ಮಸಾಜ್ ಬೇಡ ಮಲಗು ಬಾ ಎಂದ ಗಿರಾಕಿ: ಸೆಕ್ಸ್ ಡಿಮ್ಯಾಂಡ್ ಮಾಡಿದವನ ಹಿಂದೆ ಬಿದ್ದ ಖಾಕಿ ಪಡೆ


Updated:February 23, 2018, 2:36 PM IST
ಮಸಾಜ್ ಬೇಡ ಮಲಗು ಬಾ ಎಂದ ಗಿರಾಕಿ: ಸೆಕ್ಸ್ ಡಿಮ್ಯಾಂಡ್ ಮಾಡಿದವನ ಹಿಂದೆ ಬಿದ್ದ ಖಾಕಿ ಪಡೆ
  • Share this:
-ನ್ಯೂಸ್ 18 ಕನ್ನಡ

ಬೆಂಗಳೂರು,(ಫೆ.23): ಕಾಮುಕನೊಬ್ಬ ಮಸಾಜ್ ಪಾರ್ಲರ್ ಕೆಲಸಗಾರ್ತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾಮೂಲಿ ಮಸಾಜ್ ಬೇಡ, ಹ್ಯಾಪಿ ಎಂಡಿಂಗ್ ಆರ್ ಸೆಕ್ಸ್ ಬೇಕು. ಇಲ್ಲದಿದ್ದರೆ ಬೆಡ್ ಮೇಲೆ ಮಲಗೋಕೆ ಹುಡುಗಿಯರನ್ನು ಕಳಿಸು. ಇದು ವ್ಯಕ್ತಿಯೊಬ್ಬನ ವಿಚಿತ್ರ ಕಾಮದಾಹ. ಆಕೆ ಇಲ್ಲಾ ಸರ್, ನಮ್ಮದು ಫ್ಯಾಮಿಲಿ ಸ್ಪಾ ಅಂತಾ ಹೇಳಿದರೂ ಆ ಭೂಪ ಸೆಕ್ಸ್​ಗಾಗಿ ಕಾಡಿದ್ದಾನೆ. ಸೆಕ್ಸ್​ಗೆ ಸಹಕರಿಸದಿದ್ದರೆ ಪೊಲೀಸರಿಂದ ರೇಡ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ವ್ಯಭೀಚಾರ ಮಾಡುತ್ತಿದ್ದೀರೆಂದು ನಿಮ್ಮ ಪೋಷಕರಿಗೆ ಹೇಳುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ. ಅಷ್ಟೇ ಅಲ್ಲದೇ ಸ್ಪಾ ಕೆಲಸಗಾರರಿಗೆಲ್ಲಾ ಅವಾಚ್ಯ ಶಬ್ದಗಳಿಂದ ಬೈದು ಪುಂಡಾಟ ನಡೆಸಿದ್ದಾನೆ.

ಈ ಘಟನೆ ನಡೆದಿರುವುದು ಫೆ.19 ರಂದು. ಸದಾಶಿವನಗರದ ಆರ್ ವಿ ಬಡಾವಣೆಯಲ್ಲಿರುವ ಸ್ಪಾ ಸೆಂಟರ್​ನಲ್ಲಿ.  ಕಾಮುಕನ ವಿಚಿತ್ರ ಕಾಮದಾಹಕ್ಕೆ ಯುವತಿ ರೋಸಿ ಹೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ತಕ್ಷಣ ಪಿಂಕ್ ಹೊಯ್ಸಳ ಸಿಬ್ಬಂದಿ ಸ್ಪಾ ಸೆಂಟರ್​ನತ್ತ ದೌಡಾಯಿಸಿದ್ದಾರೆ. ಆರೋಪಿ ಪೊಲೀಸಿನವರಿಗೂ ಸಹ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಹೀಗಾಗಿ,  ಪೊಲೀಸರು ಸಹ ಸದಾಶಿವ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಸದಾಶಿವನಗರ ಪೊಲೀಸರು ಆರೋಪಿ ಉದ್ಯಮಿ ಸಾಯಿ ರಾಮಕೃಷ್ಣನಿಗಾಗಿ ಶೋಧ ನಡೆಸುತ್ತಿದ್ದಾರೆ.

 
First published:February 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading