ಮೈಸೂರು ಬಿಷಪ್​​​ ಕೇಸ್​​: ಲೈಂಗಿಕ ದೌರ್ಜನ್ಯ ಆರೋಪ ಬೆನ್ನಲೇ ಪ್ರಾಣ ಬೆದರಿಕೆ ಇದೆ ಎಂದು ಯುವತಿ ದೂರು

ಬಿಷಪ್​ ವಿಲಿಯಮ್​​ ಕಳೆದ ಎರಡು ವರ್ಷಗಳಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಚರ್ಚ್​ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಆರೋಪಿಸಿದ್ದಳು. ಈ ಬೆನ್ನಲ್ಲೇ ಅಸಂಖ್ಯಾತ ಕ್ರೈಸ್ತ ಜನ ಸಮುದಾಯದವರು ಬಿಷಪ್ ವಿಲಿಯಂ ಮನೆ ಮುಂದೆ ಪ್ರತಿಭಟನೆಯೂ ಮಾಡಿದರು.

news18india
Updated:November 6, 2019, 1:28 PM IST
ಮೈಸೂರು ಬಿಷಪ್​​​ ಕೇಸ್​​: ಲೈಂಗಿಕ ದೌರ್ಜನ್ಯ ಆರೋಪ ಬೆನ್ನಲೇ ಪ್ರಾಣ ಬೆದರಿಕೆ ಇದೆ ಎಂದು ಯುವತಿ ದೂರು
ಮೈಸೂರು ಬಿಷಪ್ ಕೆ.ಎಂ. ವಿಲಿಯಮ್.
  • Share this:
ಬೆಂಗಳೂರು(ನ.06): ಮೈಸೂರು ಪ್ರಾಂತ್ಯದ ಬಿಷಪ್ ಕೆ.ಎ. ವಿಲಿಯಮ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಿಷಪ್​​ ವಿರುದ್ಧ ಆರೋಪಿಸಿದ್ದ ಯುವತಿ, ಈಗ ತನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದೆ ಎಂದು ಲಷ್ಕರ್‌ ಮೋಹಲ್ಲಾ ಠಾಣೆಗೆ ದೂರು ನೀಡಿದ್ದಾಳೆ.

"ನಾನು ಕೆಲಸಕ್ಕೆ ಹೋಗುವ ವೇಳೆ ಬಿಷಪ್ ವಿಲಿಯಮ್​​ ಬೆಂಬಲಿಗರು ಕಿಡ್ನಾಪ್​​ ಮಾಡಿದರು. ಅಲ್ಲದೇ ನನ್ನ ಮನೆಯವರ ವಿಡಿಯೋ ತೋರಿಸಿ ಜೀವ ಬೆದರಿಕೆಯೂ ಹಾಕಿದರು. ನನಗೆ, ನನ್ನ ಕುಟುಂಬಕ್ಕೆ ಬಿಷಪ್​​ರಿಂದ ಪ್ರಾಣ ಬೆದರಿಕೆ ಇದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಬರೆದಿದ್ದಾಳೆ. ಸಾಕ್ಷಿಯಾಗಿ ಬೆದರಿಕೆ ಹಾಕಿದ ವಿಡಿಯೋ ಸಮೇತ ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾಳೆ ಎನ್ನಲಾಗಿದೆ.

ಇನ್ನೊಂದೆಡೆ ಘಟನೆ ಸಂಬಂಧ ಮೈಸೂರಿನ ಪತ್ರಕರ್ತರೊಬ್ಬರಿಗೆ ಯುವತಿ ಮಾಹಿತಿ ನೀಡಿದ್ದಾಳೆ. ಇದೀಗ ಯುವತಿ ಮಾಹಿತಿ ಸಿಕ್ಕಿದ ಮೇಲೆ ಪತ್ರಕರ್ತನೂ ನಾಪತ್ತೆಯಾಗಿದ್ದಾನೆ. ಇದೊಂದು ಗಂಭೀರ ಕೇಸ್​ ಆಗಿದೆ ಎಂದು ಕ್ರೈಸ್ತ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಪ್ರಾಂತ್ಯದ ಬಿಷಪ್​ ಕೆ.ಎಂ. ವಿಲಿಯಂ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ರಣರಂಗವಾದ ಪಾದ್ರಿ ಮನೆ, ವ್ಯಾಟಿಕನ್ ಸಿಟಿಗೆ ತಲುಪಿದ ದೂರು

ಈ ಮಧ್ಯೆ ಬಿಷಪ್​ ಕೆ.ಎ. ವಿಲಿಯಮ್​​ ವಿರುದ್ಧ ಭೂಕಬಳಿಕೆ ಆರೋಪವೂ ಕೇಳಿ ಬಂದಿದೆ. ಕೋಟಿ ಕೋಟಿ ಹಣ ಪಡೆದು ಭೂಮಿ ರಿಜಿಸ್ಟರ್​ ಮಾಡದೆ ವಂಚನೆ ಮಾಡಿದ್ದಾರೆ ಎಂದು ಮೈಸೂರಿನ ವೃದ್ಧ ದಂಪತಿ ಆರೋಪಿಸಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಕೇತನಹಳ್ಳಿ ಬಳಿ 200ಕ್ಕೂ ಹೆಚ್ಚು ಎಕರೆ ಭೂಮಿ ವಿಚಾರದಲ್ಲಿ ನನಗೆ ಮೋಸವಾಗಿದೆ ಎಂದು ಬಿಷಪ್​ ಸೇರಿ ಹಲವರ ವಿರುದ್ಧ ವೃದ್ಧ ದಂಪತಿ ದೂರು ದಾಖಲಿಸಿದ್ದಾರೆ.

ಬಿಷಪ್​ ವಿಲಿಯಮ್​​ ಕಳೆದ ಎರಡು ವರ್ಷಗಳಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಚರ್ಚ್​ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಆರೋಪಿಸಿದ್ದಳು. ಈ ಬೆನ್ನಲ್ಲೇ ಅಸಂಖ್ಯಾತ ಕ್ರೈಸ್ತ ಜನ ಸಮುದಾಯದವರು ಬಿಷಪ್ ವಿಲಿಯಂ ಮನೆ ಮುಂದೆ ಪ್ರತಿಭಟನೆಯೂ ಮಾಡಿದರು.

ನಂತರ ಬಿಷಪ್​​ ಅಪರಾಧ ಚಟುವಟಿಕಗಳಲ್ಲಿ ಭಾಗಿಯಾಗಿದ್ದಾರೆ. ಹಣದ ದುರುಪಯೋಗ ಮತ್ತು ಲೈಂಗಿಕ ದುರ್ವರ್ತನೆ ಆರೋಪ ಕೇಳಿ ಬಂದಿದೆ ಎಂದು ಬಿಷಪ್​ ವಿರುದ್ಧ ಮೈಸೂರು ಧರ್ಮಪ್ರಾಂತ್ಯದ 37 ಧರ್ಮಗುರುಗಳು ನೇರ ಪೋಪ್ ಪ್ರಾನ್ಸಿಸ್​​ಗೆ ಪತ್ರ ಬರೆದರು. ಜತೆಗೆ ಬಿಷಪ್ ವಿರುದ್ಧ ಗುಂಪುಗಾರಿಕೆ, ಸ್ವಜನ ಪಕ್ಷಪಾತ ಮತ್ತು ಮದುವೆಯಾಗಿರುವ ಆರೋಪಗಳಿವೆ. ಹೀಗಾಗಿ ಕೂಡಲೇ ಮಧ್ಯಪ್ರವೇಶ ಮಾಡಬೇಕೆಂದು ಪೋಪ್ ಪ್ರಾನ್ಸಿಸ್​ ಮನವಿಯೂ ಮಾಡಿದ್ದರು.ಇದನ್ನೂ ಓದಿ: ಟ್ರಂಪ್‌ ವಲಸೆ ನೀತಿಗೆ ತತ್ತರಿಸಿದ ಭಾರತದ ಐಟಿ ಕಂಪನಿಗಳು: ತಿರಸ್ಕೃತ ಎಚ್‌-1ಬಿ ವೀಸಾಗಳ ಪ್ರಮಾಣ ಏರಿಕೆ

ಈ ಬೆನ್ನಲ್ಲೇ ನ್ಯೂಸ್​ 18 ಕನ್ನಡಕ್ಕೆ ಪ್ರತಿಕ್ರಿಯಿಸಿದ ಬಿಷಪ್​ ಕೆ.ಎಂ. ವಿಲಿಯಂ, "ಈ ಆರೋಪಕ್ಕೂ ನನಗೂ ಸಂಬಂಧವಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಮಹಿಳೆ ಯಾರು ಎಂದೇ ನನಗೆ ಗೊತ್ತಿಲ್ಲ. ಅಲ್ಲದೆ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ" ಎಂದು ತಿಳಿಸಿದ್ದರು.
-------------
First published:November 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ