ನಗರದ ಪ್ರತಿಷ್ಠಿತ ಮಂತ್ರಿ ಮಾಲ್​ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ


Updated:August 10, 2018, 12:34 PM IST
ನಗರದ ಪ್ರತಿಷ್ಠಿತ ಮಂತ್ರಿ ಮಾಲ್​ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

Updated: August 10, 2018, 12:34 PM IST
ಮುನಿರಾಜು, ನ್ಯೂಸ್​ 18

ಬೆಂಗಳೂರು (ಆ.10): ನಗರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿದೆ.  ಪ್ರತಿಷ್ಠಿತ ಮಾಲ್​ಗಳಿಗೆ ಬರುವ ಮಹಿಳಾ ಗ್ರಾಹಕರ ಮೇಲೆ ಈ ರೀತಿ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ನಗರದ ಪ್ರತಿಷ್ಠಿತ ಮಾಲ್​ಗಳಲ್ಲಿ ಒಂದಾದ ಮಲ್ಲೇಶ್ವರಂನ ಮಂತ್ರಿಮಾಲ್​ನಲ್ಲಿಯೂ ಮಹಿಳಾ ಗ್ರಾಹಕರ ಮೇಲೆ ಈ ರೀರಿಯ ದೌರ್ಜನ್ಯ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಆ. 4ರಂದು ಮಾಲ್​ನ ಬಿಬಾ ಬಟ್ಟೆ ಅಂಗಡಿಗೆ ಖರೀದಿಗೆ ಹೋದ ಮಹಿಳೆಗೆ ಅಲ್ಲಿನ ಸೇಲ್ಸ್​ಮ್ಯಾನ್​ ಫೈಜಲ್​ ಎಂಬಾಂತ ದೌರ್ಜನ್ಯ ಎಸಗಿದ್ದಾನೆ. ಸ್ನೇಹಿತರ ದಿನದ ಸಲುವಾಗಿ ಬಟ್ಟೆ ಖರೀದಿಸಲು ಹೋದ ಮಹಿಳೆಗೆ ಬಟ್ಟೆ ಅಳತೆ ತೆಗೆದುಕೊಳ್ಳುವ ನೆಪದಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ಸೇಲ್ಸ್​ ಮ್ಯಾನ್​ ವರ್ತಿಸಿದ್ದಾನೆ.

ತಕ್ಷಣಕ್ಕೆ ಮಹಿಳೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಆರೋಪಿ ಫೈಜಲ್​ ಅನ್ನು ತಕ್ಷಣಕ್ಕೆ ಪೊಲೀಸರು ಬಂಧಿಸಿದ್ದಾರೆ.

 
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...