ಬೆಂಗಳೂರಲ್ಲಿ ಡ್ಯಾನ್ಸರ್​ಗಳಿಗೆ ಸ್ಟೇಜ್ ಶೋ ಆಸೆ ತೋರಿಸಿ ವೇಶ್ಯಾವಾಟಿಕೆಗೆ ದೂಡುವ ಜಾಲ ಪತ್ತೆ

ಆರೋಪಿಗಳಿಂದ ದೆಹಲಿ ಮೂಲದ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಮೂರು ದಿನಗಳ ಹಿಂದೆ ಪಂಜಾಬ್​​​ ನಿಂದ ನಗರಕ್ಕೆ ಬಂದ ನೃತ್ಯಗಾರ್ತಿಯನ್ನು ಅಕ್ರಮವಾಗಿ ಮಾನವ ಸಾಗಾಣಿಕೆಗೆ ಯತ್ನಿಸಿದ್ದಾಗ ವೇಶ್ಯಾವಾಟಿಕೆ ಜಾಲದ ಸದಸ್ಯೆ ಸಿಕ್ಕಿಬಿದ್ದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ

news18-kannada
Updated:February 14, 2020, 4:28 PM IST
ಬೆಂಗಳೂರಲ್ಲಿ ಡ್ಯಾನ್ಸರ್​ಗಳಿಗೆ ಸ್ಟೇಜ್ ಶೋ ಆಸೆ ತೋರಿಸಿ ವೇಶ್ಯಾವಾಟಿಕೆಗೆ ದೂಡುವ ಜಾಲ ಪತ್ತೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಫೆ.14) : ಸ್ಟೇಜ್ ಕಾರ್ಯಕ್ರಮದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಹೊರ ರಾಜ್ಯದ ನೃತ್ಯಗಾರ್ತಿಯನ್ನು ನಂಬಿಸಿ ವೇಶ್ಯಾವಾಟಿಕೆ ದಂಧೆಗೆ ದೂಡಲು ಯತ್ನಿಸಿದ್ದ ಮಹಿಳೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್ ಮೂಲದ ಪ್ರೀತಿ ಬಂಧಿತ ಆರೋಪಿಯಾಗಿದ್ದು, ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಾದ ಸೋನಿಯಾ ಮತ್ತು ಗುರ್‌ಮಿತ್ ಸಿಂಗ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳಿಂದ ದೆಹಲಿ ಮೂಲದ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಮೂರು ದಿನಗಳ ಹಿಂದೆ ಪಂಜಾಬ್​​​ ನಿಂದ ನಗರಕ್ಕೆ ಬಂದ ನೃತ್ಯಗಾರ್ತಿಯನ್ನು ಅಕ್ರಮವಾಗಿ ಮಾನವ ಸಾಗಾಣಿಕೆಗೆ ಯತ್ನಿಸಿದ್ದಾಗ ವೇಶ್ಯಾವಾಟಿಕೆ ಜಾಲದ ಸದಸ್ಯೆ ಸಿಕ್ಕಿಬಿದ್ದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಪ್ರೀತಿ, ಹಲವು ದಿನಗಳಿಂದ  ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಳು. ಇತ್ತೀಚೆಗೆ ಸ್ಟೇಜ್ ಕಾರ್ಯಕ್ರಮದಲ್ಲಿ ಸಂತ್ರಸ್ತೆಗೆ ಸೋನಿಯಾ ಪರಿಚಯವಾಗಿದೆ. ಆಗ ಸೋನಿಯಾ, ಸಂತ್ರಸ್ತೆಗೆ ಬೆಂಗಳೂರಿನಲ್ಲಿ ನಿಮಗೆ ನೃತ್ಯ ಪ್ರದರ್ಶನಕ್ಕೆ ಅವಕಾಶ ಕೊಡಿಸುತ್ತೇನೆ. ಈ ಸ್ಟೇಜ್ ಕಾರ್ಯಕ್ರಮಕ್ಕೆ ನಿಮಗೆ 40 ಸಾವಿರ ಸಂಭಾವನೆ ಸಿಗಲಿದೆ ಎಂದು ಹೇಳಿ ನಂಬಿಸಿದ್ದಾರೆ. ಈ ಮಾತು ನಂಬಿದ ನೃತ್ಯಗಾರ್ತಿ, ಬೆಂಗಳೂರಿಗೆ ತೆರಳಲು ಒಪ್ಪಿದ್ದಳು. ಆನಂತರ ಆರೋಪಿ ಸೋನಿಯಾ ಪಂಜಾಬ್‌ನಲ್ಲೇ ತಾನು ಇದ್ದ ಸ್ಥಳಕ್ಕೆ ಸಂತ್ರಸ್ತೆಯನ್ನು ಕರೆಸಿಕೊಂಡಿದ್ದರು. ಫೆ.11 ರಂದು ತನ್ನ ಕಡೆಯ ಯುವತಿಯನ್ನು ಜತೆ ಮಾಡಿ ಸಂತ್ರಸ್ತೆಯನ್ನು ಬೆಂಗಳೂರಿಗೆ ಕಳುಹಿಸಿದ್ದರು.

ನಿಮ್ಮನ್ನು ಬೆಂಗಳೂರಿನಲ್ಲಿ ಪ್ರೀತಿ ಭೇಟಿ ಮಾಡುತ್ತಾರೆ ಎಂದು ಹೇಳಿ ಸೋನಿಯಾ, ನೃತ್ಯಗಾರ್ತಿ ಸೇರಿ ಇಬ್ಬರನ್ನು ಚಂಡಿಘಡ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಿಸಿ ಬೆಂಗಳೂರಿಗೆ ಕಳುಹಿಸಿದ್ದಳು. ಈ ಪ್ರಯಾಣದ ಸಂದರ್ಭದಲ್ಲಿ ನೃತ್ಯಗಾರ್ತಿ, ತನ್ನೊಂದಿಗೆ ಬಂದಿದ್ದ ಸೋನಿಯಾ ಕಡೆಯ ಯುವತಿಯನ್ನು ಕೆಲಸದ ಬಗ್ಗೆ ವಿಚಾರಿಸಿದ್ದಳು. ಆಗ ನೃತ್ಯ ಪ್ರದರ್ಶನ ಬಳಿಕ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಬೇಕು ಎಂದಿದ್ದಳು. ಈ ಮಾತು ಕೇಳಿ ಗಾಬರಿಗೊಂಡ ನೃತ್ಯಗಾರ್ತಿ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ಭದ್ರತಾ ಸಿಬ್ಬಂದಿಗೆ ರಕ್ಷಣೆಗೆ ಮೊರೆ ಹೋಗಿದ್ದಳು.

ಇದನ್ನೂಓದಿ :  ಸ್ಪಾ ಹೆಸರಿನಲ್ಲಿ ಅಕ್ರಮ ದಂಧೆ; ಬೆಂಗಳೂರಿನಲ್ಲಿ ಮತ್ತೊಂದು ಹೈಟೆಕ್ ವೇಶ್ಯಾವಾಟಿಕೆ ಬಯಲು

ಸಂತ್ರಸ್ತೆಯ ನೆರವಿಗೆ ಧಾವಿಸಿದ ಭದ್ರತಾಧಿಕಾರಿಗಳು, ಆಕೆ ನೀಡಿದ ಮಾಹಿತಿ ಮೇರೆಗೆ ಪ್ರೀತಿಯನ್ನು ವಶಕ್ಕೆ ಪಡೆದು ಕೆಐಎ ಪೊಲೀಸರಿಗೊಪ್ಪಿಸಿದ್ದಾರೆ. ಬಳಿಕ ಕೆಐಎ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ ಮೂಲದ ಸಂತ್ರಸ್ತೆಗೆ ವಿವಾಹವಾಗಿದ್ದು, ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಆದರೆ ಆಕೆಯ ಪತಿಗೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದರಿಂದ ನೃತ್ಯ ಪ್ರದರ್ಶನ ನೀಡಿ ಸಂಪಾದಿಸಿದ ಹಣದಲ್ಲೇ ಕುಟುಂಬ ನಿರ್ವಹಣೆ ಮಾಡಬೇಕಿತ್ತು. ಹೀಗಾಗಿ ಹಣ ಸಂಪಾದಿಸುವ ದೃಷ್ಟಿಯಿಂದ ಬೆಂಗಳೂರಿಗೆ ಬರಲು ಸಂತ್ರಸ್ತೆ ಬಂದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

 
First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ