಗಿ, ಇದು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಮುಂದಿನ ರಾಜಕೀಯ ವಿದ್ಯಮಾನಗಳಿಗೆ ಎಡೆ ಮಾಡಿಕೊಡಬಹುದಾದ ಈ ಗ್ರಾಮ ಪಂಚಾಯಿತಿ ಚುನಾವಣೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ.
ಚುನಾವಣೆ ಮುಗಿದ ನಂತರ ShareChat ಮತ್ತು ನ್ಯೂಸ್18 ಕನ್ನಡ ವಾಹಿನಿ ಜಂಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಮೀಕ್ಷೆ ನಡೆಸಿತ್ತು. ಅತಿ ಹೆಚ್ಚು ಸ್ಥಾನ ಯಾವ ಪಕ್ಷ ಗೆಲ್ಲಲಿದೆ ಎಂದು ಸಮೀಕ್ಷೆ ಮಾಡಲಾಗಿತ್ತು. ಅದರಂತೆ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಸಿಗುತ್ತದೆ ಎಂಬ ಅಭಿಪ್ರಾಯ ಬಂದಿದೆ. ಈಗ ಪ್ರಕಟವಾಗುತ್ತಿರುವ ಚುನಾವಣಾ ಫಲಿತಾಂಶವೂ ಇದನ್ನೇ ಸೂಚಿಸುತ್ತಿದ್ದು, ಶೇರ್ ಚಾಟ್ ಮತ್ತು ನ್ಯೂಸ್18 ಕನ್ನಡ ಸಮೀಕ್ಷೆ ಬಹುತೇಕ ನಿಜವಾಗಿದೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಆರಿಸಿ ಬರಲಿದ್ದಾರೆ? ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸಮೀಕ್ಷೆಯಲ್ಲಿ ಕೇಳಲಾಗಿತ್ತು. ShareChat – ನ್ಯೂಸ್18 ಕನ್ನಡದ ಈ ಸಮೀಕ್ಷೆಯ ವಿವರ ಇಲ್ಲಿದೆ:
ಬಿಜೆಪಿ----60.030003%
ಕಾಂಗ್ರೆಸ್----25.707054%
ಜೆಡಿಎಸ್----8.928404%
ಇತರೆ----5.334542%ಇದು ನ್ಯೂಸ್18 ಮತ್ತು ಶೇರ್ ಚಾಟ್ ಸಹಯೋಗದಲ್ಲಿ ಚುನಾವಣೋತ್ತರ ಸಾಮಾಜಿಕ ಜಾಲತಾಣ ಸಮೀಕ್ಷೆಯಾಗಿದೆ.
Published by:
Vijayasarthy SN
First published:
December 30, 2020, 3:53 PM IST