ಮಾಜಿ ಸ್ಪೀಕರ್​​​ ರಮೇಶ್​​ ಕುಮಾರ್​​ ಭೇಟಿಯಾದ ಶರತ್​​ ಬಚ್ಚೇಗೌಡ; ಕುತೂಹಲ ಮೂಡಿಸಿದ ಪಕ್ಷೇತರ ಶಾಸಕನ ನಡೆ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೊಸಕೋಟೆ ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಅವರನ್ನು ಗೆಲ್ಲಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ್ದರು. ಎಂಟಿಬಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದಕ್ಕೆ ಅಸಮಾಧಾನಗೊಂಡಿದ್ದ ಶರತ್ ಬಚ್ಚೇಗೌಡ ಅವರ ಮನವೊಲಿಸಲು ಕೊನೆಯವರೆಗೂ ವಿಫಲಯತ್ನ ನಡೆಸಿದರು.

news18-kannada
Updated:December 13, 2019, 12:15 PM IST
ಮಾಜಿ ಸ್ಪೀಕರ್​​​ ರಮೇಶ್​​ ಕುಮಾರ್​​ ಭೇಟಿಯಾದ ಶರತ್​​ ಬಚ್ಚೇಗೌಡ; ಕುತೂಹಲ ಮೂಡಿಸಿದ ಪಕ್ಷೇತರ ಶಾಸಕನ ನಡೆ
ಮಾಜಿ ಸ್ಪೀಕರ್​​​ ರಮೇಶ್​​ ಕುಮಾರ್​​ ಭೇಟಿಯಾದ ಶರತ್​​ ಬಚ್ಚೇಗೌಡ; ಕುತೂಹಲ ಮೂಡಿಸಿದ ಪಕ್ಷೇತರ ಶಾಸಕನ ನಡೆ
  • Share this:
ಬೆಂಗಳೂರು(ಡಿ.12): ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​​ ಎದುರು ಗೆದ್ದ ಬಳಿಕ ಪಕ್ಷೇತರ ಶಾಸಕ ಶರತ್​​ ಬಚ್ಷೇಗೌಡ ಮಾಜಿ ಸ್ಪೀಕರ್​​ ರಮೇಶ್​ ಕುಮಾರ್​ರನ್ನು ಭೇಟಿಯಾಗಿದ್ದರು. ಕೋಲಾರದ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿರುವ ರಮೇಶ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದ ಶರತ್​​ ಬಚ್ಷೇಗೌಡ ಮಹತ್ವದ ಮಾತುಕತೆ ನಡೆಸಿದರು. ಶರತ್​ ಬಚ್ಚೇಗೌಡ ಮತ್ತು ಕಾಂಗ್ರೆಸ್​ನ ಹಿರಿಯ ನಾಯಕ ರಮೇಶ್ ಕುಮಾರ್​ ಭೇಟಿ ರಾಜಕೀಯ ವಲಯದಲ್ಲೀಗ ಭಾರೀ ಕುತೂಹಲ ಮೂಡಿಸಿದೆ.

ಸಂಸದ ಬಚ್ಚೇಗೌಡ ಬೆಂಬಲಿಗರೊಂದಿಗೆ ಪಕ್ಷೇತರ ಶಾಸಕ ಶರತ್​​ ಬಚ್ಷೇಗೌಡ ಮಾಜಿ ಸ್ಪೀಕರ್​​ ರಮೇಶ್​​ ಕುಮಾರ್​​ರನ್ನು ಭೇಟಿ ಮಾಡಿದರು. ರಮೇಶ್ ಕುಮಾರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಶರತ್, ತನ್ನ ರಾಜಕೀಯ ಭವಿಷ್ಯದ ಬಗ್ಗೆ  ಚರ್ಚಿಸಿದರು. ಬಿಜೆಪಿ ಬಾಗಲು ಬಂದ್​​​ ಹಿನ್ನೆಲೆಯಲ್ಲಿ ಶರತ್​ ಬಚ್ಚೇಗೌಡ ರಮೇಶ್​​​ ಕುಮಾರ್​​​ ಜತೆ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೊಸಕೋಟೆ ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಅವರನ್ನು ಗೆಲ್ಲಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ್ದರು. ಎಂಟಿಬಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದಕ್ಕೆ ಅಸಮಾಧಾನಗೊಂಡಿದ್ದ ಶರತ್ ಬಚ್ಚೇಗೌಡ ಅವರ ಮನವೊಲಿಸಲು ಕೊನೆಯವರೆಗೂ ವಿಫಲಯತ್ನ ನಡೆಸಿದರು. ಆದರೆ, ಶರತ್ ಬಚ್ಚೇಗೌಡ ಬಂಡಾಯ ಇದ್ದು ಸ್ವತಂತ್ರವಾಗಿ ಕಣಕ್ಕಿಳಿದು ಈಗ ಗೆಲುವಿನ ನಗೆ ಬೀರಿದ್ದಾರೆ.

ಕೆಲ ವರ್ಷಗಳಿಂದೀಚೆ ಹೊಸಕೋಟೆ ರಾಜಕಾರಣದಲ್ಲಿ ಎರಡೇ ಹೆಸರು ಪ್ರಮುಖವಾಗಿ ಕೇಳಿ ಬರುವುದು. ಒಂದು ಎಂಟಿಬಿ ನಾಗರಾಜ್ ಕುಟುಂಬ, ಮತ್ತೊಂದು ಬಚ್ಚೇಗೌಡ ಕುಟುಂಬ. ಇಲ್ಲಿ ಪಕ್ಷಕ್ಕಿಂತ ಈ ಎರಡು ಕುಟುಂಬಗಳ ವೈಯಕ್ತಿಕ ವರ್ಚಸ್ಸು ಹೊಸಕೋಟೆ ರಾಜಕಾರಣದಲ್ಲಿ ಮೇಳೈಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಹೊಸಕೋಟೆ ಉಪಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತು.

ಇದನ್ನೂ ಓದಿ: Siddaramaiah Health: ರಾಜಕೀಯ ಮರೆತು ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಸಿಎಂ ಬಿ.ಎಸ್​​ ಯಡಿಯೂರಪ್ಪ

ಎಂಟಿಬಿ ನಾಗರಾಜ್ ಅವರಿಗೆ ಸೋಲಲು ಕೆಲ ಪ್ರಮುಖ ಕಾರಣಗಳನ್ನು ಗುರುತಿಸಬಹುದು. ಹೊಸಕೋಟೆಯಲ್ಲಿ ಒಕ್ಕಲಿಗರು ಮತ್ತು ಕುರುಬರು ಎರಡು ಪ್ರಮುಖ ಸಮುದಾಗಳಾಗಿವೆ. ಎಂಟಿಬಿ ನಾಗರಾಜ್ ಕುರುಬ ಸಮುದಾಯದವರಾದರೆ, ಶರತ್ ಬಚ್ಚೇಗೌಡ ಒಕ್ಕಲಿಗರು. ಎಂಟಿಬಿ ನಾಗರಾಜ್ ಅವರಿಗೆ ಈ ಕ್ಷೇತ್ರದಲ್ಲಿ ತಮ್ಮ ಹಣಬಲ ಮತ್ತು ಜಾತಿ ಬಲ ಎರಡೂ ಆಧಾರವಾಗಿದ್ದವು. ಹಾಗೆಯೇ ಕ್ಷೇತ್ರದ ಹಾಲಿ ಶಾಸಕ(ಅನರ್ಹ) ಎಂಬ ಬಲವೂ ಅವರಿಗೆ ಇತ್ತು.

ಇನ್ನೊಂದೆಡೆ, ಶರತ್ ಬಚ್ಚೇಗೌಡರ ಪಾಲಿಗೆ ಒಕ್ಕಲಿಗ ಮತ ಹಾಗೂ ಅನುಕಂಪದ ಬಲ ಇತ್ತು. ಇವರಿಬ್ಬರ ಸಮಬಲ ಪೈಪೋಟಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಡೆಗಳು ನಿರ್ಣಾಯಕವಾದವು. ಜೆಡಿಎಸ್ ಪಕ್ಷವು ಹೊಸಕೋಟೆಯಲ್ಲಿ ಅಭ್ಯರ್ಥಿ ಹಾಕದೇ, ಶರತ್ ಬಚ್ಚೇಗೌಡರಿಗೆ ಬೆಂಬಲ ಸೂಚಿಸಿತು. ಜೆಡಿಎಸ್ ಅಭ್ಯರ್ಥಿ ಮೂಲಕ ಒಕ್ಕಲಿಗ ಮತಗಳು ವಿಭಜನೆ ಆಗಬಾರದು ಎಂಬುದು ಕುಮಾರಸ್ವಾಮಿ ಅವರ ತಂತ್ರವಾಗಿತ್ತು.ಇತ್ತ, ಕಾಂಗ್ರೆಸ್ ಪಕ್ಷವು ಶಾಸಕ ಭೈರತಿ ಸುರೇಶ್ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿತು. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಕ್ಷೇತ್ರ ಗೆಲ್ಲುವ ಇಚ್ಛೆಗಿಂತ ಎಂಟಿಬಿಯನ್ನು ಸೋಲಿಸುವುದು ಗುರಿಯಾಗಿದ್ದಂತಿತ್ತು. ಎಂಟಿಬಿಯಂತೆ ಭೈರತಿ ಅವರೂ ಕುರುಬ ಸಮುದಾಯದವರು. ಎಂಟಿಬಿ ನಾಗರಾಜ್ ಅವರಿಗೆ ಹೋಗುವ ಕುರುಬ ಮತಗಳನ್ನು ಪದ್ಮಾವತಿ ಮೂಲಕ ಸೆಳೆದು ಅವರ ಬಲ ಕುಗ್ಗಿಸುವುದು ಕಾಂಗ್ರೆಸ್ ರಣತಂತ್ರವಿದ್ದಂತಿತ್ತು. ಅಭ್ಯರ್ಥಿ ಹಾಕದ ಜೆಡಿಎಸ್ ಮತ್ತು ಕುರುಬ ಅಭ್ಯರ್ಥಿಯನ್ನ ಹಾಕಿದ ಕಾಂಗ್ರೆಸ್ ಪಕ್ಷ ಎರಡಕ್ಕೂ ಕೂಡ ಎಂಟಿಬಿಗೆ ಸೋಲಾಗುವುದೇ ಮುಖ್ಯವಾಗಿತ್ತು. ಅದರಲ್ಲಿ ಯಶಸ್ವಿಯೂ ಆಗಿದ್ಧಾರೆ. ಶರತ್ ಬಚ್ಚೇಗೌಡ ನಿರೀಕ್ಷೆಮೀರಿ ಸುಲಭವಾಗಿ ಗೆದ್ದಿದ್ದಾರೆ. ಭೈರತಿ ಸುರೇಶ್ ಮೂಲಕ ಕುರುಬ ಸಮುದಾಯದ ಮತಗಳು ಹಾಗೂ ಪಕ್ಷದ ನಿಷ್ಠಾವಂತ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷ ಕೂಡ ಎಂಟಿಬಿ ಸೋಲಿಗೆ ಪ್ರಮುಖ ಪಾತ್ರ ವಹಿಸಿತು.

ಇದನ್ನೂ ಓದಿ: ಜ.20ರಿಂದ 30ರವರೆಗೂ ಸರ್ಕಾರದ ಜಂಟಿ ಅಧಿವೇಶನ; ರಾಜ್ಯದ ನೆರೆ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ; ಸಚಿವ ಮಾಧುಸ್ವಾಮಿ

ಈಗಾಗಲೇ ಶರತ್​​ ಬಚ್ಚೇಗೌಡ ಮೇಲೆ ಎಂಟಿಬಿ ನಾಗರಾಜ್​​ ಬಿಜೆಪಿ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಶರತ್​ ಬಚ್ಚೇಗೌಡ ಬಿಜೆಪಿಗೆ ಸೇರಿಸಿಕೊಳ್ಳಬಾರದು ಎಂದು ಒತ್ತಡ ಹೇರಿದ್ದಾರೆ. ಸಿಎಂ ಬಿ.ಎಸ್​ ಯಡಿಯೂರಪ್ಪ ಕೂಡ ಇದಕ್ಕೆ ಸಮ್ಮತಿ ನೀಡಿದ್ದು, ಶರತ್​ ಬಚ್ಚೇಗೌಡಗೆ ಬಿಜೆಪಿ ಬಾಗಿಲು ಬಂದ್​​ ಆಗಿದೆ. ಹೀಗಾಗಿ ಶರತ್​ ಬಚ್ಚೇಗೌಡ ರಮೇಶ್​ ಕುಮಾರ್​​ ಭೇಟಿಯಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
Published by: Ganesh Nachikethu
First published: December 12, 2019, 9:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading