ಸೈಬರ್ ವಂಚಕರಿಂದ ಕಳೆದುಕೊಂಡಿದ್ದ 89 ಸಾವಿರ ಹಣ ಮರಳಿ ಪಡೆದ ನಿವೃತ್ತ DG, IGP ಶಂಕರ್ ಬಿದರಿ

ಸೈಬರ್ ವಂಚಕರು ವ್ಯವಸ್ಥಿತವಾಗಿ ಸ್ವಲ್ಪವೂ ಅನುಮಾನ ಬರದಂತೆ ಅಕ್ಟೋಬರ್ 11ರಂದು ಶಂಕರ್ ಬಿದರಿ ಅವರ ಮೊಬೈಲ್ ಗೆ ಮೆಸೇಜ್ ಕಳುಹಿಸಿದ್ದರು. ಮೆಸೇಜ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಲಗ್ಗತ್ತಿಸಲಾಗಿರುವ ಪ್ಯಾನ್ ಸಂಖ್ಯೆ ನವೀಕರಿಸುವಂತೆ ಹೇಳಲಾಗಿತ್ತು. ಅಕ್ಟೋಬರ್ 12ರಂದು ಮಧ್ಯಾಹ್ನ ಕರೆ ಮಾಡಿ  ತಮ್ಮನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾರೆ

ಶಂಕರ್ ಬಿದರಿ

ಶಂಕರ್ ಬಿದರಿ

  • Share this:
ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಶಂಕರ್ ಬಿದರಿ (Shankar Bidari, former DG-IGP of Karnataka) ಅಕ್ಟೋಬರ್ ಎರಡನೇ ವಾರದಲ್ಲಿ ಕಳೆದುಕೊಂಡಿದ್ದ ಹಣವನ್ನು ಮರಳಿ ಪಡೆದುಕೊಂಡಿದ್ದಾರೆ. ಬ್ಯಾಂಕ್ ಸಹಾಯವಾಣಿಯಂತೆ ಶಂಕರ್ ಬಿದರಿ ಅವರಿಗೆ ಕರೆ ಮಾಡಿದ್ದ ವಂಚಕರು, ಖಾತೆಯಿಂದ 89 ಸಾವಿರ ರೂ. ಹಣ ಲಪಟಾಯಿಸಿದ್ದರು. ಈ ಸಂಬಂಧ ಶಂಕರ್ ಬಿದರಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾನು ದುಬೈಗೆ ಹೊರಡಲು ಸಿದ್ಧನಾಗುತ್ತಿರುವ ಎಟಿಎಂ (ATM)ನಿಂದ ಹಣ ಡ್ರಾ ಮಾಡಲು ತೆರಳಿದ್ದೆ. ಆಗ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಫೋನ್ ಮಾಡಿದ ವಂಚಕರು ಪ್ಯಾನ್ (PAN- Permanent Account Number) ನಂಬರ್ ಅಪ್ ಡೇಟ್ ಮಾಡಬೇಕಿದೆ. ಇಲ್ಲವಾದ್ರೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳಲಿದೆ ಎಂದು ಹೇಳಿದ್ದರು. ದುಬೈಗೆ ತೆರಳುವ ಅವಸರದಲ್ಲಿದ್ದ ನಾನು, ಮೊಬೈಲಿಗೆ ಬಂದ ಓಟಿಪಿ (OTP- One Time Password) ನಂಬರ್ ಶೇರ್ ಮಾಡಿ, ಅವರ ಹೇಳಿದಂತೆ ಎಲ್ಲ ನಿಯಮ ಪಾಲಿಸಿದೆ.

89 ಸಾವಿರ ರೂ. ಕಡಿತ ಆಗಿತ್ತು

ಕರೆ ಮಾಡಿದದ್ದ ವಂಚಕರು ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿದ್ದರು. ಕೆಲ ದಿನಗಳ ನಂತರ ಆನ್ ಲೈನ್ ಶಾಪಿಂಗ್ ಹಣ ಪಾವತಿಸುತ್ತಿರುವಾಗ ಮೊಬೈಲ್ ನಲ್ಲಿ ಹಣ ಕಡಿತದ ಮೆಸೇಜ್ ನೋಡಿದೆ. ಅಂದು 89 ಸಾವಿರ ರೂ. ನನ್ನ ಖಾತೆಯಿಂದ ಕಡಿತವಾಗಿತ್ತು. ಆವತ್ತು ನಾನು ಮೋಸ ಹೋಗಿರೋದು ತಿಳಿಯಿತು. ಕೂಡಲೇ ಅಂದು ಕರೆ ಮಾಡಿದ್ದ ವ್ಯಕ್ತಿಗೆ ಫೋನ್ ಮಾಡಿ ನನ್ನ ಹಣ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ನೀವು ಎಲ್ಲೇ ಕುಳಿತದ್ದರೂ ನಿಮ್ಮನ್ನು ಹಿಡಿಯಬಲ್ಲೆ ಎಂದು ಬೆದರಿಕೆ ಹಾಕಿದೆ.

ಇದನ್ನೂ ಓದಿ:  RIP Puneeth Rajkumar: ಆತ್ಮಹತ್ಯೆ ನಿರ್ಧಾರ ಮಾಡದಂತೆ ಅಭಿಮಾನಿಗಳಲ್ಲಿ ಶಿವಣ್ಣ, ರಾಘಣ್ಣ ಮನವಿ

ವ್ಯವಸ್ಥಿತವಾಗಿ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ರು

ಸೈಬರ್ ವಂಚಕರು ವ್ಯವಸ್ಥಿತವಾಗಿ ಸ್ವಲ್ಪವೂ ಅನುಮಾನ ಬರದಂತೆ ಅಕ್ಟೋಬರ್ 11ರಂದು ಶಂಕರ್ ಬಿದರಿ ಅವರ ಮೊಬೈಲ್ ಗೆ ಮೆಸೇಜ್ ಕಳುಹಿಸಿದ್ದರು. ಮೆಸೇಜ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಲಗ್ಗತ್ತಿಸಲಾಗಿರುವ ಪ್ಯಾನ್ ಸಂಖ್ಯೆ ನವೀಕರಿಸುವಂತೆ ಹೇಳಲಾಗಿತ್ತು. ಅಕ್ಟೋಬರ್ 12ರಂದು ಮಧ್ಯಾಹ್ನ ಕರೆ ಮಾಡಿ  ತಮ್ಮನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾರೆ. ನಿನ್ನೆಯೇ ಮೆಸೇಜ್ ಬಂದಿರುವ ವಿಷಯ ತಿಳಿಸಿ ನಂಬಿಕೆ ಗಳಿಸಿದ್ದಾರೆ. ಇತ್ತ ದುಬೈಗೆ ಹೊರಡುವ ಅವಸರದಲ್ಲಿದ್ದ ಶಂಕರ್ ಬಿದರಿ ಸಹ ಓಟಿಪಿ ಶೇರ್ ಮಾಡಿ ಹಣ ಕಳೆದುಕೊಂಡಿದ್ದರು.

ತಪ್ಪೊಪ್ಪಿಕೊಂಡು ಹಣ ಹಿಂದಿರುಗಿಸಿದ ವಂಚಕ

ನನ್ನು ಮಾತು ಕೇಳುತ್ತಲೇ ಮರು ಕರೆ ಮಾಡಿದ ಪಶ್ಚಿಮ ಬಂಗಾಳ ಮೂಲದ ವಂಚಕ, ತನ್ನ ತಪ್ಪನ್ನು ಒಪ್ಪಿಕೊಂಡನು. ನಂತರ ವಂಚಕ ಎಲ್ಲ ಹಣವನ್ನು ಹಿಂದಿರುಗಿಸಿದನು. ನಾನು ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಶಂಕರ್ ಬಿದರಿ ಹೇಳಿದ್ದಾರೆ.

ಇದನ್ನೂ ಓದಿ:  Husband-Wife; ಮಾಜಿ ಪತಿಯ '9' ರಹಸ್ಯ ತಿಳಿದು ನಗರವನ್ನೇ ತೊರೆದ ಮಹಿಳೆ? ತನ್ನನ್ನು ಕಾಡಿದ ಪ್ರಶ್ನೆಯನ್ನ ನೆಟ್ಟಿಗರ ಮುಂದಿಟ್ಟ ಪತ್ನಿ

ಫೆಬ್ರವರಿಯಲ್ಲಿ ಇ-ಮೇಲ್ ಹ್ಯಾಕ್

ಫೆಬ್ರವರಿಯಲ್ಲಿ ಶಂಕರ್ ಬಿದರಿ ಅವರ ಇ-ಮೇಲ್ (E Mail)  ಹ್ಯಾಕ್ ಮಾಡಲಾಗಿತ್ತು. ಶಂಕರ್ ಬಿದರಿ ಅವರ ಸ್ನೇಹಿತರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ಸಂಖ್ಯೆ (Bank Account Number) ಮತ್ತಯ ಐಎಫ್ಎಸ್ ಸಿ ಕೋಡ್ (IFSC Code) ಕಳುಹಿಸಿದ್ದರು. ನಂತರ ತುರ್ತಾಗಿ 25 ಸಾವಿರ ರೂ.  ಹಣ ಪಾವತಿಸುವಂತೆ ಮನವಿ ಮಾಡಿಕೊಂಡಿದ್ದರು. ಮೇಲ್ ನೋಡಿದ ಶಂಕರ್ ಬಿದರಿ ಗೆಳಯ 25 ಸಾವಿರ ರೂ. ವರ್ಗಾಯಿಸಿದ್ದರು. ನಂತರ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ ನಲ್ಲಿ ಪೊಲೀಸರು  ನ್ಯಾಗಾಲ್ಯಾಂಡ್ ಮೂಲದ ಮೂವರನ್ನು ಬಂಧಿಸಿದ್ದರು.
Published by:Mahmadrafik K
First published: