• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಗೋವಾ ಕಡಲತೀರದಲ್ಲಿ ಕಡಿಮೆ ಆಗಲಿವೆ ಷಾಕ್ಸ್​ ಸಂಖ್ಯೆ; ಪ್ರವಾಸೋದ್ಯಮಕ್ಕೆ ಹೊಡೆತ ನೀಡಿದ ಕೊರೋನಾ

ಗೋವಾ ಕಡಲತೀರದಲ್ಲಿ ಕಡಿಮೆ ಆಗಲಿವೆ ಷಾಕ್ಸ್​ ಸಂಖ್ಯೆ; ಪ್ರವಾಸೋದ್ಯಮಕ್ಕೆ ಹೊಡೆತ ನೀಡಿದ ಕೊರೋನಾ

ಗೋವಾ ಕಡಲತೀರ

ಗೋವಾ ಕಡಲತೀರ

ಬೀಚ್ ಷಾಕ್ಸ್​​ ನೀತಿಯ ಪ್ರಕಾರ 2019ರಿಂದ 2022ರವರೆಗೆ ಮೂರು ವರ್ಷಗಳವರೆಗೆ ಉತ್ತರ ಗೋವಾದ 260 ಷಾಕ್ಸ್ ಗಳು ಮತ್ತು ದಕ್ಷಿಣ ಗೋವಾದ 96 ಷಾಕ್ಸ್ ಗಳು ಪ್ರತಿವರ್ಷ ನವೀಕರಣ ಮಾಡಿಕೊಂಡು ವಹಿವಾಟು ನಡೆಸಲು ಅನುಮತಿಸಲಾಗಿದೆ.

  • Share this:

ಕಾರವಾರ(ಅ.05): ಗೋವಾ ಪ್ರವಾಸಿಗರ ಸ್ವರ್ಗ. ಆರ್ಥಿಕ ‌ವ್ಯವಸ್ಥೆಯಲ್ಲಿನ ಬಹುಪಾಲು ಲಾಭ ಪ್ರವಾಸೋದ್ಯಮದ ತಳಹದಿ‌ ಮೇಲೆ ನಿಂತಿದೆ. ವಿಶ್ವದ ಮೂಲೆ ಮೂಲೆಗಳಿಂದ ಚಿಕ್ಕ ಗೋವಾ ರಾಜ್ಯಕ್ಕೆ ಪ್ರವಾಸಿಗರು ಆಗಮಿಸಿ ಎಂಜಾಯ್ ಮಾಡುತ್ತಾರೆ. ಆದ್ರೆ ಈಗ ಕೊರೋನಾ ಮಹಾಮಾರಿ ಇದಕ್ಕೆಲ್ಲ ಬ್ರೇಕ್ ಹಾಕಿದ್ದು ಪ್ರವಾಸೋದ್ಯಮಿಗಳು ಕೂಡಾ ಕಂಗಾಲಾಗಿದ್ದಾರೆ. ಕಡಲತೀರಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗಿರುತ್ತಿದ್ದ ಶ್ಯಾಕ್ಸ್ (ಒಡ್ಡೊಡ್ಡಾದ ಮನೆ)ಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಇಳಿಕೆಯಾಗಲಿದೆ ಎನ್ನಲಾಗಿದ್ದು, ಇದು ಗೋವಾದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತೊಂದು ಹೊಡೆತ ನೀಡಲಿದೆ ಎನ್ನಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಜನ ತತ್ತರಿಸಿದ್ದರೂ ಗೋವಾ ಸರ್ಕಾರವು ಪರವಾನಗಿ ಹಾಗೂ ಅಬಕಾರಿ ಶುಲ್ಕವನ್ನು ಮನ್ನಾ ಅಥವಾ ಕಡಿಮೆ ಮಾಡಲು ಈವರೆಗೂ ಕ್ರಮ ಕೈಗೊಳ್ಳದ ಕಾರಣ ಶ್ಯಾಕ್ಸ್​​​​​​ಗಳನ್ನು ಸ್ಥಾಪಿಸಲು ಅಂಗಡಿಕಾರರು ಮುಂದೆ ಬರುತ್ತಿಲ್ಲ ಎಂದು ತಿಳಿದು ಬಂದಿದೆ.


ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬಹುದೆಂದು ಕಾದು ಕುಳಿತಿರುವ ಷಾಕ್ಸ್​ ಮಾಲೀಕರು, ಪರವಾನಗಿ ನವೀಕರಣಕ್ಕಾಗಿ ಪ್ರವಾಸೋದ್ಯಮ ಇಲಾಖೆಗೆ ಈವರೆಗೂ ಅರ್ಜಿ ಸಲ್ಲಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ವರ್ಷ ತಮ್ಮ ಷಾಕ್ಸ್​​ಗಳನ್ನು ಸ್ಥಾಪಿಸಿ ವ್ಯವಹಾರ ಪ್ರಾರಂಭಿಸಲು ಸರ್ಕಾರದಿಂದ ವಿನಾಯಿತಿ ಪಡೆಯಲು ಕಾಯುತ್ತಿದ್ದಾರೆ.


ಮೋದಿ ಟ್ರಂಪ್ ಹೆಂಡತಿಗೆ ವಿಶ್ ಮಾಡ್ತಾರೆ, ಆದ್ರೆ ಸಂತ್ರಸ್ತೆ ಬಗ್ಗೆ ಮಾತನಾಡಲ್ಲ; ಮಾಜಿ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ


‘ಈ ವರ್ಷದ ಪರವಾನಗಿ ಮತ್ತು ಅಬಕಾರಿ ಶುಲ್ಕದ ಸಂಪೂರ್ಣ ಮೊತ್ತವನ್ನು ಪಾವತಿಸಿದ್ದೇವೆ. ಆದರೆ ಕೋವಿಡ್- 19 ಕಾರಣದಿಂದಾಗಿ ಎಲ್ಲವನ್ನೂ ಮುಚ್ಚಬೇಕಾಯಿತು. ಆದ್ದರಿಂದ, ಪ್ರಸಕ್ತ ವರ್ಷದಲ್ಲಿ ನಮಗೆ ಪರಿಹಾರ ನೀಡಲು ಸರ್ಕಾರವನ್ನು ಕೋರಿದ್ದೇವೆ. ಕಳೆದ ವರ್ಷದಂತೆ ಪರವಾನಗಿ ಮತ್ತು ಅಬಕಾರಿ ಶುಲ್ಕ ಕಡಿಮೆಗೊಳಿಸಲು ಸರ್ಕಾರವನ್ನು ಕೋರಿದ್ದೇವೆ’ ಎಂದು ಷಾಕ್ಸ್ ಮಾಲೀಕರು ತಿಳಿಸಿದ್ದಾರೆ. ಬೀಚ್ ಷಾಕ್ಸ್​​ ನೀತಿಯ ಪ್ರಕಾರ 2019ರಿಂದ 2022ರವರೆಗೆ ಮೂರು ವರ್ಷಗಳವರೆಗೆ ಉತ್ತರ ಗೋವಾದ 260 ಷಾಕ್ಸ್ ಗಳು ಮತ್ತು ದಕ್ಷಿಣ ಗೋವಾದ 96 ಷಾಕ್ಸ್ ಗಳು ಪ್ರತಿವರ್ಷ ನವೀಕರಣ ಮಾಡಿಕೊಂಡು ವಹಿವಾಟು ನಡೆಸಲು ಅನುಮತಿಸಲಾಗಿದೆ.


ಏನಂತಾರೆ ಮಾಲಿಕರು?


ಕೋವಿಡ್‌ನಿಂದಾಗಿ ನಷ್ಟದಲ್ಲಿರುವ ನಾವು ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮುಂದೆ ಇಟ್ಟಿದ್ದೇವೆ. ಹೀಗಾಗಿ ಷಾಕ್ಸ್ ಸ್ಥಾಪಿಸಲು ಒಂದು ತಿಂಗಳಿನಿಂದ ಒಂದೂವರೆ ತಿಂಗಳವರೆಗೆ ವಿಳಂಬವಾಗಬಹುದು. ಮುಂದಿನ ವಾರ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.


ಷಾಕ್ಸ್  ಇದ್ರೆ ಪ್ರವಾಸಿಗರ ಆಕರ್ಷಣೆ


ಕಡಲತೀರದಲ್ಲಿ ಷಾಕ್ಸ್ ಇದ್ರೆ ಮಾತ್ರ ಪ್ರವಾಸಿಗರಿಗೆ ಆಕರ್ಷಣೆ, ಯಾಕೆಂದರೆ ಪ್ರವಾಸಿಗರು ಕಡಲತೀರದಲ್ಲಿ ಕುಳಿತು ಮದ್ಯ ಸೇವನೆ ಮತ್ತು ವಿಶ್ರಾಂತಿ ಪಡೆಯುತ್ತಾರೆ, ರೆಸ್ಟೋರೆಂಟ್ ಗಳಲ್ಲಿ ಕುಳಿತು ವಿಶ್ರಮಿಸುವದಕ್ಕಿಂತ ಹೆಚ್ಚಾಗಿ ಬೀಚ್ ಷಾಕ್ಸ್ ಗಳಲ್ಲಿ ಪ್ರವಾಸಿಗರ ಆಕರ್ಷಣೆ ಹೆಚ್ಚು, ಆದ್ರೆ ಈ ಬಾರಿ ಇದು ಹೆಚ್ಚು ಆಕರ್ಷಣೆ ಆಗದೆ ಇರಬಹುದು. ಪ್ರವಾಸಿಗರ ಕೊರತೆ ಕೂಡ ಎದ್ದು ಕಾಣಲಿದೆ, ವಿದೇಶಿ ಪ್ತವಾಸಿಗರೇ ಹೆಚ್ಚಾಗಿ ಷಾಕ್ಸ್ ಅವಲಂಬಿಸುತ್ತಾರೆ. ಆದ್ರೆ ಈ ಬಾರಿ ಗೋವಾ ಕಡೆ ವಿದೇಶಿ ಪ್ರವಾಸಿಗರ ಕೊರತೆ ಇರಲಿದೆ.

Published by:Latha CG
First published: