Shankar Nag ಪುಣ್ಯ ಸ್ಮರಣೆ: ಕರಾಟೆ ಕಿಂಗ್​ರನ್ನು ನೆನೆದ ರಾಜಕಾರಣಿಗಳು

ದಿನನಿತ್ಯದ ರಾಜಕೀಯ ಚಟುವಟಿಕೆಗಳ ಮಧ್ಯೆ ನಮ್ಮ ರಾಜಕೀಯ ನಾಯಕರು ಸಿನಿಮಾ ರಂಗದ ಮಾಣಿಕ್ಯ ಎಂದೇ ಅಭಿಮಾನಿಗಳಿಂದ ಗುರುತಿಸಿಕೊಳ್ಳುವ ಶಂಕರ್‌ನಾಗ್ ಅವರನ್ನು ನೆನೆಪಿಸಿಕೊಂಡಿದ್ದಾರೆ. ಸಚಿವರಾದ ಡಾ.ಕೆ.ಸುಧಾಕರ್, ಬಿ.ವೈ. ವಿಜಯೇಂದ್ರ, ಶಾಸಕ ಜಿ.ಬಿ. ಜ್ಯೋತಿನಾಗೇಶ್ ಸೇರಿದಂತೆ ಹಲವರು ಶಂಕರ್ ನಾಗ್ ಅವರ ಸ್ಮರಿಸಿದ್ದಾರೆ.

ನಟ ಶಂಕರ್ ನಾಗ್​ ಅವರ ಪುಣ್ಯ ಸ್ಮರಣೆ

ನಟ ಶಂಕರ್ ನಾಗ್​ ಅವರ ಪುಣ್ಯ ಸ್ಮರಣೆ

  • Share this:
ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಶಂಕರ್​ ನಾಗ್​ ಮಿಂಚಿನಂತೆ ಬಂದು ಮರೆಯಾದ ಕಲಾವಿದ. ಸ್ಯಾಂಡಲ್​ವುಡ್​ನಿಂದ ಬಂದು ಆಗಲೇ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ನಟ. ಬದುಕಿದ್ದ 36 ವರ್ಷಗಳಲ್ಲೇ ಶಂಕರ್ ನಾಗ್​ ಎಂದೆಂದಿಗೂ ಹಸಿರಾಗಿರುವ ಸಾಧನೆ ಮಾಡಿದ್ದಾರೆ. ನಟನಾಗಿ, ನಿರ್ದೇಶಕನಾಗಿ ಕನ್ನಡ ಸಿನಿ ಪ್ರಿಯರ ಮನ ಗೆದ್ದಿದ್ದ ಶಂಕರ್ ನಾಗ್ ನಮ್ಮನ್ನು ಅಗಲಿ ಇಂದಿಗೆ 31 ವರ್ಷಗಳು ಉರುಳಿವೆ. 31 ವರ್ಷಗಳು ಕಳೆದರೂ, ಇಂದಿಗೂ ‘ಆಟೋರಾಜ’ನಾಗಿ ಶಂಕರ್‌ನಾಗ್ ಅವರು ಅಭಿಮಾನಿಗಳ ಮನದಲ್ಲಿ ಹಚ್ಚ ಹಸಿರಾಗಿದ್ದಾರೆ. ಎಲ್ಲ ವರ್ಗಗಳಲ್ಲಿಯೂ ಅವರಿಗೆ ಅಭಿಮಾನಿಗಳು ಇದ್ದಾರೆ ಎನ್ನುವುದಕ್ಕೆ ಇಂದು ವಿವಿಧ ರಾಜಕೀಯ ನಾಯಕರು ಅವರನ್ನು ನೆನೆದಿರುವುದೇ ಸಾಕ್ಷಿಯಾಗಿದೆ. 

ದಿನನಿತ್ಯದ ರಾಜಕೀಯ ಚಟುವಟಿಕೆಗಳ ಮಧ್ಯೆ ನಮ್ಮ ರಾಜಕೀಯ ನಾಯಕರು ಸಿನಿಮಾ ರಂಗದ ಮಾಣಿಕ್ಯ ಎಂದೇ ಅಭಿಮಾನಿಗಳಿಂದ ಗುರುತಿಸಿಕೊಳ್ಳುವ ಶಂಕರ್‌ನಾಗ್ ಅವರನ್ನು ನೆನೆಪಿಸಿಕೊಂಡಿದ್ದಾರೆ. ಸಚಿವರಾದ ಡಾ.ಕೆ.ಸುಧಾಕರ್, ಬಿ.ವೈ. ವಿಜಯೇಂದ್ರ, ಶಾಸಕ ಜಿ.ಬಿ. ಜ್ಯೋತಿನಾಗೇಶ್ ಸೇರಿದಂತೆ ಹಲವರು ಶಂಕರ್ ನಾಗ್ ಅವರ ಸ್ಮರಿಸಿದ್ದಾರೆ.'ಹಲವಾರು ಯಶಸ್ವೀ ಚಲನಚಿತ್ರಗಳು ಹಾಗೂ ಧಾರಾವಾಹಿಗಳ ಮೂಲಕ ಜನರ ಮನದಲ್ಲಿ ಚಿರಸ್ಥಾಯಿಯಾಗಿರುವ ಅದ್ಭುತ ಕಲಾವಿದ, ತಂತ್ರಜ್ಞ, ನಿರ್ದೇಶಕ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ಅವರಿಗೆ ನಮನಗಳು. ತಮ್ಮ ಆಕರ್ಷಕ ವ್ಯಕ್ತಿತ್ವ, ಅಸಾಮಾನ್ಯ ಸಾಧನೆಗಳಿಂದಾಗಿ ಅವರು ನಾಡಿನ ಕಲಾಲೋಕದ ಲೆಜೆಂಡ್ ಆಗಿಯೇ ಇರಲಿದ್ದಾರೆ' ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂ ಮಾಡಿದ್ದಾರೆ.'ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ, ಮರೆಯಲಾಗದ ಮಾಣಿಕ್ಯ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ಗೌರವ ನಮನಗಳು' ಎಂದು ತುಮಕೂರು ಶಾಸಕ ಜಿ.ಬಿ. ಜ್ಯೋತಿನಾಗೇಶ್ ಕೂ ಮಾಡಿದ್ದಾರೆ.

ಸಿನಿಮಾ, ಸಂಗೀತ, ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದ ಶಂಕರ್​ ನಾಗ್ ಅವರು ಕಣ್ಮರೆಯಾಗಿ ಇಂದಿಗೆ 31 ವರ್ಷ. ಶಂಕರ್ ನಾಗ್ ಅವರ ಜನನ 09 ನವೆಂಬರ್ 1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಆಯಿತು. ಶಂಕರ್ ನಾಗ್ ಅವರ ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತ್ತಿದ್ದ ಹೆಸರು ಭವಾನಿ ಶಂಕರ್.

ಇದನ್ನೂ ಓದಿ: HBD Shankar Nag: ಕರಾಟೆ ಕಿಂಗ್​ ಶಂಕರ್​ ನಾಗ್​ ಹುಟ್ಟುಹಬ್ಬ: ಸ್ಮರಿಸಿದ ಸಿನಿ ಸೆಲೆಬ್ರಿಟಿಗಳು-ರಾಜಕೀಯ ನಾಯಕರು..!

ಬಾಲ್ಯದ ನಂತರ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ತೆರಳಿದ ಶಂಕರ್ ನಾಗ್, ಅಲ್ಲಿ ಮರಾಠಿ ಚಿತ್ರಮಂದಿರದ ಕಡೆಗೆ ಆಕಷಿ೯ತರಾಗಿ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಹೋದರು. ಅಣ್ಣ ಅನಂತ್​​ ನಾಗ್​ನಂತೆ ಶಂಕರ್ ನಾಗ್ ಕೂಡ ಬ್ಯಾಂಕ್ ನೌಕರನಾದರೂ ಬ್ಯಾಂಕ್ ವೃತ್ತಿಯ ಜೊತೆಗೆ ಸಂಗೀತ ಅಭಿರುಚಿ ಇದ್ದ ಕಾರಣಕ್ಕೆ ತಬಲ , ಕೊಳಲು , ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು.

Shankar Nag 31st death anniversary, Shankar Nag Movies, Shankar Nag, Ranga Shankara, death anniversary, Arundhati Nag, ಶಂಕರ್ ನಾಗ್, ರಂಗ ಶಂಕರ, ಪುಣ್ಯಸ್ಮರಣೆ, ಅರುಂಧತಿ ನಾಗ್, Shankar Nag 31st death Anniversary and here is some interesting facts about the actor ae
ನಟ ಶಂಕರ್​ ನಾಗ್​


ಮರಾಠಿ ನಾಟಕಗಳ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿ, ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ 12 ವರ್ಷಗಳಲ್ಲಿ ಕನ್ನಡದ ಸುಮಾರು 9೦ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಶಂಕರನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ ‘ಗೆದ್ದ ಮಗ‘. ಅಂತೆಯೇ, ಅಣ್ಣ ಅನಂತ ನಾಗ್ ಅವರೊಡನೆ ‘ಮಿಂಚಿನ ಓಟ‘, ‘ಜನ್ಮದ ಜನ್ಮದ ಅನುಬಂಧ‘ ಮತ್ತು ‘ಗೀತಾ‘ ಚಿತ್ರಗಳನ್ನು ನಿರ್ಮಿಸಿದರು.

ಇದನ್ನೂ ಓಸಿನಿ ದಿಗ್ಗಜರ ಪ್ರತಿಮೆ ತೆರವು: ಪ್ರತಿಭಟನೆಯ ಎಚ್ಚರಿಕೆ ಕೊಟ್ಟ ವಾಟಾಳ್​ ನಾಗರಾಜ್​..!

ಸೆಪ್ಟೆಂಬರ್ 3೦, 1990 ರಂದು ದಾವಣಗೆರೆಯ ಅನಗೋಡು ಬಳಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಧಾರವಾಡದಿಂದ ತೆರಳುತ್ತಿದ್ದ ಶಂಕರ್ ನಾಗ್ ಅವರು ಕಾರು ಅಪಘಾತವಾಗಿ ಕೊನೆಯುಸಿರೆಳೆದರು. ಇಂದು ಅವರ ಪುಣ್ಯ ತಿಥಿಯ ಅಂಗವಾಗಿ ಅಭಿಮಾನಿಗಳು ನೆಚ್ಚಿನ ನಟನ ಕುರಿತಾದ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸ್ಮರಿಸುತ್ತಿದ್ದಾರೆ.
Published by:Anitha E
First published: