Tumakuru: ಆತ್ಮಹತ್ಯೆಗೆ ಶರಣಾದ ಶಂಕರಣ್ಣನ ಪತ್ನಿ ಮೇಘನಾ ಗರ್ಭಿಣಿ

ಒಂದು ವರ್ಷದ ಹಿಂದೆ ಮೇಘನಾ ಜೊತೆ ಶಂಕರಪ್ಪ ಮದುವೆ ಆಗಿದ್ದರು. ಕಳೆದ ಮೂರು ದಿನದಿಂದ ಗಂಡ ಹೆಂಡತಿ ಜೊತೆ ಜಗಳ ನಡೆಯುತಿತ್ತು.  ಕೌಟುಂಬಿಕ ಕಲಹ ಹಿನ್ನೆಲೆ ಶಂಕರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಶಂಕರಣ್ಣ ಮತ್ತು ಮೇಘನಾ

ಶಂಕರಣ್ಣ ಮತ್ತು ಮೇಘನಾ

  • Share this:
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದ ನಿವಾಸಿ ಶಂಕರಣ್ಣ ಅಲಿಯಾಸ್ ಶಂಕರಪ್ಪ (Shankaranna)  ಮಂಗಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದರು. ಆರು ತಿಂಗಳ ಹಿಂದೆ ಅಂದ್ರೆ 2021 ಅಕ್ಟೋಬರ್ 21ರಂದು 45 ವರ್ಷದ ಶಂಕರಣ್ಣ 25 ವರ್ಷದ ಯುವತಿ ಮೇಘನಾಳನ್ನು ಮದುವೆ(Marriage)ಯಾಗಿದ್ದರು. ವಯಸ್ಸಿನ ಅಂತರ ಹೆಚ್ಚಿರುವ ಹಿನ್ನೆಲೆ ಇಬ್ಬರ ಮದುವೆ ಫೋಟೋಗಳು (Marriage Photos) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದ್ದವು. ಆದರೆ ಕೌಟುಂಬಿಕ ಕಲಹ ಹಿನ್ನೆಲೆ ಶಂಕರಣ್ಣ ತೋಟದಲ್ಲಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಶಂಕರಣ್ಣನ ಪತ್ನಿ ಮೇಘನಾ ನಾಲ್ಕು ತಿಂಗಳ ಗರ್ಭಿಣಿ (Pregnant) ಎಂದು ಪಬ್ಲಿಕ್ ಟಿವಿ ಡಿಜಿಟಲ್ ವರದಿ ಮಾಡಿದೆ.

ಒಂದು ವರ್ಷದ ಹಿಂದೆ ಮೇಘನಾ ಜೊತೆ ಶಂಕರಪ್ಪ ಮದುವೆ ಆಗಿದ್ದರು. ಕಳೆದ ಮೂರು ದಿನದಿಂದ ಗಂಡ ಹೆಂಡತಿ ಜೊತೆ ಜಗಳ ನಡೆಯುತಿತ್ತು.  ಕೌಟುಂಬಿಕ ಕಲಹ ಹಿನ್ನೆಲೆ ಶಂಕರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪತ್ನಿ ಮೇಘನಾ ಜೊತೆ ಜಗಳ ಮಾಡಿಕೊಂಡು ಸೋಮವಾರ ಸಂಜೆಯೇ ಶಂಕರಪ್ಪ ಮನೆ ತೊರೆದಿದ್ದರು.

ಸೊಸೆ ಮೇಲೆ ಶಂಕರಣ್ಣನ ತಾಯಿ ಆರೋಪ

ಮಗನ ಸಾವಿನ ಕುರಿತು ಮಾತನಾಡಿರುವ ರಂಗಮ್ಮ, ಸೊಸೆ ಮೇಘನಾ ಗಂಡನಿಗೆ ಸದಾ ಕಿರುಕುಳ ನೀಡುತ್ತಿದ್ದಳು. ಗ್ರಾಮದಲ್ಲಿರುವ ಮೂರು ಎಕರೆ ಜಮೀನು ಮಾರಾಟ ಮಾಡಿ ಬೆಂಗಳೂರಿಗೆ ಹೋಗೋಣ ಎಂದು ಹೇಳುತ್ತಿದ್ದಳು. ಸೊಸೆಯ ಕಿರಿಕಿರಿಯಿಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಣ್ಣೀರು ಹಾಕುತ್ತಾ ಆರೋಪಿಸಿದ್ದಾರೆ.

ಇದನ್ನೂ ಓದಿ:  Vinaya Samarasya Yojana: ಅಸ್ಪೃಶ್ಯತೆ ನಿರ್ಮೂಲನೆ ಯೋಜನೆಗೆ ದೇಗುಲ ಪ್ರವೇಶಿಸಿದ್ದ ದಲಿತ ಮಗುವಿನ ಹೆಸರು

ಆರೋಪಗಳೆಲ್ಲ ಸುಳ್ಳು ಎಂದ ಮೇಘನಾ

ಇನ್ನೂ ಪತಿಯ ಸಾವಿನ ಬಗ್ಗೆ ಮೇಘನಾ ಮಾಧ್ಯಮಗಳ ಜೊತೆ ಮಾತನಾಡಿ ಅತ್ತೆ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ನನ್ನ ಪತಿ ಮತ್ತು ಅತ್ತೆಗೂ ಸದಾ ಜಗಳ ನಡೆಯುತ್ತಿತ್ತು. ನಾನು ಬೆಂಗಳೂರಿಗೆ ಹೋಗುವ ಕುರಿತು ಸಹ ಮಾತನಾಡಿಲ್ಲ. ಬೆಂಗಳೂರಿಗೆ ಹೋಗುವದಿದ್ರೆ ಅಲ್ಲಿ ಇರೋರನ್ನ ಮದುವೆ ಆಗ್ತಿದೆ. ನಾನು ಇವರನ್ನು ಇಷ್ಟಪಟ್ಟು ಮದುವೆ ಆಗಿದ್ದೆ ಎಂದು ಹೇಳುತ್ತಾರೆ ಮೇಘನಾ.

 ಮದುವೆ ಆಗುವಂತೆ ಕೇಳಿಕೊಂಡಿದ್ದ ಮೇಘನಾ

ಇದಕ್ಕೂ ಮೊದಲು ಮೇಘನಾಗೆ ಮದುವೆ ಆಗಿತ್ತು. ಆದ್ರೆ ಎರಡು ವರ್ಷದಿಂದ ಪತಿ ನಾಪತ್ತೆಯಾಗಿದ್ದನು. ಇನ್ನೂ ಅದೇ ಗ್ರಾಮದ ಶಂಕರಣ್ಣ ವಯಸ್ಸು 40ರ ಗಡಿ ದಾಟಿದ್ದರೂ ಮದುವೆ ಆಗಿರಲಿಲ್ಲ. ಸ್ವತಃ ಮೇಘನಾ ತನ್ನನ್ನು ಮದುವೆ ಆಗುವಂತೆ ಶಂಕರಣ್ಣನ ಬಳಿ ಕೇಳಿಕೊಂಡಿದ್ದರು.

ದೇವಸ್ಥಾನದಲ್ಲಿ ಸರಳವಾಗಿ ಮದುವೆ

ಮೊದಲಿಗೆ ಮದುವೆಗೆ ಶಂಕರಣ್ಣ ಹಿಂದೇಟು ಹಾಕಿದ್ದರು. ನಂತರ ಕುಟುಂಬಸ್ಥರು ಮತ್ತು ಆಪ್ತರ ಒತ್ತಾಯದ ಮೇರೆಗೆ ಶಂಕರಣ್ಣ ಮದುವೆ ಆಗಿದ್ದರು. ಕಳೆದ ವರ್ಷ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ದೇವಾಲಯದಲ್ಲಿ ಸರಳವಾಗಿ ಮದುವೆ ಆಗಿದ್ದರು.

ಒಂದಿಷ್ಟು ಅನುಮಾನ

ಮದುವೆ ಬಳಿಕ ಮೇಘನಾ ಬೆಂಗಳೂರಿನಲ್ಲಿ ವಾಸವಾಗುವ ಕುರಿತು ಹೇಳುತ್ತಿದ್ದರಂತೆ. ಈ ವಿಷಯಕ್ಕೆ ಸಂಬಂಧಿಸಿದ್ದಂತೆ ಅತ್ತೆ-ಸೊಸೆ ಮಧ್ಯೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ಹಿನ್ನೆಲೆ ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಇದನ್ನೂ ಓದಿ:  Bengaluru: ಇನ್ಮುಂದೆ ಮಾಸ್ಕ್ ಹಾಕದಿದ್ರೂ ದಂಡ ವಿಧಿಸಲ್ವಾ? ಕೋವಿಡ್ 19 ನಿಯಮಗಳಿಗೆ ಬೀಳುತ್ತಾ ಬ್ರೇಕ್!?

ಈ ಸಂಬಂಧ ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತದ್ದಾರೆ. ಇನ್ನೂ ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಸಂಬಂಧ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
Published by:Mahmadrafik K
First published: