ಜೆಡಿಎಸ್ ರಾಜ್ಯ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶರಣಗೌಡ ಕಂದಕೂರು ರಾಜೀನಾಮೆ

ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಒಂದು ಸ್ಥಾನ‌ ಗೆಲ್ಲದ ಹಿನ್ನೆಲೆಯಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು,  ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೆಗೌಡರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

G Hareeshkumar | news18-kannada
Updated:December 11, 2019, 9:23 PM IST
ಜೆಡಿಎಸ್ ರಾಜ್ಯ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶರಣಗೌಡ ಕಂದಕೂರು ರಾಜೀನಾಮೆ
ಶರಣಗೌಡ ಕಂದಕೂರ
  • Share this:
ಯಾದಗಿರಿ(ಡಿ.11): ವಿಧಾನಸಭೆ ಉಪಚುನಾವಣೆ ಫಲಿತಾಂಶದ ನಂತರ ಕೈ ಪಾಳಯದ ನಂತರ ಜೆಡಿಎಸ್ ನಲ್ಲಿ ಮುಂದುವರೆದ ರಾಜೀನಾಮೆ ಪರ್ವ ಮುಂದುವರೆದಿದ್ದು ಜೆಡಿಎಸ್ ರಾಜ್ಯ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶರಣಗೌಡ ಕಂದಕೂರು ರಾಜೀನಾಮೆ ನೀಡಿದ್ದಾರೆ.

ಶರಣಗೌಡ‌ ಕಂದಕೂರ ಅವರು ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಒಂದು ಸ್ಥಾನ‌ ಗೆಲ್ಲದ ಹಿನ್ನೆಲೆಯಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೆಗೌಡರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

resignation latter
ರಾಜೀನಾಮೆ ಪತ್ರ


ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ಇಂಗಿತವನ್ನು ಶರಣಗೌಡ‌ ಕಂದಕೂರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಿಎಂ ಕುಮಾರಸ್ವಾಮಿ ಸರಕಾರದ ಅವಧಿಯಲ್ಲಿಯೇ  ಬಿಎಸ್ ವೈ ಅವರು ಮೈತ್ರಿ ಸರಕಾರ  ಆಪರೇಷನ್ ಕಮಲದ ಮೂಲಕ ಕೆಡವಿ ಬಿಜೆಪಿ ಸರಕಾರ ರಚನೆ ಮಾಡಲು ಆಪರೇಷನ್ ಕಮಲ ಮಾಡಿ ಕಮಲದಿಂದ ಕೆಸರಿನ ಖೆಡ್ಡಾಕ್ಕೆ ಬಿದ್ದಿದ್ದರು. ಅಂದು ಬಿಎಸ್ ವೈ ಅವರ ಸಿಎಂ ಆಗುವ ಕನಸು ಗುರುಮಠಲ್ ಶಾಸಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ಕಂದಕೂರು ನುಚ್ಚುನೂರು ಮಾಡಿದರು. ಆಪರೇಷನ್ ಕಮಲದ ಅಡಿಯೋ ಬಿಡುಗಡೆ ಮಾಡಿ ಕುಮಾರಸ್ವಾಮಿ ಸರಕಾರಕ್ಕೆ ತಾತ್ಕಾಲಿಕವಾಗಿ ಸಂಜೀವಿನಿಯಾಗಿದರು.

ಈ ಘಟನೆ ರಾಜಕೀಯ ಕೋಲಾಹಲ ಎಬ್ಬಿಸಿ ಅಧಿವೇಶನದಲ್ಲಿ ಗಲಾಟೆಗೆ ಕಾರಣವಾಗಿ ನಂತರ ಪ್ರಕರಣ ಕೂಡ ದಾಖಲಾಗಿತ್ತು. ಬಿಎಸ್ ವೈ ಅವರು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರನ್ನು ಆಪರೇಷನ್ ಕಮಲ ಮಾಡಲು ಶಾಸಕ ಕಂದಕೂರು ಪುತ್ರ ಶರಣಗೌಡ ಕಂದಕೂರು ಮೂಲಕ ಪ್ರಯತ್ನ ಮಾಡಿದರು
,
First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ