ಯಾರಾದ್ರೂ ಉಂಗುರ, ದುಡ್ಡು ಕೊಟ್ಟರೆ ತಗೊಳ್ಳಿ, ಅದು ಮೋಸದ ಸಂಪಾದನೆ; ಪ್ರಚಾರ ವೇಳೆ ಎಂಟಿಬಿಗೆ ಮಾತಲ್ಲೇ ತಿವಿದ ಶರತ್ ಬಚ್ಚೇಗೌಡ

ಇಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೊಸಕೋಟೆಯ ನಂದಗುಡಿ ಹೋಬಳಿಯ ಇಂದಿರಾನಗರ ಬಡಾವಣೆಯಲ್ಲಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಮತದಾರರಲ್ಲಿ ಮನವಿ ಮಾಡಿರುವ ಅವರು, ಯಾವುದಾದರೂ ಪಕ್ಷದವರು ಬಂದು ದುಡ್ಡು ಕೊಟ್ಟರೆ ತೆಗೆದುಕೊಳ್ಳಿ. ಆದರೆ, ಯೋಚಿಸಿ ಮತ ಹಾಕಿ ಎಂದಿದ್ದಾರೆ.

news18-kannada
Updated:November 25, 2019, 3:48 PM IST
ಯಾರಾದ್ರೂ ಉಂಗುರ, ದುಡ್ಡು ಕೊಟ್ಟರೆ ತಗೊಳ್ಳಿ, ಅದು ಮೋಸದ ಸಂಪಾದನೆ; ಪ್ರಚಾರ ವೇಳೆ ಎಂಟಿಬಿಗೆ ಮಾತಲ್ಲೇ ತಿವಿದ ಶರತ್ ಬಚ್ಚೇಗೌಡ
ಶರತ್ ಬಚ್ಚೇಗೌಡ- ಎಂಟಿಬಿ ನಾಗರಾಜ್
  • Share this:
ಹೊಸಕೋಟೆ (ನ. 25): ಹೊಸಕೋಟೆಯ ಚುನಾವಣಾ ಅಖಾಡ ರಂಗೇರುತ್ತಿದೆ. ಬಿಜೆಪಿಯಿಂದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸ್ಪರ್ಧೇಗಿಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಜೆಡಿಎಸ್​ ಬೆಂಬಲ ಘೋಷಿಸಿದೆ. ಕಾಂಗ್ರೆಸ್​ನಿಂದ ಪದ್ಮಾವತಿ ಸುರೇಶ್ ಕಣದಲ್ಲಿದ್ದಾರೆ. ಈಗಾಗಲೇ ಮೂವರೂ ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಮೂವರಿಗೂ ಇದು ಪ್ರತಿಷ್ಠೆಯ ಸಂಗತಿಯಾಗಿರುವುದರಿಂದ ಮತದಾರರಿಗೆ ನಾನಾ ರೀತಿಯಲ್ಲಿ ಆಮಿಷವೊಡ್ಡಲು ಅಭ್ಯರ್ಥಿಗಳು ಪ್ರಯತ್ನ ನಡೆಸಿದ್ದಾರೆ.

ಇಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೊಸಕೋಟೆಯ ನಂದಗುಡಿ ಹೋಬಳಿಯ ಇಂದಿರಾನಗರ ಬಡಾವಣೆಯಲ್ಲಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಈ ವೇಳೆ ಮತದಾರರಲ್ಲಿ ಮನವಿ ಮಾಡಿರುವ ಅವರು, ಯಾವುದಾದರೂ ಪಕ್ಷದವರು ಬಂದು ದುಡ್ಡು ಕೊಟ್ಟರೆ ತೆಗೆದುಕೊಳ್ಳಿ. ಆದರೆ, ನಿಮ್ಮ ಮತವನ್ನು ಮಾತ್ರ ಕುಕ್ಕರ್​ಗೆ ಹಾಕಿ ಎಂದು ಬಹಿರಂಗವಾಗಿ ಕರೆಕೊಟ್ಟಿದ್ದಾರೆ.

ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಇಂದಿರಾನಗರ ಬಡಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಶರತ್ ಬಚ್ಚೇಗೌಡ, ಕುಕ್ಕರ್ ಯಾರದ್ದೇ ಆಗಿರಲಿ ಆದರೆ ವಿಷಲ್ ಮಾತ್ರ ನಮ್ಮದೇ ಆಗಿರಬೇಕು. ಡಿ. 5ಕ್ಕೆ ನಮ್ಮ ಕುಕ್ಕರ್ ಶಬ್ದ ರಾಜ್ಯಾದ್ಯಂತ ಕೇಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲೊಂದು ವಿಚಿತ್ರ ಕೇಸ್; ಒಂದೇ ಹೆಂಡತಿಯನ್ನು 3 ಬಾರಿ ಕೊಂದ ಗಂಡ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದು ಹೇಗೆ?

ಈಗಾಗಲೇ ಹೊಸಕೋಟೆಯಲ್ಲಿ ಗೆಲವು ಸಾಧಿಸಲು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತದಾರರಿಗೆ ಚಿನ್ನದ ಉಂಗುರಗಳನ್ನು ಹಂಚುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಎಂಟಿಬಿಗೆ ತಿರುಗೇಟು ನೀಡಿರುವ ಶರತ್ ಬಚ್ಚೇಗೌಡ, ಯಾರಾದರೂ ಉಂಗುರ ಕೊಟ್ಟರೆ ಅದು ನಕಲಿನೋ ಅಥವಾ ಅಸಲಿಯೋ ಎಂದು ಉಜ್ಜಿ ಚೆಕ್ ಮಾಡಿಕೊಳ್ಳಿ. ನಿಮಗೆ ಅದು ಇಷ್ಟವಾಗದಿದ್ದರೆ ವಾಪಾಸ್ ಮಾಡಿ. ಅವರು ಏನು ಕೊಟ್ಟರೂ ತೆಗೆದುಕೊಳ್ಳಿ. ಅವರೇನಾದರೂ ಹಣ ಕೊಟ್ಟರೆ ತೆಗೆದುಕೊಳ್ಳಿ. ಯಾಕಂದ್ರೆ ಅದು ಮೋಸದ ಹಣ. ಆದರೆ, ಓಟ್ ಮಾತ್ರ ಕುಕ್ಕರ್ ಗುರುತಿಗೆ ಹಾಕಿ ಎಂದು ಮತಯಾಚನೆ ಮಾಡಿದ್ದಾರೆ.

(ವರದಿ: ರಘುರಾಜ್)
First published:November 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ