ಎಂಟಿಬಿ ಜೊತೆ ಒಪ್ಪಂದವಾಗಿರಲಿಲ್ಲ; ಮಂಜುನಾಥನ ಮೇಲೆ ಆಣೆ ಮಾಡಲಿ: ಶರತ್ ಬಚ್ಚೇಗೌಡ ಸವಾಲು

ಚುನಾವಣೆ ಬಂದಾಗ ನಾನು ಮಾಡಿರುವ ಕಾರ್ಯಸಾಧನೆಗಳ ಬಗ್ಗೆ ಪ್ರಚಾರ ಮಾಡಬೇಕು. ಆದರೆ, ಎಂಟಿಬಿ ನಾಗರಾಜ್ ಅವರು ನನ್ನ ಮೇಲೆ ಮಾತನಾಡೋದೇ ಆಗಿಹೋಗಿದೆ ಎಂದು ಬಿಜೆಪಿಯೊಳಗೆ ಬಂಡಾಯ ಎದ್ದಿರುವ ಶರತ್ ಬಚ್ಚೇಗೌಡ ಟೀಕಿಸಿದ್ದಾರೆ.

news18
Updated:November 12, 2019, 11:25 AM IST
ಎಂಟಿಬಿ ಜೊತೆ ಒಪ್ಪಂದವಾಗಿರಲಿಲ್ಲ; ಮಂಜುನಾಥನ ಮೇಲೆ ಆಣೆ ಮಾಡಲಿ: ಶರತ್ ಬಚ್ಚೇಗೌಡ ಸವಾಲು
ಶರತ್ ಬಚ್ಚೇಗೌಡ
  • News18
  • Last Updated: November 12, 2019, 11:25 AM IST
  • Share this:
ಹೊಸಕೋಟೆ(ನ. 12): ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತು ಬಚ್ಚೇಗೌಡ ಕುಟುಂಬ ಮಧ್ಯೆ ವಾದ ಪ್ರತಿವಾದ ವಿವಾದ ಮುಂದುವರಿಯುತ್ತಿವೆ. ತಾನು ರಾಜೀನಾಮೆ ನೀಡುವ ಮುನ್ನ ಯಡಿಯೂರಪ್ಪರ ಸಮ್ಮುಖದಲ್ಲಿ ಬಚ್ಚೇಗೌಡರ ಒಪ್ಪಿಗೆ ಪಡೆದಿದ್ದೆ ಎಂದು ಎಂಟಿಬಿ ನಾಗರಾಜ್ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ತಳ್ಳಿಹಾಕಿದ್ದರು. ಈಗ ತಂದೆಯ ಮಾತನ್ನು ಶರತ್ ಬಚ್ಚೇಗೌಡ ಪುನರುಚ್ಚರಿಸಿದ್ದಾರೆ. ಎಂಟಿಬಿ ನಾಗರಾಜ್ ಜೊತೆ ಯಾವ ಒಪ್ಪಂದವೂ ಆಗಿರಲಿಲ್ಲ ಎಂದು ಶರತ್ ಸ್ಪಷ್ಟಪಡಿಸಿದ್ದಾರೆ.

ಎಂಟಿಬಿ ನಾಗರಾಜ್ ಅವರು ಸುಮ್ಮನೆ ಅಪಪ್ರಚಾರ ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನಾನು ಅವರಿಗೆ ಹೊಸಕೋಟೆ ತಾಲೂಕನ್ನು ಬಿಟ್ಟುಕೊಡುತ್ತೇವೆ ಎಂದು ಹೇಳಿದ್ದೇ ಆಗಿದ್ದರೆ ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಮಾಡಲಿ. ಮಂಜುನಾಥನ ಸನ್ನಿಧಿಗೆ ನಾನು ಮತ್ತು ನನ್ನ ತಂದೆ ಇಬ್ಬರೂ ಬರುತ್ತೇವೆ. ಎಂಟಿಬಿಯೂ ಅಲ್ಲಿಗೆ ಬರಲಿ. ಅಲ್ಲಿಯೇ ಆಣೆ ಮಾಡೋಣ ಎಂದು ಶರತ್ ಬಚ್ಚೇಗೌಡ ಸವಾಲು ಹಾಕಿದ್ದಾರೆ.

ಚುನಾವಣೆ ಬಂದಾಗ ನಾನು ಮಾಡಿರುವ ಕಾರ್ಯಸಾಧನೆಗಳ ಬಗ್ಗೆ ಪ್ರಚಾರ ಮಾಡಬೇಕು. ಆದರೆ, ಎಂಟಿಬಿ ನಾಗರಾಜ್ ಅವರು ನನ್ನ ಮೇಲೆ ಮಾತನಾಡೋದೇ ಆಗಿಹೋಗಿದೆ ಎಂದು ಬಿಜೆಪಿಯೊಳಗೆ ಬಂಡಾಯ ಎದ್ದಿರುವ ಶರತ್ ಬಚ್ಚೇಗೌಡ ಟೀಕಿಸಿದ್ದಾರೆ.

ಇದನ್ನೂ ಓದಿ: ಒಡಂಬಡಿಕೆಗೆ ಮುಂದಾಗದ ಬಳ್ಳಾರಿ ಖಾಸಗಿ ಆಸ್ಪತ್ರೆಗಳು; ಗಣಿನಾಡಲ್ಲಿ ಇಎಸ್​ಐ ಸೂಪರ್​​ ಸ್ಪೆಷಾಲಿಟಿ ಆಸ್ಪತ್ರೆಗೆ ಕಾರ್ಮಿಕರ ಕೂಗು

ಕಾಂಗ್ರೆಸ್ ಜೊತೆ ತಾನು ಒಳ ಒಪ್ಪಂದ ಮಾಡಿಕೊಂಡಿದ್ದೇನೆಂಬ ಆರೋಪದ ಬಗ್ಗೆ ಮಾತನಾಡಿದ ಶರತ್, ಕಾಂಗ್ರೆಸ್ ಜೊತೆ ಯಾವುದೇ ಒಳ ಒಪ್ಪಂದವಾಗಿಲ್ಲ. ತನಗೆ ಯಾವ ಬೋರ್ಡ್ ಛೇರ್ಮನ್ ಬೇಡ, ತಾಲೂಕಿನ ಸೇವೆ ಮಾಡಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಅವರು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಉಪಚುನಾವಣೆಯಲ್ಲಿ ಅವರಿಗೆ ಅಥವಾ ಅವರು ಸೂಚಿಸಿದವರಿಗೆ ಬಿಜೆಪಿ ಟಿಕೆಟ್ ಕೊಡುವ ನಿರೀಕ್ಷೆ ಇದೆ. ಆದರೆ, ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಲು ಬಚ್ಚೇಗೌಡ ಕುಟುಂಬದಿಂದ ತೀವ್ರ ವಿರೋಧವಿದೆ. ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಮತ್ತು ಬಚ್ಚೇಗೌಡ ಕುಟುಂಬ ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದಾರೆ.

(ವರದಿ: ನವೀನ್ ಗೌಡ)ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ