ಸಿಎಂ ಪ್ರತ್ಯೇಕವಾದಿಗಳ ಪರ ಹೋದರೆ ಬುದ್ಧಿ ಕಲಿಸಬೇಕಾಗುತ್ತೆ; ಶಾಮನೂರು ಶಿವಶಂಕರಪ್ಪ ಖಡಕ್​ ಎಚ್ಚರಿಕೆ

news18
Updated:March 13, 2018, 9:33 PM IST
ಸಿಎಂ ಪ್ರತ್ಯೇಕವಾದಿಗಳ ಪರ ಹೋದರೆ ಬುದ್ಧಿ ಕಲಿಸಬೇಕಾಗುತ್ತೆ; ಶಾಮನೂರು ಶಿವಶಂಕರಪ್ಪ ಖಡಕ್​ ಎಚ್ಚರಿಕೆ
news18
Updated: March 13, 2018, 9:33 PM IST
ಹೆಚ್​ಎಂಪಿ ಕುಮಾರ್​​, ನ್ಯೂಸ್​18 ಕನ್ನಡ

ದಾವಣಗೆರೆ, (ಮಾ.13): ಸಿಎಂ ಪ್ರತ್ಯೇಕವಾದಿಗಳ ಪರ ಹೋದರೆ ಬುದ್ದಿ ಕಲಿಸಬೇಕಾಗುತ್ತದೆ. ಸಮಾಜದ ವಿಘಟನೆಗೆ ಕಾರಣ ಆದವರಿಗೆ ಮಠಾಧೀಶರು ಬುದ್ದಿ ಕಲಿಸುತ್ತಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಎಚ್ಚರಿಕೆ ನೀಡಿದರು.

ದಾವಣಗೆರೆಯಲ್ಲಿ 50ಕ್ಕೂ ಹೆಚ್ಚು ಗುರು-ವಿರಕ್ತ ಸ್ವಾಮೀಜಿಗಳ ಜೊತೆಗಿನ ಮಾತುಕತೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಮನೂರು,  ವೀರಶೈವ-ಲಿಂಗಾಯತ ಎರಡೂ ಒಂದೇ. ಪ್ರತ್ಯೇಕ ಮಾಡುವುದು ಸರಿಯಲ್ಲ. ಸಮಾಜ ಹೋಳು ಮಾಡಿದರೆ ಹೋಳು ಮಾಡಿದವರು ಪಾಪಕ್ಕೆ ಗುರಿಯಾಗಿ ನರಕಕ್ಕೆ ಹೋಗುತ್ತಾರೆ ಎಂದು ಆಕ್ರುರೋಶ ವ್ಯಕ್ತಪಡಿಸಿದರು.

ಇದೇವೇಳೆ, ಮಾತನಾಡಿದ,  ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ  ಶಾಮನೂರು ಶಿವಶಂಕರಪ್ಪನವರ ಅಭಿಮತದಂತೆ ವೀರಶೈವ-ಲಿಂಗಾಯತ ಒಂದೇ ಎಂಬ ಹೋರಾಟ ನಮ್ಮದು. ನ್ಯಾ.ನಾಗಮೋಹನ್ ವರದಿ ತಿರಸ್ಕರಿಸಲು ಒಮ್ಮತದ ನಿರ್ಧಾರ  ಕೈಗೊಂಡಿದ್ದೇವೆ. ಅಂತೆಯೇ ನಾಳೆ ಬೃಹತ್ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು. ಇಂದು ರಾಣೆಬೆನ್ನೂರು ಅಥವಾ ದಾವಣಗೆರೆಯಲ್ಲಿ ಸಿಎಂ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಿದ್ದೆವು.  ಆದರೆ, ಸಿಎಂ ಭೇಟಿಗೆ ಅವಕಾಶ ಸಿಗಲಿಲ್ಲ ಎಂದರು.

ನಾಳೆ ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ನೀಡುತ್ತೇವೆ ಎಂದರು. ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ನ್ಯಾ.ನಾಗಮೋಹನ್ ಸಮಿತಿ ವರದಿ ತಿರಸ್ಕರಿಸಲು ಸ್ವಾಮೀಜಿಗಳು ಮನವಿ ಮಾಡಲಿದ್ದಾರೆ.

ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ, ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ, ಹೊಸಪೇಟೆ ಸಂಗನಬಸವ ಗುರುಗಳು, ಮುಂಡರಗಿ ಅನ್ನದಾನೇಶ್ವರ ಶ್ರೀಗಳು ಸೇರಿದಂತೆ 50ಕ್ಕೂ ಹೆಚ್ಚು ಶ್ರೀಗಳು ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿಯಾಗಿದ್ದರು. ನಾಳೆ ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಸಿ ಬೃಹತ್ ಹೋರಾಟ ನಡೆಸಲು ನಿರ್ಧರಿಸಿದ್ದು,   100 ಕ್ಕೂ ಹೆಚ್ಚು ಗುರು-ವಿರಕ್ತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

 
Loading...

 
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ