ಮಂಡ್ಯ (ನ.22): ಮತಾಂತರವಾದ್ರೆ ಮದುವೆ ಆಗುವುದಾಗಿ ಹೇಳಿ ಅಪ್ರಾಪ್ತ ಬಾಲಕಿಯ (Minor Handicapped Girl) ಮೇಲೆ ಅತ್ಯಾಚಾರವೆಸಗಿದ್ದ (Rape) ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಡ್ಯ (Mandya) ಜಿಲ್ಲೆ ನಾಗಮಂಗಲ (Nagamangala) ಪಟ್ಟಣದಲ್ಲಿ ಘಟನೆ ನಡೆದಿದ್ದು. 13 ವರ್ಷದ ಬಾಲಕಿ ಮೇಲೆ 25 ವರ್ಷದ ಮುಸ್ಲಿಂ ಯುವಕ ಅತ್ಯಾಚಾರ ಎಸಗಿದ್ದಾನೆ. ಅಜ್ಜಿ ಮನೆಯಲ್ಲಿದ್ದ ಅಂಗವಿಕಲ ಬಾಲಕಿ ಸ್ನೇಹ ಬೆಳಸಿಕೊಂಡ ಯೂನಸ್ ಪಾಷ (Yunus Pasha), ಬಾಲಕಿ ಅಜ್ಜಿಗೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ರಾತ್ರಿ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾನೆ.
ವಿವಾಹಿತ ಯೂನಸ್ ಪಾಷ ಎಂಬಾತನಿಂದ ಕೃತ್ಯ
ನಾಗಮಂಗಲ ಪಟ್ಟಣದ ನಿವಾಸಿ ಯೂನಸ್ ಪಾಷಗೆ ಈಗಾಗಲೇ ಮದುವೆಯಾಗಿದ್ದು, ಬಾಲಕಿಯನ್ನು ಮದುವೆಯಾಗೋದಾಗಿ ನಂಬಿಸಿ ಹೀನ ಕೃತ್ಯ ವೆಸಗಿದ್ದಾನೆ. ಬಾಲಕಿ ನಗ್ನ ಫೋಟೋ, ವಿಡಿಯೋಗಳನ್ನ ರೆಕಾರ್ಡ್ ಮಾಡಿಕೊಂಡಿದ್ದ ಯೂನಸ್, ಲೈಂಗಿಕ ಕ್ರಿಯೆಗೆ ಸಹಕರಿಸದಿದ್ರೆ ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿ ಅಂಗವಿಕಲ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮತಾಂತವಾದ್ರೆ ಮದುವೆಯಾಗೋದಾಗಿ ವಂಚನೆ
ಬಾಲಕಿಯ ಮನೆಯ ಎದುರಿನ ಮನೆಯಲ್ಲೇ ವಾಸವಿದ್ದ ಯೂನಸ್ 3 ವರ್ಷಗಳ ಹಿಂದೆ ಮದುವೆಯಾಗಿದ್ದಾನೆ . ಈತನಿಗೆ 1 ಗಂಡು ಮಗು ಕೂಡ ಇದೆ. ಆದ್ರೂ ಬಾಲಕಿಯ ಸ್ನೇಹ ಬೆಳೆಸಿದ ಯೂನಸ್ ಪಾಷ, ಮತಾಂತರವಾದ್ರೆ ಮದುವೆಯಾಗೋದಾಗಿ ನಂಬಿಸಿದ್ದಾನೆ.
ಬಾಲಕಿಯ ನಗ್ನ ಫೋಟೋ, ವಿಡಿಯೋ ರೆಕಾರ್ಡ್
8ನೇ ತರಗತಿ ಓದುತ್ತಿದ್ದ 13 ವರ್ಷದ ಅಂಗವಿಕಲ ಬಾಲಕಿಗೆ ಮಾತಿನಲ್ಲೇ ನಂಬಿಸಿ ಆಕೆ ಪೋಷಕರಿಗೂ ತಿಳಿಯದಂತೆ ಮೊಬೈಲ್ ಕೊಡಿಸದ್ದನಂತೆ. ವಾಟ್ಸಪ್ ವಿಡಿಯೋ ಕಾಲ್ ಮೂಲಕ ಬಾಲಕಿ ಜೊತೆ ಚಾಟಿಂಗ್ ನಡೆಸುತ್ತಿದ್ದ ಯೂನಸ್ ಬಾಲಕಿಯ ನಗ್ನ ಫೋಟೋ, ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದನು.
ಬಾಲಕಿಗೆ ಬ್ಲಾಕ್ ಮೇಲ್
ಲೈಂಗಿಕ ಕ್ರಿಯೆಗೆ ಸಹಕರಿಸದಿದ್ರೆ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡುವುದಾಗಿ ಬ್ಲಾಕ್ ಮೇಲೆ ಮಾಡಿದ್ದ. ಬಾಲಕಿ ಅಸಹಾಯಕ ಸ್ಥಿತಿಯನ್ನೇ ಯೂನಸ್ ಪಾಷ ಬಳಸಿಕೊಂಡಿದ್ದಾನೆ.
ಸಾಂಬಾರ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಲು ಪ್ಲಾನ್
ನ. 8 ರಂದು ಬಾಲಕಿ ತಂದೆ-ತಾಯಿ ಇಬ್ಬರು ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದ ಬಾಲಕಿಯನ್ನು ಯೂನಸ್ ಮೀಟ್ ಮಾಡಿದ್ದಾನೆ. ನವೆಂಬರ್ 11 ರ ಮಧ್ಯರಾತ್ರಿ ಮನೆಗೆ ಬರುವುದಾಗಿ ತಿಳಿಸಿ, ಸಾಂಬಾರ್‌ನಲ್ಲಿ ನಿದ್ರೆ ಮಾತ್ರೆ ಹಾಕಿ ಅಜ್ಜಿಗೆ ನೀಡುವಂತೆ ಹೇಳಿದ್ದಾನೆ. ಆತ ತಂದುಕೊಟ್ಟ ನಿದ್ರೆ ಮಾತ್ರೆ ಪುಡಿಯನ್ನೇ ಬಾಲಕಿ ಸಾಂಬಾರ್‌ನಲ್ಲಿ ಬೆರೆಸಿ ಅಜ್ಜಿಗೆ ಊಟ ಬಡಿಸಿದ್ದಳು. ಅಜ್ಜಿ ನಿದ್ರೆ ಮಾಡಿದ ಬಳಿಕ ಯೂನಸ್ ಪಾಷ ಮನೆಗೆ ಬಂದಿದ್ದಾನೆ.
ಪೋಷಕರ ಮುಂದೆ ಬಾಲಕಿ ಬಾಯ್ಬಿಟ್ಟ ಸತ್ಯ
ಮಧ್ಯರಾತ್ರಿ ಮನೆಗೆ ಬಂದ ಯೂನಸ್ ಪಾಷ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರವಾಸ ಮುಗಿಸಿ ವಾಪಸ್ಸಾದ ಪೋಷಕರಿಗೆ ಮಗಳ ನಡವಳಿಕೆ ಕಂಡು ಅನುಮಾನ ಬಂದಿದೆ. ಬಳಿಕ ಬಾಲಕಿಯನ್ನು ಪೋಷಕರು ವಿಚಾರಿಸಿದ್ದು, ಸಂತ್ರಸ್ತ ಬಾಲಕಿ ತನ್ನ ಪೋಷಕರಿಗೆ ಘಟನೆ ವಿವರಿಸಿದ್ದಾಳೆ.
ಇದನ್ನೂ ಓದಿ: Accident: ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ! ಬಾಲಕಿ ಮೇಲೆ ಹರಿದ ಬಸ್
ಮದುವೆ ಆದರೆ ಮದುವೆ ಎಂದು ನಂಬಿಸಿ ಅತ್ಯಾಚಾರ ಅತ್ಯಾಚಾರ ಎಸಗಿದ ಪಾಪಿ ಯೂನಸ್ ಪಾಷ ಮುಸ್ಲಿಂ ಧರ್ಮಕ್ಕೆ ಮತಾಂತರ ಆದರೆ ತನ್ನನ್ನು ಮದುವೆ ಆಗುವುದಾಗಿ ಹೇಳಿದ್ದ ಎಂದು ಬಾಲಕಿ ಹೇಳಿದ್ದಾರೆ. ಘಟನೆ ಕುರಿತು ನವೆಂಬರ್ 19 ರಂದು ನಾಗಮಂಗಲ ಪಟ್ಟಣ ಠಾಣೆಗೆ ದೂರು ದಾಖಲಾಗಿದೆ. ಪೊಲೀಸರು ಆರೋಪಿ ಯೂನಸ್ ಪಾಷನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ