National Highwayಯಲ್ಲಿ ಹೆಚ್ಚಾದ ಅಪಘಾತಗಳ ಸಂಖ್ಯೆ, ಶಹಾಪುರ ಜನರ ಸಂಕಷ್ಟ; ಬೈಪಾಸ್ ರಸ್ತೆ ಯಾವಾಗ?

ಸುಮಾರು ವರ್ಷಗಳಿಂದ ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಅನುದಾನದೊಂದಿಗೆ  ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ. ಆದರೆ ಪ್ರಸ್ತಾವನೆಯು ಕಾಗದದಲ್ಲಿ ಮಾತ್ರ ಸೀಮಿತವಾಗಿದೆ.

ರಾಷ್ಟ್ರೀಯ ಹೆದ್ದಾರಿ

ರಾಷ್ಟ್ರೀಯ ಹೆದ್ದಾರಿ

 • Share this:
  ಯಾದಗಿರಿ:ರಾಷ್ಟ್ರೀಯ ಹೆದ್ದಾರಿಯು (National Highway) ಸಾವಿನ ಹೆದ್ದಾರಿಯಾಗಿದೆ. ಆ ರಾಷ್ಟ್ರೀಯ ಹೆದ್ದಾರಿಯು ಪ್ರಯಾಣಿಕರಿಗೆ (Passengers) ಕಂಟಕವಾಗಿದೆ‌. ನಗರ ಪ್ರದೇಶದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋದ ಹಿನ್ನೆಲೆ ಶಹಾಪುರ ನಗರದ (Shahapura City) ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ನಗರದ ವ್ಯಾಪ್ತಿಯಲ್ಲಿ ಬೀದರ್ - ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ (Bidar-Srirangaptan State Highway) ನಿರ್ಮಾಣ ಮಾಡಲಾಗಿತ್ತು. ನಂತರ 5 ವರ್ಷದ ಹಿಂದೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ 150 Aಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.

  ಹೆದ್ದಾರಿಯಲ್ಲಿ ಅಪಘಾತ ಹೆಚ್ಚಳ ಆತಂಕ

  ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಪ್ರಯಾಣಿಕರು ಆತಂಕ ಪಡುವಂತಾಗಿದೆ. ಕಳೆದ 2021 ಸಾಲಿನಲ್ಲಿ 20 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 8 ಜನ ಅಪಘಾತದಲ್ಲಿ ಮೃತಪಟ್ಟಿದ್ದು, 23 ಜನ ಗಾಯಗೊಂಡಿದ್ದಾರೆ.

  ಅದೇ ರೀತಿ 2022 ಸಾಲಿನಲ್ಲಿ ಇಲ್ಲಿಯವರಗೆ 17 ಪ್ರಕರಣಗಳು ದಾಖಲಾಗಿದ್ದು, 13 ಜನ ಮೃತಪಟ್ಟಿದ್ದಾರೆ. 16 ಜನ ಗಾಯಗೊಂಡಿದ್ದಾರೆ. ಹೆದ್ದಾರಿ ರಸ್ತೆಯಲ್ಲಿ ಅಪಘಾತಗಳ ಹೆಚ್ಚಳದಿಂದ ಸವಾರರು ಆತಂಕದಲ್ಲಿ ವಾಹನ ಚಲಾಯಿಸುವಂತಾಗಿದೆ. ಶಹಾಪುರ ನಗರದಲ್ಲಿಯೇ ರಸ್ತೆ ಅಪಘಾತಗಳು ಹೆಚ್ಚಿನ ಪ್ರಕರಣಗಳು ಜರುಗಿವೆ‌‌.

  Shahapura City Citizens Demand Bypass Road for national highway nmpg mrq
  ರಾಷ್ಟ್ರೀಯ ಹೆದ್ದಾರಿ


  ಇದನ್ನೂ ಓದಿ:  Karnataka Politics: ಸಿದ್ದರಾಮೋತ್ಸವ, ಕಾಲ್ನಡಿಗೆ ಬಳಿಕ ಬಿಜೆಪಿಯಲ್ಲಿ ಟೆನ್ಷನ್, ಟೆನ್ಷನ್; RSS ಮುಖಂಡರ ಜೊತೆ ಸಿಎಂ ಚರ್ಚೆ

  ಬೈಪಾಸ್ ರಸ್ತೆ ನಿರ್ಮಿಸಿ

  ಶಹಾಪುರ ಜನನಿಬಿಡ ಪ್ರದೇಶದ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿಯು ನಗರದಲ್ಲಿ ಹಾದು ಹೋದ ಹಿನ್ನೆಲೆ ವಾಹನ ದಟ್ಟಣೆ ಹೆಚ್ಚಾಗುವ ಜೊತೆ ಭಾರೀ ಪ್ರಮಾಣದ ವಾಹನಗಳ ಸಂಚಾರ ಹೆಚ್ಚಾಗಿದೆ. ಇದರಿಂದ ರಸ್ತೆ ಅಪಘಾತ ಪ್ರಕರಣವು ಹೆಚ್ಚಾಗಿವೆ.

  ಅನೇಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ‌. ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಸುಮಾರು ವರ್ಷಗಳ ಹೋರಾಟದ ಕೂಗಾಗಿದೆ. ಶಹಾಪುರ ನಗರದ ಹೊರಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಿದರೆ ಭಾರೀ ವಾಹನಗಳ ಸಂಚಾರ ಹಾಗೂ ರಸ್ತೆ ಅಪಘಾತ ಪ್ರಕರಣಗಳು ಬ್ರೇಕ್ ಬೀಳಲಿದೆ.

  Shahapura City Citizens Demand Bypass Road for national highway nmpg mrq
  ರಾಷ್ಟ್ರೀಯ ಹೆದ್ದಾರಿ


  ನಗರದಲ್ಲಿ ವಾಹನ ದಟ್ಟನೆ ಹೆಚ್ಚಳ

  ಈ ಬಗ್ಗೆ ಸ್ಥಳೀಯ ಖಾಲೀದ್ ಅವರು ಮಾತನಾಡಿ, ಶಹಾಪುರ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಒಂದೇ ರಸ್ತೆ ಮಾರ್ಗದ ಮೂಲಕ ನಿತ್ಯವೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ರಸ್ತೆ ಅಪಘಾತದಂತಹ ಘಟನೆಗಳು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿವೆ .ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ.

  ಸುಮಾರು ವರ್ಷಗಳಿಂದ ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಅನುದಾನದೊಂದಿಗೆ  ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ. ಆದರೆ ಪ್ರಸ್ತಾವನೆಯು ಕಾಗದದಲ್ಲಿ ಮಾತ್ರ ಸೀಮಿತವಾಗಿದೆ.

  ಬೈಪಾಸ್ ರಸ್ತೆಯ ನಿರ್ಮಾಣದ ಅಗತ್ಯ

  ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ  ಜನ ಸಾಮನ್ಯರು ರಸ್ತೆ ಅಪಘಾತದಲ್ಲಿ ಸಾಯುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಬೈಪಾಸ್ ರಸ್ತೆ ನಿರ್ಮಾಣ ಅಗತ್ಯವಿದೆ.

  ಈ ಬಗ್ಗೆ ರಾಯಚೂರು ಸಂಸದ ರಾಜಾ ಅಮರೇಶ್ವರ್ ನಾಯಕ್ ಅವರು ಮಾತನಾಡಿ, ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಸರ್ವೆ ಹಂತದಲ್ಲಿದೆ. ಈ ಬಗ್ಗೆ ಬೈಪಾಸ್ ನಿರ್ಮಾಣ ಮಾಡಲು ಅಗತ್ಯ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

  Shahapura City Citizens Demand Bypass Road for national highway nmpg mrq
  ರಾಷ್ಟ್ರೀಯ ಹೆದ್ದಾರಿ


  ಇದನ್ನೂ ಓದಿ:  Shivamogga: ಚಾಕು ಇರಿತ ಕೇಸ್​ಗೆ ಟ್ವಿಸ್ಟ್: ಪ್ರೇಮ್ ​ಸಿಂಗ್​ಗೂ ಮೊದಲೇ ಸದ್ದಾಂ ಎಂಬಾತನ ಮೇಲೆ ಹಲ್ಲೆ

  ನೋ ಅಡ್ಜಸ್ಟ್‌ಮೆಂಟ್, ನೋ ಕಮಿಟ್‌ಮೆಂಟ್

  ರಾಜ್ಯದಲ್ಲೂ ಯುಪಿ ಮಾದರಿ (UP Model) ಪ್ರಯೋಗಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ (MLA Renukacharya) ಒತ್ತಾಯ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರೇಣುಕಾಚಾರ್ಯ, ನಮ್ಮ ಸರ್ಕಾರ (BJP Government) ಸಮರ್ಥವಾಗಿ ಕೆಲಸ ಮಾಡುತ್ತಿದೆ. ಕೇವಲ ಘೋಷಣೆ ಮಾಡಿಲ್ಲ, ಅನುಷ್ಟಾನಕ್ಕೆ ತ‌ಂದಿದ್ದೇವೆ. ಸಿಎಂ ಬೊಮ್ಮಾಯಿ (CM Basavaraj Bommai) ಅವರು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ನೋ ಅಡ್ಜಸ್ಟ್‌ಮೆಂಟ್, ನೋ ಕಮಿಟ್‌ಮೆಂಟ್ ಎಂದು ಹೇಳಿದರು.
  Published by:Mahmadrafik K
  First published: