ಮಂಗಳೂರು: ವಿಶ್ವ ಹಿಂದೂ ಪರಿಷತ್ (Vishwa Hindu Parishad) ಮುಖಂಡ ಶರಣ್ ಪಂಪ್ವೆಲ್ (Sharan Pumpwell ) ಮತ್ತೆ ವಿವಾದಾತ್ಮಕ ಹೇಳಿಕೆ (Controversial Statement) ನೀಡಿ ಸುದ್ದಿಯಾಗಿದ್ದಾರೆ. ರಾಜ್ಯವನ್ನು ತಲ್ಲಣಗೊಳಿಸಿದ್ದ ಮಂಗಳೂರು ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆಗೆ ಪ್ರತೀಕವಾಗಿ ಸುರತ್ಕಲ್ನಲ್ಲಿ ಫಾಜಿಲ್ ಹತ್ಯೆ ಮಾಡಲಾಗಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಜಿಹಾದಿಗಳಿಂದ ಕೇವಲ ಪ್ರವೀಣ್ ನೆಟ್ಟಾರು ಮಾತ್ರವಲ್ಲ, ಇನ್ನೂ ಕೆಲವು ಹಿಂದೂ ಕಾರ್ಯಕರ್ತರ ಹೆಸರಿತ್ತು ಎಂದು ಎನ್ಐಎ ಹೇಳಿದೆ. ಆದರೆ ಆ ಜಿಹಾದಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಮುಂದೆ ಒಬ್ಬ ಹಿಂದೂ ಕಾರ್ಯಕರ್ತನ ಹತ್ಯೆಯಾದರೆ ಮೂವರನ್ನು ಪ್ರತಿಕಾರವಾಗಿ ಹತ್ಯೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ವಿವಾದ ಸೃಷ್ಟಿಸಿದ್ದಾರೆ.
ಕರಾವಳಿಯಲ್ಲಿ ನಡೆದಿದ್ದ ಸರಣಿ ಹತ್ಯೆಗಳು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ತಿಂಗಳ ಅವಧಿಯಲ್ಲಿ ಮೂರು ಹತ್ಯೆಗಳು ನಡೆದಿದ್ದವು. ಆದರೆ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ವಾರದೊಳಗೆ ಸುರತ್ಕಲ್ನಲ್ಲಿ ಮೊಹಮ್ಮದ್ ಫಾಜಿಲ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಜಿಹಾದ್ ವಿರೋಧಿಸುವ ಬರದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕವಾಗಿಯೇ ಫಾಜಿಲ್ ಹತ್ಯೆ ಮಾಡಲಾಗಿದೆ ಎಂದು ಪಂಪ್ವೆಲ್ ಸಾರ್ವಜನಿಕವಾಗಿ ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.
ಒಂದಕ್ಕೆ ಮೂರು ಹತ್ಯೆ
ಪಿಎಫ್ಐ ಸಂಘಟನೆ ನಿಷೇಧವಾಗಿದ್ದರೂ ಅವರ ಕಾರ್ಯಕರ್ತರೂ ಇನ್ನೂ ಜೀವಂತ ಇದ್ದಾರೆ. ಇನ್ನಷ್ಟು ನಮ್ಮ ಕಾರ್ಯಕರ್ತರ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ.
ಆದರೆ ನಾನು ಆ ಜಿಹಾದಿಗಳಿಗೆ ಎಚ್ಚರಿಕೆ ಕೊಡುತ್ತದ್ದೇನೆ, ಇನ್ನು ಮುಂದೆ ನಮ್ಮ ಕಾರ್ಯಕರ್ತರ ಹತ್ಯೆಯಾದ್ರೆ ಒಂದಕ್ಕೆ ಒಂದಲ್ಲ, ಎರಡಲ್ಲ, ಮೂರಾಗುತ್ತೆ. ನಮ್ಮ ಕಾರ್ಯಕರ್ತನ ಮೇಲೆ ನೀವು ಹಲ್ಲೆ ಮಾಡಿದರೆ ನಾವು ನಿಮ್ಮ ಹತ್ತು ಜನರನ್ನಆಸ್ಪತ್ರೆಗೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ.
ಉಳ್ಳಾಲದಲ್ಲಿ ಹಿಂದೂ ಶಾಸಕ ಆಯ್ಕೆಯಾಗಬೇಕು
ಉಳ್ಳಾಲದಲ್ಲಿ ಚುನಾವಣೆಗೋಸ್ಕರ ನಾವು ಈ ಕಾರ್ಯಕ್ರಮ ಮಾಡುತ್ತಿಲ್ಲ. ಆದರೆ ಉಳ್ಳಾಲದಲ್ಲಿ ಹಿಂದೂ ಶಾಸಕ ಆಯ್ಕೆಯಾಗಬೇಕು ಎನ್ನುವ ಸಂಕಲ್ಪ ನಮ್ಮದು. ಅದಕ್ಕಾಗಿ ನಾವು ಉಳ್ಳಾಲದಲ್ಲಿ ಹಿಂದೂ ಶಾಸಕನ ಆಯ್ಕೆಗಾಗಿ ಅಭಿಯಾನ ಮಾಡ್ತಾ ಇದೀವಿ. ಈ ಹಿಂದೂ ಶಾಸಕ ಬಿಜೆಪಿ ಮಾತ್ರ ಅಲ್ಲ, ಕಾಂಗ್ರೆಸ್ನಲ್ಲಾದ್ರೂ ನಮ್ಮ ಬೆಂಬಲ ಇದೆ.
ಉಳ್ಳಾಲದ ಹಿಂದೂ ಕಾಂಗ್ರೆಸ್ಸಿಗರು ಎಷ್ಟು ದಿನ ಮುಸ್ಲಿಂ ಶಾಸಕನ ಕಾಲ ಕೆಳಗೆ ಇರುತ್ತೀರಿ. ನಿಮಗೆ ತಾಕತ್ತಿದ್ದರೆ ಒಬ್ಬ ಹಿಂದೂವನ್ನ ಶಾಸಕನಾಗಿ ಗೆಲ್ಲಿಸಿ ಎಂದು ಆಕ್ರೋಶವಾಗಿ ನುಡಿದಿದ್ದಾರೆ.
ಸಿದ್ದರಾಮಯ್ಯಗೆ ತಿರುಗೇಟು
ಕರಾವಳಿಯನ್ನು ಬಿಜೆಪಿ ಹಿಂದುತ್ವದ ಪ್ಯಾಕ್ಟರಿ ಮಾಡಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ನಿಜವನ್ಬೇ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ ಆಗುತ್ತಿದೆ ಅಂತ ಸತ್ಯ ಹೇಳಿದ್ದಾರೆ. ದ.ಕ ಜಿಲ್ಲೆ ಹಿಂದುತ್ವದ ನೆಲ, ಈ ಮಣ್ಣಲ್ಲಿ ಹಿಂದುತ್ವ ಇದೆ. ಅದಕ್ಕೆ ನಮಗೆ ಹೆಮ್ಮೆ ಇದೆ, ಈ ಹಿಂದುತ್ವದ ಫ್ಯಾಕ್ಟರಿ ಯಲ್ಲಿ ನಾವು ದೇಶಕ್ಕೋಸ್ಕರ ಕೆಲಸ ಮಾಡ್ತಾ ಇದೀವಿ. ಸಿದ್ದರಾಮಯ್ಯನವರೇ, ಕೇವಲ ದ.ಕ ಜಿಲ್ಲೆ ಅಲ್ಲ, ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ. ಶೌರ್ಯ ಯಾತ್ರೆ ಮೂಲಕ ತುಮಕೂರಿನಲ್ಲಿ ಸಂಚಲನ ಮೂಡಿಸಿದ್ದೇವೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಹಿಂದೂಗಳ ಪರಾಕ್ರಮ
ಬಿಬಿಸಿ ಗುಜರಾತ್ ಹಲಬೆ ಕುರಿತು ಗುಜರಾತ್ ಹತ್ಯಾಕಾಂಡ ಎಂದು ಕಿರುಚಿತ್ರ ಬಿಡುಗಡೆ ಮಾಡಿದೆ. ಆದರೆ ಇದನ್ನು ಪಂಪ್ವೆಲ್ ಹತ್ಯಾಕಾಂಡವಲ್ಲ ಅದು ಹಿಂದೂಗಳು ಪರಾಕ್ರಮದ ಪ್ರತೀಕ. ಗುಜರಾತ್ನಲ್ಲಿ 59 ಕರಸೇವಕರ ಹತ್ಯೆಗೆ ಪ್ರತಿಕಾರವಾಗಿ ಎರಡು ಸಾವಿರ ಜನರ ಹತ್ಯೆ ಮಾಡಿದ್ದೇವೆ. ಹಿಂದೂಗಳು ನಪುಂಸಪಕರಲ್ಲ, ಹತ್ಯಾಕಾಂಡ ಹಿಂದೂಗಳ ಪರಾಕ್ರಮದ ಪ್ರತೀಕ ಎಂದು ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
59 ಕರಸೇವಕರ ಹತ್ಯೆ 2000 ಹತ್ಯೆ
ಹಿಂದು ಸಮಾಜ ಯಾವತ್ತೂ ನಪುಂಸಕ ಸಮಾಜ ಅಲ್ಲ. ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದೇವೆ. ಅಯೋಧ್ಯೆಯ ರಾಮ ಮಂದಿರಕೋಸ್ಕರ 59 ಕರ ಸೇವಕರು ಪ್ರಾಣತೆತ್ತಿದ್ದರು, ಇದಕ್ಕೆ ಪ್ರತೀಕವಾಗಿ 2000 ಹತ್ಯೆ ಮಾಡಿಲಾಗಿತ್ತು. ಇದು ಹಿಂದುಗಳ ಪರಾಕ್ರಮವನ್ನು ತೋರಿಸಿತ್ತು. ಹಿಂದುಗಳ ನಪುಂಶಕರಲ್ಲ ಎನ್ನುವುದನ್ನು ತೋರಿಸುತ್ತದೆ ಅಯೋದ್ಯೆಯ ಮಂದಿರಕ್ಕೋಸ್ಕರ 59 ಜನ ಸೈನಿಕರು ಕರಸೇವೆಗೋಸ್ಕರ ರೈಲಿನಲ್ಲಿ ಬರಬೇಕಾದರೆ, ರೈಲನ್ನು ಸುಡುವ ಮೂಲಕ 59 ಕರ ಸೇವಕರನ್ನು ಹತ್ಯೆ ಮಾಡಲಾಗಿತ್ತು. ಆದೆ ಬಳಿಕ ಯಾವ ಹಿಂದೂ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ರಸ್ತೆಗೆ ಇಳಿದಿದ್ದರು, ಮನೆಗೆ ನುಗ್ಗಿದ್ರು. 59 ಕರ ಸೇವಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಾಯಿತು. ಲೆಕ್ಕ ಸಿಕ್ಕಿರುವುದು 2 ಸಾವಿರ ಮಾತ್ರ ಎಂದು ಹೇಳಿದ್ದಾರೆ.
ಶರಣ್ ಪಂಪ್ವೆಲ್ ಬಂಧಿಸಲು ಆಗ್ರಹ
ನೆಟ್ಟಾರು ಹತ್ಯೆಗೆ ಪ್ರತೀಕವಾಗಿ ಸುರತ್ಕಲ್ನಲ್ಲಿ ಫಾಜಿಲ್ನನ್ನು ಕೊಲೆ ಮಾಡಿ ಪ್ರತಿಕಾರ ತೀರಿಸಿಕೊಂಡರು ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್ ಮುಖಂಡನನ್ನು ತಕ್ಷಣವೇ ಬಂಧಿಸಬೇಕೆಂದು ಫಾಜಿಲ್ ತಂದೆ ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರವೀಣ್ ನೆಟ್ಟಾರು ಪ್ರಕರಣವನ್ನು ಎನ್ಐಎಗೆ ಒಪ್ಪಿಸಲಾಗಿದೆ. ಆದರೆ ಫಾಜಿಲ್ ಹತ್ಯೆ ಪ್ರಕರಣವನ್ನು ಎನ್ಐಗೆ ವಹಿಸಿಲ್ಲ. ಫಾಜಿಲ್ ಪ್ರಕರಣದಲ್ಲಿ ನೇರವಾಗಿ ಭಾಗಿಯಾದವರನ್ನು ಮಾತ್ರೆ ಬಂಧಿಸಲಾಗಿದೆ, ಷಡ್ಯಂತ್ರ ರೂಪಿಸಿದವರ ಬಂಧಿಸಿಲ್ಲ ಎಂದು ಫಾಜಿಲ್ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ