Karnataka Weather Today: ಶಾಹೀನ್ ಚಂಡಮಾರುತ ಪ್ರಭಾವ ರಾಜ್ಯದಲ್ಲಿ ಅಕ್ಟೋಬರ್ 4 ವರೆಗೆ ಅಧಿಕ ಮಳೆ ಸಾಧ್ಯತೆ- ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ..

Rainfall; ಮುಂದಿನ 24 ಗಂಟೆಗಳಲ್ಲಿ, ಬಿಹಾರ, ಸಬ್-ಹಿಮಾಲಯನ್ ಪಶ್ಚಿಮ ಬಂಗಾಳ, ಅಸ್ಸಾಂನ ಕೆಲವು ಭಾಗಗಳು, ಕರಾವಳಿ ಕರ್ನಾಟಕ, ಕೇರಳ, ಮತ್ತು ಲಕ್ಷದ್ವೀಪದ ಪ್ರತ್ಯೇಕ ಪಾಕೆಟ್‌ಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ನಗರದಲ್ಲಿ ಸುರಿದ ಧಾರಕಾರ ಮಳೆ

ಬೆಂಗಳೂರು ನಗರದಲ್ಲಿ ಸುರಿದ ಧಾರಕಾರ ಮಳೆ

  • Share this:
Karnataka Rains Today ಬೆಂಗಳೂರು(ಅ.02):ರಾಜ್ಯದಲ್ಲಿ ಮಳೆಯ(Rainfall) ಅಬ್ಬರ ಮುಂದುವರೆಯುತ್ತಲೇ ಇದೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಹಾಗೂ ಮುಂಗಾರು(Monsoon) ಪ್ರಭಾವದಿಂದ ಸುಮಾರು ಒಂದು ತಿಂಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ನಂತರ ಕೊಂಚ ಬಿಡುವು ನೀಡಿದ್ದ ಮಳೆ, ಮತ್ತೆ ಗುಲಾಬ್ ಹಾಗೂ ಶಾಹೀನ್(Cyclone Shaheen) ಚಂಡಮಾರುತಗಳ ಪ್ರಭಾವದಿಂದ ಹೆಚ್ಚಾಗಿದೆ. ರಾಜ್ಯದಲ್ಲಿ ಕಳೆದ 4 ದಿನಗಳಿಂದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಅಕ್ಟೋಬರ್ 4ರವರೆಗೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ. ಕರ್ನಾಟಕದ ಕರಾವಳಿ9Coastal karnataka)  ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ  ಮೂರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದ್ದು,  ಕೆಲವು ಜಿಲ್ಲೆಗಳಿಗೆ ಇಲಾಖೆ ಯೆಲ್ಲೊ ಅಲರ್ಟ್(Yellow Alert)  ಘೋಷಣೆ ಮಾಡಲಾಗಿದೆ.  

ಶಾಹೀನ್ ಚಂಡಮಾರುತ ಶುಕ್ರವಾರ ಭಾರತ ಪ್ರವೇಶಿಸಿದ್ದು, . ಚಂಡಮಾರುತದ ಪರಿಣಾಮ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇನ್ನು ಎರಡು ದಿನ ಮಳೆ ಸುರಿಯುವ ನಿರೀಕ್ಷೆ ಇದೆ.

ರಾಜಧಾನಿಯಲ್ಲಿ ಭಾರೀ ಮಳೆ 

ಇದನ್ನೂ ಓದಿ: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

ಇನ್ನು ನಿನ್ನೆ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳು ಜಾಲವೃತಗೊಂಡು ಜನ ಜೀವನ ಅಸ್ತವ್ಯಸ್ತವಾಗಿದ್ದವು. ಜಯನಗರ, ಆರ್​ ಆರ್ ನಗರ, ಬಸವನಗುಡಿ, ಹೆಬ್ಬಾಳ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.



ಕರ್ನಾಟಕದಲ್ಲಿ ಮಾತ್ರವಲ್ಲದೇ ಶಾಹೀನ್ ಚಂಡಮಾರುತ ಇನ್ನು ಏಳು ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ಶಾಹೀನ್ ಚಂಡಮಾರುತ ತೀವ್ರವಾಗುವ ನಿರೀಕ್ಷೆಯಿದೆ.  ಬಿಹಾರ,ಪಶ್ಚಿಮ ಬಂಗಾಳ, ಸಿಕ್ಕಿಂ, ತಮಿಳುನಾಡು, ಕೇರಳ, ಕರ್ನಾಟಕ ಹಾಗೂ ಗುಜರಾತ್ ರಾಜ್ಯಗಳಲ್ಲಿ ಮಳೆಯಾಗಲಿದೆ. ಅಕ್ಟೋಬರ್ 1ರ ನಂತರ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಸೆಪ್ಟೆಂಬರ್ 26ರಂದು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ 'ಗುಲಾಬ್' ಚಂಡಮಾರುತ ಆಂಧ್ರ ಪ್ರದೇಶ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದ ಮೇಲೆ ಹೆಚ್ಚು ಪರಿಣಾಮ ಬೀರಿದ ಪ್ರಭಾವ ಆ ರಾಜ್ಯಗಳಲ್ಲಿ ಅಧಿಕ ಮಳೆಯಾಗಿತ್ತು, ಆದರೆ,  ಬುಧವಾರದಿಂದ ಗುಲಾಬ್ ಚಂಡಮಾರುತ ದುರ್ಬಲಗೊಂಡು ಅರಬ್ಬೀ ಸಮುದ್ರದಲ್ಲಿ ಶಾಹೀನ್ ಚಂಡಮಾರುತವಾಗಿ ಬದಲಾಗಿದ್ದು, ಇನ್ನು ಹಲವು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 24 ಗಂಟೆ ಎಲ್ಲೆಲ್ಲಿ ಮಳೆ? 

ಮುಂದಿನ 24 ಗಂಟೆಗಳಲ್ಲಿ, ಬಿಹಾರ, ಸಬ್-ಹಿಮಾಲಯನ್ ಪಶ್ಚಿಮ ಬಂಗಾಳ, ಅಸ್ಸಾಂನ ಕೆಲವು ಭಾಗಗಳು, ಕರಾವಳಿ ಕರ್ನಾಟಕ, ಕೇರಳ, ಮತ್ತು ಲಕ್ಷದ್ವೀಪದ ಪ್ರತ್ಯೇಕ ಪಾಕೆಟ್‌ಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಪೂರ್ವ ಯುಪಿ, ಗಂಗಾ ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಮಧ್ಯಪ್ರದೇಶದ ಭಾಗಗಳು, ಆಗ್ನೇಯ ರಾಜಸ್ಥಾನ, ಕರ್ನಾಟಕದ ಉಳಿದ ಪ್ರದೇಶಗಳು, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ 8% ಮಳೆ ಕೊರತೆ? 

ಇದನ್ನೂ ಓದಿ: ಗಾಂಧಿ ಜಯಂತಿ ಅಂಗವಾಗಿ ಅವಧೂತ ಶ್ರೀ ವಿನಯ್ ಗುರೂಜಿ ನೇತೃತ್ವದಲ್ಲಿ ಪರಿಸರ ಕಾಳಜಿ ಕಾರ್ಯಕ್ರಮ

ಇವೆಲ್ಲದರ ನಡುವೆ ರಾಜ್ಯದಲ್ಲಿ ಇಷ್ಟು ದಿನಗಳ ಕಾಲ ಬಿರುಸಿನ ಮಳೆ ಸುರಿದರೂ ಸಹ  ಈ ಬಾರಿ ರಾಜ್ಯದಲ್ಲಿ ಒಟ್ಟಾರೆಯಾಗಿ 8% ಮಳೆ ಕೊರತೆಯೊಂದಿಗೆ ಮುಂಗಾರು ಅವಧಿ ಅಧೀಕೃತವಾಗಿ ಅಂತ್ಯವಾಗುತ್ತಿದೆ ಎಂಬ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ.  ಆಗಸ್ಟ್‌ ತಿಂಗಳಿನಲ್ಲಿ 47% ಮಳೆ ಕೊರತೆ ಉಂಟಾಗಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕ ಮಳೆಯಾಗಿದ್ದು, ರಾಜ್ಯದಲ್ಲಿ ಒಟ್ಟಾರೆ 8% ಮಳೆ ಕೊರತೆಯಾಗಿದೆ ಎಂದು ಹೇಳಲಾಗುತ್ತಿದೆ.
Published by:Sandhya M
First published: