ಎಂಟಿಬಿ ಚಿನ್ನ, ಬೆಳ್ಳಿ ಆಮಿಷ ಒಡ್ಡಿದರೆ ಪರೀಕ್ಷಿಸಿ ತೆಗೆದುಕೊಳ್ಳಿ; ಮತದಾರರಿಗೆ ಶರತ್​ ಬಚ್ಚೇಗೌಡ ಸಲಹೆ

ಇನ್ನು ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್​ ಮತದಾರರನ್ನು ಸೆಳೆಯಲು ಚಿನ್ನ, ಬೆಳ್ಳಿ ಉಡುಗೊರೆ ನೀಡುತ್ತಿರುವುದಾಗಿ ಶರತ್​ ಬಚ್ಚೇಗೌಡ, ಆಪಾದಿಸಿದ್ದು, ವಸ್ತುಗಳ ಆಮಿಷಕ್ಕೆ ಬಲಿಯಾಗುವ ಮುನ್ನ ಅಸಲಿಯತ್ತು ಪರೀಕ್ಷಿಸಿ ಎಂದು ಸಲಹೆ ನೀಡಿದ್ದಾರೆ.

Seema.R | news18-kannada
Updated:December 2, 2019, 9:47 PM IST
ಎಂಟಿಬಿ ಚಿನ್ನ, ಬೆಳ್ಳಿ ಆಮಿಷ ಒಡ್ಡಿದರೆ ಪರೀಕ್ಷಿಸಿ ತೆಗೆದುಕೊಳ್ಳಿ; ಮತದಾರರಿಗೆ ಶರತ್​ ಬಚ್ಚೇಗೌಡ ಸಲಹೆ
ಶರತ್ ಬಚ್ಚೇಗೌಡ- ಎಂಟಿಬಿ ನಾಗರಾಜ್
  • Share this:
ಬೆಂಗಳೂರು (ಡಿ.02): ಉಪಚುನಾವಣಾ ಬಹಿರಂಗ ಪ್ರಚಾರಕ್ಕೆ ಇನ್ನೊಂದು ದಿನ ಬಾಕಿಇದ್ದು, ಚುನಾವಣಾ ಅಖಾಡ ರಂಗೇರಿದೆ. ಮತದಾರರ ಸೆಳೆಯಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದು, ಎದುರಾಳಿಗಳ ವಿರುದ್ಧ ವಾಕ್ಸಮರ ಮುಂದುವರೆಸಿದ್ದಾರೆ.

ಇನ್ನು ಜಿದ್ದಾಜಿದ್ದಿಯ ಕಣವಾದ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್​ ಬಚ್ಚೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದು, ಅನರ್ಹ ಅಭ್ಯರ್ಥಿಗಳ ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್​ ಮತದಾರರನ್ನು ಸೆಳೆಯಲು ಚಿನ್ನ, ಬೆಳ್ಳಿ ಉಡುಗೊರೆ ನೀಡುತ್ತಿರುವುದಾಗಿ ಶರತ್​ ಬಚ್ಚೇಗೌಡ, ಆಪಾದಿಸಿದ್ದು, ವಸ್ತುಗಳ ಆಮಿಷಕ್ಕೆ ಬಲಿಯಾಗುವ ಮುನ್ನ ಅಸಲಿಯತ್ತು ಪರೀಕ್ಷಿಸಿ ಎಂದು ಸಲಹೆ ನೀಡಿದ್ದಾರೆ.

ಜಡಿಗೇನಹಳ್ಳಿ ಹೋಬಳಿಯ ಪ್ರಚಾರ ಭಾಷಣ ಮಾಡಿದ ಅವರು, ಎಂಟಿಬಿ ನಾಗರಾಜ್​ ಮತದಾರರ ಸೆಳೆಯಲು ಚಿನ್ನದ ಉಂಗುರ, ಬೆಳ್ಳಿ ನಾಣ್ಯ ಹಚ್ಚುತ್ತಿದ್ದಾರೆ. ಇವುಗಳನ್ನು ಪಡೆಯುವ ಮುನ್ನ ಎಚ್ಚರವಹಿಸಿ. ಕಾರಣ ನಂದಗುಡಿ ಹೋಬಳಿಯ ಕೆಲವೆಡೆ ಬೆಳ್ಳಿ ನಾಣ್ಯ ಹಂಚಿದ್ದಾರೆ, ಮರುದಿನವೇ ನಾಣ್ಯಗಳೆಲ್ಲಾ ಕಪ್ಪಾಗಿದೆ. ಹಾಗಾಗಿ ವಸ್ತುಗಳನ್ನು ತೆಗೆದುಕೊಳ್ಳುವಾಗ ಹುಷಾರು ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನು ಓದಿ: ನೀತಿ ಸಂಹಿತೆ ಉಲ್ಲಂಘನೆ ಸಿಎಂ ಯಡಿಯೂರಪ್ಪ ಮೇಲೆ ದೂರು​ ದಾಖಲು; ಚುನಾವಣಾಧಿಕಾರಿ ಸಂಜೀವ್​ ಕುಮಾರ್

ರಾತ್ರಿ ಸಮಯದಲ್ಲಿ ಉಂಗುರಗಳನ್ನು ತೆಗೆದುಕೊಳ್ಳುವಾಗ ಎಚ್ಚರ. ಲೈಟ್​ ಆನ್​ ಮಾಡಿ ಕಲ್ಲಿಗೋ, ಗೋಡೆಗೋ ಉಜ್ಜಿ ನೋಡಿ. ನಕಲಿ ಉಂಗುರ ನೀಡಿ ಯಮಾರಿಸಿದರೆ ಕಷ್ಟ ಎಂದಿದ್ದಾರೆ.
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ