ಇಂದಿರಾ ಕ್ಯಾಂಟಿನ್​ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳದ ಆರೋಪ, ಪೊಲೀಸರಿಂದ ಆರೋಪಿಯ ಹುಡುಕಾಟ


Updated:January 6, 2018, 9:45 PM IST
ಇಂದಿರಾ ಕ್ಯಾಂಟಿನ್​ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳದ ಆರೋಪ, ಪೊಲೀಸರಿಂದ ಆರೋಪಿಯ ಹುಡುಕಾಟ
ಇಂದಿರಾ ಕ್ಯಾಂಟೀನ್(ಸಾಂದರ್ಭಿಕ ಚಿತ್ರ)
  • Share this:
- ಮುನಿರಾಜು, ನ್ಯೂಸ್​ 18 ಕನ್ನಡ

ಬೆಂಗಳೂರು(ಜ.06): ನಿತ್ಯ ಸಾವಿರಾರು ಜನರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್​ನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಅಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೊಸೂರು ರಸ್ತೆಯ ಬಂಡೆಪಾಳ್ಯ ಇಂದಿರಾ ಕ್ಯಾಂಟೀನ್​ನಲ್ಲಿ ಕ್ಯಾಷಿಯರ್ ಅಗಿದ್ದ ೩೦ ವರ್ಷದ ಮಹಿಳೆಗೆ ಅದೇ ಕ್ಯಾಂಟೀನ್​ನಲ್ಲಿ ಸೂಪರ್ ವೈಸರ್ ಅಗಿದ್ದ ಸತೀಶ್ ಎಂಬಾತ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾನೆಂಬ ಆರೋಪ ಕೇಳಿಬಂದಿದೆ.

ಮಹಿಳಾ ಕ್ಯಾಷಿಯರ್​ಗೆ ತನ್ನ ಜೊತೆ ಸಂಬಂಧ ಇಟ್ಟುಕೊಳ್ಳಬೇಕೆಂದು ಸತೀಶ್ ಒತ್ತಾಯ ಮಾಡುತ್ತಿದ್ದನಂತೆ. ಇಲ್ಲದಿದ್ದಲ್ಲಿ ನಿನ್ನ ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ಬೆದರಿಕೆಯೊಡ್ಡಿದ್ದ ಎಂದು ಮಹಿಳೆ ಅರೋಪಿಸಿದ್ದಾಳೆ. ಅಲ್ಲದೆ, ರಾತ್ರಿ ವೇಳೆ ಪೋನ್ ಮಾಡಿ ಅಸಭ್ಯವಾಗಿ ಮಾತಾನಾಡುತ್ತಿದ್ದು, ತನಗೆ ಸಹಕಾರ ನೀಡದಿದ್ದಲ್ಲಿ ಇಡೀ ಕುಟುಂಬವನ್ನೇ  ನಾಶ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದ ಎಂಬುದು ನೊಂದ ಮಹಿಳೆಯ ಅರೋಪ.

ಆರೋಪಿ ಸ್ಥಾನದಲ್ಲಿರುವ ಸತೀಶ್ ನಿವೃತ್ತ ಯೋಧನಾಗಿದ್ದು, ಕಳೆದ ೨೦ ದಿನಗಳ ಹಿಂದಷ್ಟೇ ಮಂಗಮ್ಮನಪಾಳ್ಯ ಇಂದಿರಾ ಕ್ಯಾಂಟೀನ್​ನಲ್ಲಿ ಕೆಲಸಕ್ಕೆ ಸೇರಿದ್ದರಂತೆ. ಅಲ್ಲದೆ, ಕನ್ನಡಿಗರಿಗೆ ಉನ್ನತ ಹುದ್ದೆಗಳು ನೀಡಬಾರದು ಎಂದು ಕ್ಯಾಷಿಯರ್​ಗೆ ನಿಂದಿಸಿದ್ದನಂತೆ. ಇಂದಿರಾ ಕ್ಯಾಂಟೀನ್ ಸೂಪರ್ ವೈಸರ್ ಕಿರುಕುಳದ ಬಗ್ಗೆ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರೋಪಿ ಸತೀಶ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

 

 

  
First published:January 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading